Home Uncategorized ಕೊಪ್ಪಳ ಗವಿಸಿದ್ದೇಶ್ವರ ಜಾತ್ರೆಗೆ 22 ಲಕ್ಷ ಜೋಳದ ರೊಟ್ಟಿ

ಕೊಪ್ಪಳ ಗವಿಸಿದ್ದೇಶ್ವರ ಜಾತ್ರೆಗೆ 22 ಲಕ್ಷ ಜೋಳದ ರೊಟ್ಟಿ

18
0

ದಕ್ಷಿಣ ಭಾರತದ ಕುಂಭಮೇಳ ಖ್ಯಾತಿಯ ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವ ಭಾನುವಾರದಿಂದ ಆರಂಭವಾಗಿದ್ದು, ಜಾತ್ರೆಯಲ್ಲಿ ಪಾಲ್ಗೊಳ್ಳಲು ಭಕ್ತರ ಸಾಗರವೇ ಹರಿದು ಬರುತ್ತಿದೆ. ಕೊಪ್ಪಳ: ದಕ್ಷಿಣ ಭಾರತದ ಕುಂಭಮೇಳ ಖ್ಯಾತಿಯ ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವ ಭಾನುವಾರದಿಂದ ಆರಂಭವಾಗಿದ್ದು, ಜಾತ್ರೆಯಲ್ಲಿ ಪಾಲ್ಗೊಳ್ಳಲು ಭಕ್ತರ ಸಾಗರವೇ ಹರಿದು ಬರುತ್ತಿದೆ.

ಮುಂದಿನ 15 ದಿನಗಳಲ್ಲಿ ಜಿಲ್ಲೆಗೆ 10-12 ಲಕ್ಷ ಭಕ್ತರು ಭೇಟಿ ನೀಡುವ ನಿರೀಕ್ಷೆಗಳಿದ್ದು, ದಾಸೋಹದ ಅಡುಗೆಗಾಗಿ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಈಗಾಗಲೇ 22 ಲಕ್ಷ ಜೋಳದ ರೊಟ್ಟಿಗಳು ಸಿದ್ಧಗೊಂಡಿವೆ ಎಂದು ತಿಳಿದುಬಂದಿದೆ.

ಶತಮಾನಗಳಿಂದಲೂ, ಮಠಗಳ ಸುತ್ತಲಿನ ಗ್ರಾಮಸ್ಥರು ಜಾತ್ರೆಗೂ ಮುಂಚೆಯೇ ಜೋಳದ ಹಿಟ್ಟಿನಿಂದ ರೊಟ್ಟಿಗಳನ್ನು ತಯಾರಿಸಲು ಪ್ರಾರಂಭಿಸುತ್ತಾರೆ. ಈಗಾಗಲೇ ಜೋಳದ ರೊಟ್ಟಿಗಳಿದ್ದ ಟ್ರಕ್ ಗಳು ಮಠದ ಆವರಣಕ್ಕೆ ಬಂದಿದ್ದು, ರೊಟ್ಟಿಗಳ ಸಂಗ್ರಹಿಸಲು ಮಠದ ಬಳಿ ದೊಡ್ಡ ಪಂಡಾಲ್ ನ್ನು ಹಾಕಲಾಗಿದೆ. ಭದ್ರತೆ ಗಾಗಿ ಸ್ಥಳದಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು, ಸ್ವಚ್ಛತೆಗಳನ್ನು ಆರೋಗ್ಯ ಇಲಾಖೆಯ ಅಧಿಕಾರಿಗಳಉ ಮೇಲ್ವಿಚಾರಣೆ ಮಾಡುತ್ತಿದ್ದಾರೆ.

ಹಲವು ವರ್ಷಗಳಿಂದಲೂ ಮಠಧೀಶಕರು ಬಡವರಿಗೆ ಊಟ ಹಾಗೂ ಶಿಕ್ಷಣ ನೀಡುವ ಕೆಲಸ ಮಾಡುತ್ತಿದ್ದಾರೆ. ಹೆಚ್ಚಿನ ಸಂಖ್ಯೆಯ ಭಕ್ತರ ಭಾಗವಹಿಸುವಿಕೆ ಮಠದ ಜಾತ್ಯತೀತ ದೃಷ್ಟಿಕೋನಕ್ಕೆ ಕಾರಣವಾಗಿದೆ. ಯೋಗ ಗುರು ಬಾಬಾ ರಾಮ್‌ದೇವ್ ಇಲ್ಲಿಗೆ ಬಂದಾಗ ಬೃಹತ್ ಸಮಾವೇಶವನ್ನು ನೋಡಿ ಅದನ್ನು ದಕ್ಷಿಣದ ಕುಂಭ ಎಂದು ಕರೆದಿದ್ದರು ಎಂದು ಕೊಪ್ಪಳದ ಗವಿಸಿದ್ದೇಶ್ವರ ಪದವಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಅರುಣ್ ಕುಮಾರ್ ಸ್ಮರಿಸಿದರು.

ಜೋಳದ ರೊಟ್ಟಿಗಳಷ್ಟೇ ಅಲ್ಲದೆ, ಅನೇಕ ಮನೆಗಳು ಮತ್ತು ಸಂಸ್ಥೆಗಳು ‘ಮಾಲೆಡಿ’ ಅಥವಾ ‘ಮಾಡ್ಲಿ’ ಎಂಬ ಸಿಹಿ ಖಾದ್ಯವನ್ನು ದೊಡ್ಡ ಪ್ರಮಾಣದಲ್ಲಿ ತಯಾರಿಸುವ ಜವಾಬ್ದಾರಿಯನ್ನು ತೆಗೆದುಕೊಂಡಿಜೆ ಎಂದು ಕುಮಾರ್ ಅವರು ಹೇಳಿದ್ದಾರೆ.

“ಸ್ನೇಹಿತರ ಗುಂಪು ಮತ್ತು ಕೆಲವು ಕುಟುಂಬಗಳು ಮುಂದಿನ ಎರಡು ವಾರಗಳಲ್ಲಿ 2.5 ಟನ್ ತೂಕದ ಖಾದ್ಯವನ್ನು ದಾನ ಮಾಡುವುದಾಗಿ ಭರವಸೆ ನೀಡಿವೆ. ವಾರ್ಷಿಕ ರಥೋತ್ಸವದ ಒಂದು ದಿನ ಮುಂಚಿತವಾಗಿ ಮಠದ ಅಡುಗೆಮನೆಯಲ್ಲಿ ಸುಮಾರು 275 ಕ್ವಿಂಟಾಲ್ ಅಕ್ಕಿಯನ್ನು ಸಿದ್ಧವಿರಿಸಲಾಗಿದೆ. ಒಂದು ರೀತಿಯಲ್ಲಿ ಇದು ಜನರ ಜಾತ್ರೆಯಾಗಿದೆ ಎಂದು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here