Home Uncategorized 'ಕೊಲ್ಲುವ ದೈವ, ಮನಸ್ಸನ್ನು ಪರಿವರ್ತಿಸಲಾರದೇ?': ಸುದ್ದಿಯಾಗಿರುವ ಕಾಂತಾರ ಚಿತ್ರದ ನಟ ಕಿಶೋರ್ ಮಾಡಿರುವ ಪೋಸ್ಟ್

'ಕೊಲ್ಲುವ ದೈವ, ಮನಸ್ಸನ್ನು ಪರಿವರ್ತಿಸಲಾರದೇ?': ಸುದ್ದಿಯಾಗಿರುವ ಕಾಂತಾರ ಚಿತ್ರದ ನಟ ಕಿಶೋರ್ ಮಾಡಿರುವ ಪೋಸ್ಟ್

12
0

ಇತ್ತೀಚೆಗೆ ಬ್ಲಾಕ್ ಬಸ್ಟರ್ ಚಿತ್ರ ‘ಕಾಂತಾರ’ ಮೂಲಕ ಹೆಸರು ಗಳಿಸಿರು ವ ಕನ್ನಡದ ನಟ, ಕೃಷಿ ಕಾಯಕದಲ್ಲಿ ತೊಡಗಿಸಿಕೊಂಡಿರುವ ಸಾಹಿತ್ಯ ಪ್ರೇಮಿ ಕಿಶೋರ್ ಕುಮಾರ್ ಸುದ್ದಿಯಾಗಿದ್ದಾರೆ. ಹಾಗೆಯೇ ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಗೊಳಗಾಗಿದ್ದಾರೆ. ಅದಕ್ಕೆ ಕಾರಣ ಅವರು ಹಾಕಿರುವ ಒಂದು ಪೋಸ್ಟ್. ಇತ್ತೀಚೆಗೆ ಬ್ಲಾಕ್ ಬಸ್ಟರ್ ಚಿತ್ರ ‘ಕಾಂತಾರ’ ಮೂಲಕ ಹೆಸರು ಗಳಿಸಿರು ವ ಕನ್ನಡದ ನಟ, ಕೃಷಿ ಕಾಯಕದಲ್ಲಿ ತೊಡಗಿಸಿಕೊಂಡಿರುವ ಸಾಹಿತ್ಯ ಪ್ರೇಮಿ ಕಿಶೋರ್ ಕುಮಾರ್ ಸುದ್ದಿಯಾಗಿದ್ದಾರೆ. ಹಾಗೆಯೇ ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಗೊಳಗಾಗಿದ್ದಾರೆ. ಅದಕ್ಕೆ ಕಾರಣ ಅವರು ಹಾಕಿರುವ ಒಂದು ಪೋಸ್ಟ್.

ಕರಾವಳಿಯ ದೈವಾರಾಧನೆಯನ್ನು ಮೂಲ ಕಥೆಯನ್ನಾಗಿಟ್ಟುಕೊಂಡು ಬಡವ-ಶ್ರೀಮಂತರ ನಡುವಿನ ಸಂಘರ್ಷ ಕುರಿತು ಮಾಡಿರುವ ಚಿತ್ರ ಕಾಂತಾರ. ಅದರಲ್ಲಿ ಅರಣ್ಯಾಧಿಕಾರಿಯಾಗಿ ಕಿಶೋರ್ ಕುಮಾರ್ ಅವರದ್ದು ಮುಖ್ಯ ಪಾತ್ರ. ಚಿತ್ರ ಬಿಡುಗಡೆಯಾಗಿ ದೇಶ-ವಿದೇಶಗಳಲ್ಲಿಯೂ ಹೆಸರು ಗಳಿಸಿದಯಾದ ನಂತರ ಕಿಶೋರ್ ಕುಮಾರ್ ಒಂದು ಪ್ರಶ್ನೆ ಮಾಡಿದ್ದಾರೆ.

ನಮ್ಮಲ್ಲಿ ನಂಬಿಕೆ ಇರಬೇಕು, ಆದರೆ ಮೂಢನಂಬಿಕೆಯಿರಬಾರದು ಎಂದು ಪ್ರತಿಪಾದಿಸಿರುವ ನಟ ಕಿಶೋರ್ ಕೊಲ್ಲುವ ಶಕ್ತಿ ಹೊಂದಿರುವ ದೈವ ಮನಸ್ಸನ್ನು ಪರಿವರ್ತಿಸುವ ಶಕ್ತಿಯನ್ನು ಏಕೆ ಹೊಂದಿಲ್ಲ ಎಂದು ಕೇಳುತ್ತಾರೆ. 

