Home Uncategorized ಜನರನ್ನು ಮರಳು ಮಾಡಲು ಬಜೆಟ್‌ನಲ್ಲಿ ಯೋಜನೆ ಘೋಷಿಸಲಾಗಿದೆ: ಎಚ್‌ಡಿ ಕುಮಾರಸ್ವಾಮಿ

ಜನರನ್ನು ಮರಳು ಮಾಡಲು ಬಜೆಟ್‌ನಲ್ಲಿ ಯೋಜನೆ ಘೋಷಿಸಲಾಗಿದೆ: ಎಚ್‌ಡಿ ಕುಮಾರಸ್ವಾಮಿ

8
0
bengaluru

ಹರಿಹರ ಕ್ಷೇತ್ರದಲ್ಲಿ ಪಂಚರತ್ನ ರಥಯಾತ್ರೆ ಮಾಡುವ ವೇಳೆ ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಮಾಜಿ ಮುಖ್ಯಮಂತ್ರಿ ಅವರು; ನಿಸ್ಸಂಶಯವಾಗಿ ಕೇಂದ್ರ ಬಜೆಟ್ ಮಂಡನೆ ಮೂಗಿಗೆ ತುಪ್ಪ ಸವರುವಂತಾಗಿದೆ. ದಾವಣಗೆರೆ: ಚುನಾವಣೆ ಹೊಸ್ತಿಲಲ್ಲಿ ಇರುವ ಕರ್ನಾಟಕಕ್ಕೆ ಈ ನೆಪದಲ್ಲಾದರೂ ಏನಾದರೂ ಸಿಗಬಹುದು ಎನ್ನುವ ನಿರೀಕ್ಷೆ ಇತ್ತು. ಆದರೆ, ತುಟಿಗೆ ತುಪ್ಪ ಸವರುವ ಬದಲು ಹಣೆಗೆ ತುಪ್ಪ ಸವರುವ ಕೆಲಸವನ್ನು ಕೇಂದ್ರ ಬಜೆಟ್ ನಲ್ಲಿ ಮಾಡಲಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಅಭಿಪ್ರಾಯಪಟ್ಟರು.

ಹರಿಹರ ಕ್ಷೇತ್ರದಲ್ಲಿ ಪಂಚರತ್ನ ರಥಯಾತ್ರೆ ಮಾಡುವ ವೇಳೆ ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಮಾಜಿ ಮುಖ್ಯಮಂತ್ರಿ ಅವರು; ನಿಸ್ಸಂಶಯವಾಗಿ ಕೇಂದ್ರ ಬಜೆಟ್ ಮಂಡನೆ ಮೂಗಿಗೆ ತುಪ್ಪ ಸವರುವಂತಾಗಿದೆ ಚುನಾವಣೆ ಹಿನ್ನೆಲೆಯಲ್ಲಿ ನೀಡಿರುವ ಬಜೆಟ್ ಇದು ಎಂದರು. ಕೇಂದ್ರ ಸರ್ಕಾರ ಬಜೆಟ್‌ನಲ್ಲಿ ಯೋಜನೆಗಳನ್ನು ಘೋಷಣೆ ಮಾಡಿದ್ದಾರೆ. ಆದರೆ ಈ ಯೋಜನೆಗಳು ಅನುಷ್ಠಾನಗೊಳ್ಳುವುದು ಮುಂದಿನ ಸರ್ಕಾರ ಬಂದ ಮೇಲೆ ಅಲ್ಲಿಯ ವರೆಗೂ ಏನೂ ಆಗುವುದಿಲ್ಲ.

ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯಾಗಿ ಮಾಡಬೇಕು ಎಂದು ನಾವು ಯಾವ ವರ್ಷದಲ್ಲಿ ಅರ್ಜಿ ಕೊಟ್ಟಿದ್ದೇವೆ. ಈಗ ಚುನಾವಣೆ ವರ್ಷದಲ್ಲಿ ಘೋಷಣೆ ಮಾಡಿ ಎಷ್ಟರ ಮಟ್ಟಿಗೆ ಯೋಜನೆಯನ್ನು ಅನುಷ್ಠಾನಕ್ಕೆ ತರುತ್ತಾರೆ. ಈಗ ಘೋಷಣೆ ಮಾಡಿರುವುದು ತುಪ್ಪ ಸವರುವ ಕೆಲಸ ಎಂದು ಎಚ್‌.ಡಿ ಕುಮಾರಸ್ವಾಮಿ ಕಿಡಿಕಾರಿದ್ದಾರೆ

ಜನರನ್ನು ಮರಳು ಮಾಡಲು ಕೇಂದ್ರ ಸರ್ಕಾರ ಯೋಜನೆಗಳನ್ನು ಘೋಷಣೆ ಮಾಡಿದೆ. ಈ ಯೋಜನೆಗಳು ಅನುಷ್ಠಾನಗೊಳ್ಳುತ್ತದೆಯೋ ಇಲ್ಲವೋ ಎನ್ನುವುದನ್ನು ಮುಂದಿನ ದಿನಗಳಲ್ಲಿ ನೋಡೋಣ. ಕರ್ನಾಟಕಕ್ಕೆ ಕೇಂದ್ರ ಸರ್ಕಾರ ದುಡ್ಡು ಇಟ್ಟಿರುವುದನ್ನು ಅಭಿನಂದಿಸುತ್ತೇನೆ. ಈಗಲಾದರೂ ಕರ್ನಾಟಕ ಬರಪೀಡಿತ ಪ್ರದೇಶ ಎಂದು ಕೇಂದ್ರ ಸರ್ಕಾರಕ್ಕೆ ಅರಿವಾಗಿದೆ ಎಂದರು.

bengaluru

ಮಾತು ಮುಂದುವರಿಸಿದ ಅವರು, ಇದು ನಿಜಕ್ಕೂ ಕಾರ್ಯಸಾಧನೆ ಆಗುವುದು ಕೊಟ್ಟಂತಹ ಯೋಜನೆಗಳು ಜನರಿಗೆ ತಲುಪಿದಾಗ, ಕಾರ್ಯಕ್ರಮಗಳಿಗೆ ಹಣ ಬಿಡುಗಡೆಯಾಗಿ, ನಿಗದಿತ ಅವಧಿಗೆ ಕಾರ್ಯಗಳನ್ನು ಮುಗಿಸಿದಾಗ ಆಗ ನಾವು ಇದರ ಬಗ್ಗೆ ಚರ್ಚೆ ಮಾಡಬಹುದು. ಇದೆಲ್ಲಾ ಪ್ರಾರಂಭಿಕ ಹಂತ ಎಂದು ಹೇಳಿದರು.

ಬಜೆಟ್ ಘೋಷಣೆಗಳು ಕಾಗದದ ಪತ್ರಗಳ ಘೋಷಣೆಗಳಗಿಯೇ ಉಳಿದಿವೆ. ಕಳೆದ 25 ವರ್ಷಗಳಿಂದ ರೈಲ್ವೇ ಯೋಜನೆಗಳು ಇನ್ನೂ ನೆನೆಗುದಿಗೆ ಬಿದ್ದಿವೆ. ಎಷ್ಟು ಸಲ ಕೇಂದ್ರದ ಬಳಿ ಅರ್ಜಿ ಹಿಡಿದುಕೊಂಡು ಹೋಗುವುದು? ಡಬಲ್ ಎಂಜಿನ್ ಸರಕಾರ ಬಂದರೆ ಎಲ್ಲಾ ಮಾಡುತ್ತೇವೆ ಎಂದರು. ಮೂರು ವರ್ಷ ಆಯಿತು. ಇವರು ಏನೂ ಮಾಡಲಿಲ್ಲ ಎಂದು ಕುಮಾರಸ್ವಾಮಿ ಅವರು ಹೇಳಿದ್ದಾರೆ.

bengaluru

LEAVE A REPLY

Please enter your comment!
Please enter your name here