ಕೃಷಿ ಕ್ಷೇತ್ರದಲ್ಲಿ ಇದೀಗ ಕಾರ್ಮಿಕರ ಕೊರತೆ ಎದುರಾಗಿದ್ದರೂ ಹವಾಮಾನ ವೈಫರೀತ್ಯ ಮತ್ತು ವನ್ಯ ಜೀವಿಗಳ ಸಂಘರ್ಷದಿಂದಾಗಿ ಕೊಡಗಿನಾದ್ಯಂತ ಭತ್ತದ ಬೇಸಾಯ ಹಿಂದೆ ಬಿದಿದ್ದೆ. ಕೊಡಗು: ಕೃಷಿ ಕ್ಷೇತ್ರದಲ್ಲಿ ಇದೀಗ ಕಾರ್ಮಿಕರ ಕೊರತೆ ಎದುರಾಗಿದ್ದರೂ ಹವಾಮಾನ ವೈಫರೀತ್ಯ ಮತ್ತು ವನ್ಯ ಜೀವಿಗಳ ಸಂಘರ್ಷದಿಂದಾಗಿ ಕೊಡಗಿನಾದ್ಯಂತ ಭತ್ತದ ಬೇಸಾಯ ಹಿಂದೆ ಬಿದಿದ್ದೆ. ಕೃಷಿ ಭೂಮಿ ಕಡಿಮೆಯಾಗಿರುವುದು ಹಾಗೂ ಇತರ ಕ್ಷೇತ್ರಗಳಲ್ಲಿ ಬೇಡಿಕೆಯಿಂದಾಗಿ ಭತ್ತದ ಕೊಯ್ಲು ಸಮಯದಲ್ಲಿ ಹೊರಗಿನಿಂದ ಕಾರ್ಮಿಕರು ಜಿಲ್ಲೆಗೆ ವಲಸೆ ಬರುವವರ ಸಂಖ್ಯೆಯೂ ಕ್ಷೀಣಿಸಿದೆ.
ಕಾರ್ಮಿಕರ ತೀವ್ರ ಕೊರತೆಯಿಂದಾಗಿ, ಸಾಂಪ್ರದಾಯಿಕ ರೈತರು ಈಗ ಭತ್ತ ಕಟಾವು ಯಂತ್ರಗಳ ಸಹಾಯವನ್ನು ಪಡೆಯುತ್ತಿದ್ದಾರೆ, ಅದು ದುಬಾರಿಯಾಗಿದೆ. ಕಾರ್ಮಿಕರ ಕೊರತೆಯಿಂದ ಭತ್ತ ಕಟಾವು ಯಂತ್ರಗಳನ್ನು ಗಂಟೆಗೆ 3,000 ರೂ.ನಂತೆ ಬಾಡಿಗೆಗೆ ಪಡೆಯಬೇಕಾದ ಅನಿವಾರ್ಯತೆ ಎದುರಾಗಿದೆ ಎಂದು ಜಿಲ್ಲೆಯ ಹೆಗ್ಗುಳ ಗ್ರಾಮದ ರೈತ ಹೂವಯ್ಯ ತಿಳಿಸಿದರು. ಒಂದು ಎಕರೆ ಭತ್ತ ಕಟಾವು ಮಾಡಲು ಕಟಾವು ಯಂತ್ರಗಳಿಗೆ ಕನಿಷ್ಠ 2.5 ಗಂಟೆಗಳ ಕಾಲಾವಕಾಶ ಬೇಕಾಗುತ್ತದೆ ಎಂದು ಅವರು ವಿವರಿಸಿದರು. ಕೇವಲ ಒಂದು ಎಕರೆ ಭತ್ತ ಕೊಯ್ಲು ಮಾಡಲು, ಯಂತ್ರಗಳಿಗೆ ಕೇವಲ 7, 500 ರೂಪಾಯಿಗಳನ್ನು ಖರ್ಚು ಮಾಡುತ್ತೇವೆ ಎಂದು ಅವರು ಹೇಳಿದರು.