ಇತ್ತೀಚಿಗೆ ವಾಟ್ಯ್ಸಾಪ್​ನಲ್ಲಿ ಕಾಂತಾರ ದೈವವನ್ನು ಅವಮಾನಿಸಿದ ಯುವಕ ರಕ್ತಕಾರಿ ಸಾವು ಎಂಬ ವಿಡಿಯೋ ವೈರಲ್ ಆಗಿತ್ತು.ಈ ಬಗ್ಗೆ ಕಿಶೋರ್ ಪ್ರತಿಕ್ರಿಯಿಸಿ, ಕೊಲ್ಲುವ ದೈವ, ಮನಸ್ಸನ್ನು ಪರಿವರ್ತಿಸಲಾರದೇ??

ಕಾಂತಾರದ ದೈವವನ್ನು ಅವಮಾನಿಸಿದ ಯುವಕ ರಕ್ತಕಾರಿ ಸಾವು ಅನ್ನೊ ವೈರಲ್ ವಿಡಿಯೊ ವಾಟ್ಸಾಪಿನಲ್ಲಿ ಹರಿದು ಬಂತು. ಆ ಸಿನಿಮಾದ ಭಾಗವಾಗಿ ಈ ಥರದ ತಪ್ಪು ತಿಳುವಳಿಕೆಗಳನ್ನು ತಿದ್ದುವುದು ನನ್ನ ಬಾಧ್ಯತೆ ಎಂದು ನಂಬಿ ಬರೆಯುತ್ತಿದ್ದೇನೆ.ಕೊಲ್ಲುವ ಶಕ್ತಿಯಿರುವ ದೈವಕ್ಕೆ ಅದರ ಬದಲು ಮನಃಪರಿವರ್ತನೆ ಮಾಡುವ ಶಕ್ತಿ ಏಕೆ ಇರುವುದಿಲ್ಲ?

ಏಕೆಂದರೆ ಕತೆಗಾರನಿಗೆ ಕಥೆ ಮುಂದೆ ಸಾಗುವುದಿಲ್ಲ. ಅವನ ಮಟ್ಟಿಗೆ ಒಂದು ಕಥೆಯನ್ನು ಪರಿಣಾಮಕಾರಿಯಾಗಿ ಹೇಳುವ ತನ್ನ ಉದ್ದೇಶ ಸಾಧನೆಗೆ ದೈವವೊ, ದೆವ್ವವೊ ಒಂದು ಸಾಧನವಷ್ಟೆ, ಸಿನಿಮಾವಾಗಲಿ ಪುರಾಣವಾಗಲಿ. ದೈವವೋ ದೆವ್ವವೋ ನಮ್ಮ ನಮ್ಮ ನಂಬಿಕೆಯಷ್ಟೇ.

ನಂಬಿದರೆ ಉಂಟು ನಂಬದಿದ್ದರೆ ಇಲ್ಲ. ಹಾಗೆಂದು ಕಷ್ಟಕಾಲದಲ್ಲಿ ಮನಸ್ಥೈರ್ಯ ಕೊಡುವ ನಂಬಿಕೆಗಳನ್ನು ಅವಮಾನಿಸುವ ಅವಶ್ಯಕತೆಯೂ ಇಲ್ಲ. ಕಿಡಿಗೇಡಿಗಳನ್ನು ಶಿಕ್ಷಿಸಲು ಕಾನೂನಿದೆ. ಅವರವರ ನಂಬಿಕೆ ಅವರಿಗೆ. ನಂಬಿಕೆ ಇರಲಿ ಮೂಢನಂಬಿಕೆ ಬೇಡ. ಅದರ ಹೆಸರಲ್ಲಿ ದ್ವೇಷವೂ…. ಎಂದು ಬರೆದು ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದಾರೆ. 

ಕಿಶೋರ್ ಅವರ ಈ ಪೋಸ್ಟ್ ಗೆ ಸಾಕಷ್ಟು ಪರ-ವಿರೋಧ ಪ್ರತಿಕ್ರಿಯೆಗಳು ಸೋಷಿಯಲ್ ಮೀಡಿಯಾಗಳಲ್ಲಿ ವ್ಯಕ್ತವಾಗುತ್ತಿವೆ.

LEAVE A REPLY

Please enter your comment!
Please enter your name here