ಉಡುಪಿ, ಜ.3: ಅಪ್ತಾಪ್ತೆ ಮೇಲೆ ಅತ್ಯಾಚಾರ ಎಸಗಿದ ಪೋಕ್ಸೊ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಆದಿಲ್ ಎಂಬಾತ ನನ್ನು ದೋಷಮುಕ್ತಗೊಳಿಸಿ ಉಡುಪಿ ಪೋಕ್ಸೊ ವಿಶೇಷ ನ್ಯಾಯಾಲಯ ಆದೇಶ ನೀಡಿದೆ.
ಉಡುಪಿಯ ಬ್ರಹ್ಮಾವರ ಎಂಬಲ್ಲಿ ವಾಸವಾಗಿದ್ದ ಆರೋಪಿ ತನ್ನ ಪರಿಚಯದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದನು ಎಂದು ಮಾ.22 ರಂದು ಉಡುಪಿ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಬಗ್ಗೆ ತನಿಖೆ ನಡೆಸಿದ ಪೊಲೀಸರು ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದರು.
ಈ ಬಗ್ಗೆ ವಿಚಾರಣೆ ನಡೆಸಿದ ನ್ಯಾಯಾಧಿಶ ಶ್ರೀನಿವಾಸ್ ಸುವರ್ಣ ನ್ಯಾಯಾ ಲಯವು ಆರೋಪಿಯನ್ನು ಖುಲಾಸೆಗೊಳಿಸಿ ಆದೇಶ ನೀಡಿದರು. ಆರೋಪಿಯ ಪರವಾಗಿ ಮಂಗಳೂರಿನ ಲೆಕ್ಸ್ ಜ್ಯೂರೀಸ್ ಲಾ ಚೇಂಬರ್ ಇದರ ವಕೀಲರಾದ ಉಮ್ಮರ್ ಫಾರೂಕ್ ಮುಲ್ಕಿ, ಮುಹಮ್ಮದ್ ಅಸ್ಗರ್ ಮುಡಿಪು ಹಾಗೂ ಉಡುಪಿಯ ಲೆಕ್ಸ್ ಜ್ಯೂರೀಸ್ ಲಾ ಚೇಂಬರ್ನ ವಕೀಲರಾದ ಅಬೂಬಕ್ಕರ್ ಸಿದ್ಧಿಕ್ ಮತ್ತು ಮಹಮ್ಮದ್ ಸಾದಿಕ್ ವಾದಿಸಿದ್ದರು.
