Home ಅಪರಾಧ ಕೆಎಎಸ್ ಅಧಿಕಾರಿ ಸುಧಾ ನಿವಾಸದಿಂದ 3.7 ಕೆಜಿ ಚಿನ್ನ, 10.5 ಕೆಜಿ ಬೆಳ್ಳಿ ವಸ್ತು ವಶ:...

ಕೆಎಎಸ್ ಅಧಿಕಾರಿ ಸುಧಾ ನಿವಾಸದಿಂದ 3.7 ಕೆಜಿ ಚಿನ್ನ, 10.5 ಕೆಜಿ ಬೆಳ್ಳಿ ವಸ್ತು ವಶ: ಚಂದ್ರಶೇಖರ್

79
0

ಬೆಂಗಳೂರು:

ಭ್ರಷ್ಟಾಚಾರ ನಿಗ್ರಹ ದಳದಿಂದ ದಾಳಿಗೊಳಗಾಗಿರುವ ಕೆಎಎಸ್ ಅಧಿಕಾರಿ ಸುಧಾ ಅವರ ನಿವಾಸದಿಂದ 3.7 ಕೆಜಿ ಚಿನ್ನ ಹಾಗೂ 10.5 ಕೆಜಿ ಬೆಳ್ಳಿ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಎಸಿಬಿ ಐಜಿಪಿ ಚಂದ್ರಶೇಖರ್ ಹೇಳಿದ್ದಾರೆ‌.

ಇತ್ತೀಚೆಗೆ ಸುಧಾ ನಿವಾಸದ ಮೇಲೆ ಎಸಿಬಿ ದಾಳಿ ಮಾಡಿದ ಹಿನ್ನಲೆಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರು, ಉಡುಪಿ, ಮೈಸೂರು ಸೇರಿ ಒಟ್ಟು ಏಳು ಸ್ಥಳಗಳಲ್ಲಿ ದಾಳಿ ಮಾಡಲಾಗಿದ್ದು, ಈ ವೇಳೆ 36.89 ಲಕ್ಷ ನಗದು ವಶಪಡಿಸಿಕೊಳ್ಳಲಾಗಿದೆ ಎಂದರು.

Screenshot 814

ಬ್ಯಾಂಕ್ ಖಾತೆಯಲ್ಲಿ 3.5‌ಕೋಟಿ ರೂ. ಠೇವಣಿ ಹಾಗೂ 20ಕ್ಕೂ ಹೆಚ್ಚು ಆಸ್ತಿಗೆ ಸಂಬಂಧಿಸಿದ ದಾಖಲೆಗಳು ಪತ್ತೆಯಾಗಿವೆ. ಸ್ಥಿರಾಸ್ತಿ ಕ್ರಯ ಪತ್ರಗಳು, ಜಿಪಿಎ ಕರಾರುಗಳು, ಖರೀದಿ ಒಪ್ಪಂದ ಸೇರಿದಂತೆ 200 ಆಸ್ತಿ ಪತ್ರಗಳು ಪತ್ತೆಯಾಗಿವೆ ಎಂದು ಮಾಹಿತಿ ನೀಡಿದರು.

Screenshot 815

ಇದುವರೆಗೆ ಸುಧಾ ಅವರಿಗೆ ನೋಟಿಸ್ ನೀಡಿಲ್ಲ. ದಾಖಲೆಗಳಿದ್ದರೇ ಸಲ್ಲಿಸುವಂತೆ ಸೂಚನೆ ನೀಡಲಾಗಿದೆ. ಸುಧಾ ಅವರ ಹೊರತಾಗಿ‌ ಅವರ ಮನೆ ಮೇಲೆ ದಾಳಿ ಮಾಡಲಾಗಿದ್ದು, ದಾಳಿಗೆ ತುತ್ತಾದವರನ್ನು ಬೇನಾಮಿಗಳು ಎಂದು ಪರಿಗಣಿಸಲಾಗಿದೆ.

50 ಬ್ಯಾಂಕ್ ಖಾತೆಗಳು ಪತ್ತೆಯಾಗಿದ್ದು, 50 ಚೆಕ್ ಲೀಫ್‌ಗಳು ದೊರೆತಿವೆ ಎಂದು ತಿಳಿಸಿದರು.

LEAVE A REPLY

Please enter your comment!
Please enter your name here