ಯಂತ್ರ ಬಳಸಿ ಭತ್ತ ಕಟಾವು ಮಾಡುವ ವಿಧಾನದಿಂದ ಸಮಯ ಉಳಿತಾಯವಾಗುತ್ತಿದೆ. ಇದನ್ನು ಸುಲಭದ ವಿಧಾನವಾಗಿ ರೈತರು ನೋಡುತ್ತಿದ್ದಾರೆ. ಕೂಲಿ ಕಾರ್ಮಿಕರನ್ನು ಕೆಲಸಕ್ಕೆ ಕರೆದುಕೊಂಡರೆ ದಿನಕ್ಕೆ ರೂ.500 ರಿಂದ ರೂ.600 ಪಾವತಿಸಬೇಕಾಗುತ್ತದೆ. ಅಲ್ಲದೇ, ಕಟಾವು ಮಾಡಿದ್ದ ಭತ್ತದ ಕಡ್ಡಿಗಳನ್ನು ಸಹ ಕಾರ್ಮಿಕರ ಜಾನುವಾರುಗಳಿಗಾಗಿ ತೆಗೆದುಕೊಂಡು ಹೋಗುತ್ತಾರೆ. ಇಲ್ಲದಿದ್ದರೆ ಜಾನುವಾರುಗಳ ಆಹಾರಕ್ಕಾಗಿ ಭತ್ತದ ಒಣಹುಲ್ಲಿನ ಖರೀದಿಗೆ ಹೆಚ್ಚುವರಿ ಕಾಸು ಖರ್ಚು ಮಾಡಬೇಕಾಗುತ್ತದೆ ಎಂದು ಅವರು ವಿವರಿಸಿದರು.
ಆದಾಗ್ಯೂ, ಯಂತ್ರಗಳ ಮೂಲಕ ಭತ್ತ ಕಟಾವು ಮಾಡುವುದರಿಂದ ಜಾನುವಾರಗಳ ಆಹಾರಕ್ಕೆ ಯೋಗ್ಯವಾಗುವುದಿಲ್ಲ, ಭತ್ತದ ಪೈರುಗಳನ್ನು ಯಂತ್ರ ತುಂಡು ತುಂಡಾಗಿ ಮಾಡುತ್ತದೆ. ಒಂದು ಎಕರೆ ಜಮೀನಿನಲ್ಲಿ ಭತ್ತ ಬೆಳೆಯಲು 25 ಸಾವಿರ ರೂ.ಗೂ ಅಧಿಕ ಖರ್ಚು ಮಾಡುತ್ತಾರೆ. ಸಾಂಪ್ರದಾಯಿಕ ಕಟಾವು ಪ್ರಕ್ರಿಯೆಯು ಎಕರೆಗೆ 5, 000 ರೂ.ಗಿಂತ ಕಡಿಮೆ ಖರ್ಚಾಗುತ್ತದೆ ಮತ್ತು ಜಾನುವಾರುಗಳ ಆಹಾರಕ್ಕಾಗಿ ಅಧಿಕ ವೆಚ್ಚ ತಪ್ಪುತ್ತದೆ. ಆದರೆ ಕಾರ್ಮಿಕರ ಕೊರತೆಯಿಂದಾಗಿ ಅನೀವಾರ್ಯವಾಗಿ ಯಂತ್ರದ ಮೂಲಕ ಕಟಾವು ಮಾಡುವ ವಿಧಾನವನ್ನು ಅನುಸರಿಸುವಂತಾಗಿದೆ.
ಭತ್ತದ ಕಟಾವು ಅವಧಿಯಲ್ಲಿ ಎನ್‌ಆರ್‌ಇಜಿಎ ಮೂಲಕ ಕಾರ್ಮಿಕರನ್ನು ಒದಗಿಸಲು ಸರ್ಕಾರ ಬೆಂಬಲ ನೀಡಬೇಕು. ಭತ್ತದ ಕಟಾವಿಗೆ ಎನ್‌ಆರ್‌ಇಜಿಎ ಜಾರಿಗೊಳಿಸಿದರೆ, ಅದು ಉತ್ಪಾದನೆಯನ್ನು ಹೆಚ್ಚಿಸುತ್ತದೆ. ಕೈಬಿಟ್ಟ ಗದ್ದೆಗಳು ಮತ್ತೆ ಅರಳುತ್ತವೆ ಮತ್ತು ಇದರಿಂದ ಜಿಡಿಪಿ ಕೂಡ ಹೆಚ್ಚಾಗುತ್ತದೆ. ಭತ್ತ ಮತ್ತು ರಾಗಿ ರೈತರನ್ನು ರಕ್ಷಿಸುವ ಅಗತ್ಯವಿದೆ ಎಂದು ಅವರು ಹೇಳಿದರು.