Home ಮಂಗಳೂರು ದೇವದಾರಿ ಕಬ್ಬಿಣದ ಅದಿರು ಪ್ರದೇಶದಲ್ಲಿ ಗಣಿಗಾರಿಕೆಗೆ ಕೆಐಒಸಿಎಲ್ ಅನುಮತಿ

ದೇವದಾರಿ ಕಬ್ಬಿಣದ ಅದಿರು ಪ್ರದೇಶದಲ್ಲಿ ಗಣಿಗಾರಿಕೆಗೆ ಕೆಐಒಸಿಎಲ್ ಅನುಮತಿ

34
0
T.Saminathan takes charge as CMD of KIOCL Limited

ಮಂಗಳೂರು:

ಬಳ್ಳಾರಿ ಜಿಲ್ಲೆಯ ಸಂಡೂರಿನ ದೇವದಾರಿ ಕಬ್ಬಿಣದ ಅದಿರು ಪ್ರದೇಶದಲ್ಲಿ ಕಬ್ಬಿಣ ಮತ್ತು ಮ್ಯಾಂಗನೀಸ್ ಅದಿರು ಗಣಿಗಾರಿಕೆ ನಡೆಸಲು ಕುದುರೆಮುಖ ಕಬ್ಬಿಣ ಅದಿರು ಕಂಪನಿ ಲಿಮಿಟೆಡ್‌(ಕೆಐಒಸಿಎಲ್) ಗೆ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ ಅನುಮತಿ ನೀಡಿದೆ ಎಂದು ಕೆಐಒಸಿಎಲ್ ಲಿಮಿಟೆಡ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಟಿ ಸ್ವಾಮಿನಾಥನ್ ಅವರು ಶುಕ್ರವಾರ ತಿಳಿಸಿದ್ದಾರೆ.

ಇಂದು ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಸ್ವಾಮಿನಾಥನ್, 388 ಹೆಕ್ಟೇರ್ ಅರಣ್ಯ ಪ್ರದೇಶದಲ್ಲಿ ಕಬ್ಬಿಣದ ಅದಿರು ಮತ್ತು ಮ್ಯಾಂಗನೀಸ್ ಅದಿರು ಗಣಿಗಾರಿಕೆ ನಡೆಸಲು ಕೇಂದ್ರ ಸಚಿವಾಲಯ ಅಂತಿಮ ಅನುಮತಿ ನೀಡಿದೆ ಎಂದರು.

“2006 ರಲ್ಲಿ ಸುಪ್ರೀಂ ಕೋರ್ಟ್ ಆದೇಶದ ನಂತರ ಪಶ್ಚಿಮ ಘಟ್ಟಗಳ ಕುದುರೆಮುಖದಲ್ಲಿ ಮ್ಯಾಗ್ನೆಟೈಟ್ ಕಬ್ಬಿಣದ ಅದಿರು ಗಣಿಗಾರಿಕೆಯನ್ನು ನಿಲ್ಲಿಸಬೇಕಾಯಿತು. ಆದರೆ ಈಗ ಗಣಿಗಾರಿಕೆ ನಡೆಸಲು ಸಚಿವಾಲಯ ಅನುಮತಿ ನೀಡಿದೆ” ಎಂದು ಸ್ವಾಮಿನಾಥನ್ ತಿಳಿಸಿದರು.

ದೇವದಾರಿ ಕಬ್ಬಿಣದ ಅದಿರಿನ ಗಣಿಗಾರಿಕೆಗೆ ಗುತ್ತಿಗೆಗೆ ಕರ್ನಾಟಕ ಗಣಿ ಮತ್ತು ಭೂವಿಜ್ಞಾನ ಇಲಾಖೆ ನಿರ್ದೇಶಕರು 2023 ರ ಜನವರಿ 2 ರಂದು 50 ವರ್ಷಗಳ ಅವಧಿಗೆ ಒಪ್ಪಿಗೆ ನೀಡಿದೆ ಎಂದು ಸಮಿನಾಥನ್ ಹೇಳಿದ್ದಾರೆ.

“ನಾವು ನೋಂದಣಿ ಮತ್ತು ಇತರ ಕಾರ್ಯವಿಧಾನಗಳಿಗಾಗಿ 329.17 ಕೋಟಿ ರೂಪಾಯಿ ಪಾವತಿಸಿದ್ದೇವೆ ಮತ್ತು ಈ ಗುತ್ತಿಗೆ ಅವಧಿಯಲ್ಲಿ, ಕಂಪನಿಗೆ ನಿಗದಿಪಡಿಸಿದ ಪ್ರದೇಶದಲ್ಲಿ 30 ಮಿಲಿಯನ್ ಟನ್‌ಗಳಿಂದ 33 ಮಿಲಿಯನ್ ಟನ್‌ಗಳಷ್ಟು ಅದಿರನ್ನು ಗಣಿಗಾರಿಕೆ ಮಾಡುವ ಗುರಿ ಹೊಂದಿದ್ದೇವೆ. ದೇವದಾರಿ ಗಣಿಗಾರಿಕೆ ಕೆಐಒಸಿಎಲ್ ಲಿಮಿಟೆಡ್‌ ಹಿಂದಿನ ವೈಭವಕ್ಕೆ ಮರಳಲು ಸಹಾಯ ಮಾಡುತ್ತದೆ” ಎಂದಿದ್ದಾರೆ.

LEAVE A REPLY

Please enter your comment!
Please enter your name here