Home Uncategorized ಹಡಪದ ಅಪ್ಪಣ್ಣ ಸಮುದಾಯಕ್ಕೆ ಶೀಘ್ರದಲ್ಲೇ ನಿಗಮ ಸ್ಥಾಪನೆ: ಸಿಎಂ ಬೊಮ್ಮಾಯಿ

ಹಡಪದ ಅಪ್ಪಣ್ಣ ಸಮುದಾಯಕ್ಕೆ ಶೀಘ್ರದಲ್ಲೇ ನಿಗಮ ಸ್ಥಾಪನೆ: ಸಿಎಂ ಬೊಮ್ಮಾಯಿ

19
0

ಹಡಪದ ಅಪ್ಪಣ್ಣ ಸಮುದಾಯಕ್ಕೆ ಶೀಘ್ರದಲ್ಲೇ ನಿಗಮ ಸ್ಥಾಪಿನೆ ಮಾಡಲಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬುಧವಾರ ಹೇಳಿದರು. ವಿಜಯಪುರ: ಹಡಪದ ಅಪ್ಪಣ್ಣ ಸಮುದಾಯಕ್ಕೆ ಶೀಘ್ರದಲ್ಲೇ ನಿಗಮ ಸ್ಥಾಪಿನೆ ಮಾಡಲಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬುಧವಾರ ಹೇಳಿದರು.

ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ತಂಗಡಗಿ ಗ್ರಾಮದಲ್ಲಿ ನಡೆದ ಹಡಪದ ಅಪ್ಪಣ್ಣ ಸಮಾಜದ ರಾಜ್ಯ ಮಟ್ಟದ ಜನಜಾಗೃತಿ ಸಮಾವೇಶದಲ್ಲಿ ಮಾತನಾಡಿದ ಅವರು. ವೃತ್ತಿ ಆಧರಿತ ಕುಲ ಕಸಬುಗಳನ್ನು ನಿಗಮದ ಮೂಲಕ ಸೇರಿಸುತ್ತೇವೆ. ನಾನು ಮುಖ್ಯಮಂತ್ರಿ ಆದ ಬಳಿಕ ಕ್ಷೇತ್ರಕ್ಕೆ 3 ಕೋಟಿ ಅನುದಾನ ನೀಡಿದ್ದೇನೆ. ಈ ಅನುದಾನದಲ್ಲಿ ಕಟ್ಟಡ ನಿರ್ಮಿಸಿ, ಮುಂದೆ ಸಹಕರಿಸ್ತೇನೆಂದು ಹೇಳಿದರು.

ಕಾಯಕ ಆಧರಿತ ಕರಕುಶಲ ಯೋಜನೆ ಮಾಡಿದ್ದು ನಮ್ಮ ಸರ್ಕಾರ. ಮೊದಲು ನೀವೆಲ್ಲಾ ನೈದರು ಎಂಬ ಸಮುದಾಯದ ಹೆಸರಿನಲ್ಲಿ ಒಟ್ಟಾಗಿದ್ದಿರಿ. 2013ರಲ್ಲಿ ಇದನ್ನು ತೆಗೆದು ನಿಮ್ಮನ್ನು ಇತರ ಸಮಾಜದಲ್ಲಿ ವಿಂಗಡಿಸಿದರು. ಸಣ್ಣ ಸಮುದಾಯಗಳು ಒಗ್ಗಟ್ಟಾಗಿದ್ದರೆ ಅನುಕೂಲವಾಗುವುದಿಲ್ಲ. ಪಟ್ಟಭದ್ರ ಹಿತಾಸಕ್ತಿಗಳಿಗೆ ಅನುಕೂಲವಾಗಲ್ಲ, ಹೀಗಾಗಿ ಹೀಗೆ ಮಾಡಿದ್ದಾರೆ. ಆದರೆ, ಈಗ ನಿವೆಲ್ಲಾ ಒಟ್ಟಾಗಿದ್ದೀರಿ, ಇನ್ಮುಂದೆ ನಿಮಗೆ ಅನುಕೂಲವಾಗುತ್ತೆ. ನನಗೆ ಅಧುನಿಕ‌ ಬಸವಣ್ಣ, ಎರಡನೇ ಬಸವಣ್ಣ ಎಂದು ಕರೆಯಬೇಡಿ. ನಾನು ಬಸವಣ್ಣನವರ ಕಾಲಿನ ಧೂಳಿಗೂ ಸಮನಲ್ಲ ಎಂದು ತಿಳಿಸಿದರು.

ಸಮಾವೇಶದಲ್ಲಿ ಹಡಪದ ಅಪ್ಪಣ್ಣ ಪೀಠದ ಅನ್ನದಾನಿ ಭಾರತಿ ಸ್ವಾಮೀಜಿ‌ ಅವರು ಮಾತನಾಡಿ, 2ಎ ಮೀಸಲಾತಿಯಲ್ಲಿರುವ ಹಡಪದ ಸಮುದಾಯವನ್ನ ಎಸ್ಸಿ ಮೀಸಲಾತಿಗೆ ಸೇರಿಸಬೇಕೆಂದು ಮುಖ್ಯಮಂತ್ರಿಗಳಿಗೆ ಒತ್ತಾಯಿಸಿದರು.

ಹಡಪದ ಸಮುದಾಯ ಲಿಂಗಾಯತ ಸಮುದಾಯದಲ್ಲಿದ್ದರೂ ನಮ್ಮನ್ನ ಕೀಳಾಗಿ ಕಾಣಲಾಗುತ್ತಿದೆ. ನಮ್ಮ ಸಮುದಾಯಕ್ಕೆ ನ್ಯಾಯ ಸಿಗಬೇಕು. ನಮ್ಮ ಸಮುದಾಯವನ್ನ ಎಸ್ಸಿಗೆ ಸೇರಿಸಿ ಎಂದು ಹೇಳಿದರು.

LEAVE A REPLY

Please enter your comment!
Please enter your name here