Home Uncategorized ಕೋವಿಡ್ ಭೀತಿ: ಹೈರಿಸ್ಕ್ ದೇಶಗಳಿಂದ ಬಂದವರಿಗೆ 7 ದಿನಗಳ ಕ್ವಾರಂಟೈನ್ ಕಡ್ಡಾಯ, ರಾಜ್ಯ ಸರ್ಕಾರದಿಂದ ಹೊಸ...

ಕೋವಿಡ್ ಭೀತಿ: ಹೈರಿಸ್ಕ್ ದೇಶಗಳಿಂದ ಬಂದವರಿಗೆ 7 ದಿನಗಳ ಕ್ವಾರಂಟೈನ್ ಕಡ್ಡಾಯ, ರಾಜ್ಯ ಸರ್ಕಾರದಿಂದ ಹೊಸ ಮಾರ್ಗಸೂಚಿ ಬಿಡುಗಡೆ!

17
0

ವಿಶ್ವದ ವಿವಿಧ ರಾಷ್ಟ್ರಗಳಲ್ಲಿ ಮಹಾಮಾರಿ ಕೊರೋನಾ ವೈರಸ್ ಸೋಂಕು ಆರ್ಭಟಿಸುತ್ತಿದ್ದು, ಈ ಹಿನ್ನೆಲೆಯಲ್ಲಿ ವಿದೇಶಗಳಿಂದ ರಾಜ್ಯಕ್ಕೆ ಬರುವವರ ಮೇಲೆ ಸರ್ಕಾರ ನಿಗಾ ಮುಂದುವರೆಸಿದೆ. ಇದರಂತೆ ಹೈರಿಸ್ಕ್ ರಾಷ್ಟ್ರಗಳಿಂಗ ಬರುವ ರೋಗಲಕ್ಷಣಗಳು ಇಲ್ಲದವರೂ ಕೂಡ ಇನ್ನು ಮುಂದೆ 7 ದಿನಗಳ ಕಾಲ ಹೋಂ ಕ್ವಾರಂಟೈನ್ ನಲ್ಲಿರುವುದನ್ನು ಕಡ್ಡಾಗೊಳಿಸಿದೆ. ಬೆಂಗಳೂರು: ವಿಶ್ವದ ವಿವಿಧ ರಾಷ್ಟ್ರಗಳಲ್ಲಿ ಮಹಾಮಾರಿ ಕೊರೋನಾ ವೈರಸ್ ಸೋಂಕು ಆರ್ಭಟಿಸುತ್ತಿದ್ದು, ಈ ಹಿನ್ನೆಲೆಯಲ್ಲಿ ವಿದೇಶಗಳಿಂದ ರಾಜ್ಯಕ್ಕೆ ಬರುವವರ ಮೇಲೆ ಸರ್ಕಾರ ನಿಗಾ ಮುಂದುವರೆಸಿದೆ. ಇದರಂತೆ ಹೈರಿಸ್ಕ್ ರಾಷ್ಟ್ರಗಳಿಂಗ ಬರುವ ರೋಗಲಕ್ಷಣಗಳು ಇಲ್ಲದವರೂ ಕೂಡ ಇನ್ನು ಮುಂದೆ 7 ದಿನಗಳ ಕಾಲ ಹೋಂ ಕ್ವಾರಂಟೈನ್ ನಲ್ಲಿರುವುದನ್ನು ಕಡ್ಡಾಗೊಳಿಸಿದೆ.

ಚೀನಾ, ಹಾಂಕಾಂಗ್, ಜಪಾನ್, ದಕ್ಷಿಣ ಕೊರಿಯಾ, ಸಿಂಗಾಪುರ, ಥಾಯ್ಲೆಂಡ್ ನಿಂದ್ ಬರುವವರಿಗಾಗಿ ಶನಿವಾರ ಪರಿಷ್ಕೃತ ಮಾರ್ಗಸೂಚಿಯನ್ನು ರಾಜ್ಯ ಆರೋಗ್ಯ ಇಲಾಖೆ ಮಾರ್ಗಸೂಚಿ ಪ್ರಕಟಿಸಿದೆ.

ಮಾರ್ಗಸೂಚಿಯಲ್ಲಿ, ಹೈರಿಸ್ಕ್ ಇರುವ ರಾಷ್ಟ್ರಗಳಿಂದ ಬರುವವರು ಆರ್’ಟಿ-ಪಿಸಿಆರ್ ನೆಗೆಟಿವ್ ಪ್ರಮಾಣಪತ್ರ ನೀಡಿದರೆ ಮಾತ್ರ ವಿಮಾನ ನಿಲ್ದಾಣದಿಂದ ಹೊರ ಹೋಗಲು ಅವಕಾಶ ನೀಡಲಾಗುತ್ತದೆ ಎಂದು ತಿಳಿಸಲಾಗಿದೆ.

ಈ ರಾಷ್ಟ್ರಗಳಿಂಗ ಬರುವವರು 72 ಗಂಟೆಗಳಿಗಿಂತ ಹಳೆಯದಲ್ಲದ ಆರ್’ಟಿ-ಪಿಸಿಆರ್ ನೆಗೆಟಿವ್ ಪ್ರಮಾಣಪತ್ರ ನೀಡಿದರೆ ಅವರಿಗೆ ವಿಮಾನ ನಿಲ್ದಾಣದಿಂದ ಹೊರಹೋಗಲು ಅವಕಾಶ ನೀಡಬಹುದಾಗಿದೆ. ಇವರಲ್ಲಿ ರೋಗ ಲಕ್ಷಣ ಕಂಡು ಬಂದರೆ ಅಥವಾ ಪರೀಕ್ಷೆ ವೇಳೆ ಸೋಂಕು ದೃಢಪಟ್ಟಿದ್ದೇ ಆದರೆ, ಕೂಡಲೇ ಆಸ್ಪತ್ರೆಗೆ ದಾಖಲಿಸಬೇಕು. ಅವರ ಸಿಟಿ ವ್ಯಾಲ್ಯೂ ಶೇ.25ಕ್ಕಿಂತ ಕಡಿಮೆ ಇದ್ದರೆ ವಂಶವಾಹಿ ಪರೀಕ್ಷೆಗೆ ಒಳಪಡಿಸಬೇಕು. ಆಸ್ಪತ್ರೆಗೆ ದಾಖಲಿಸುವಾಗ ಬೆಂಗಳೂರಿನಲ್ಲಿ ಬೌರಿಂಗ್ ಅಥವಾ ಮಂಗಳೂರಿನಲ್ಲಿ ವೆನ್ ಲಾಕ್ ಆಸ್ಪತ್ರೆಗೆ ದಾಖಲು ಮಾಡಬೇಕು. ರೋಗ ಲಕ್ಷಣಗಳಿಲ್ಲದವರು 7 ದಿನಗಳ ಕಾಲ ಹೋಂ ಕ್ವಾರಂಟೈನ್ ಗೊಳಗಾಗಬೇಕು ಎಂದು ಸೂಚಿಸಿದೆ.

LEAVE A REPLY

Please enter your comment!
Please enter your name here