Home Uncategorized ಫೆಬ್ರವರಿಯಲ್ಲಿ ಸಂಡೂರಿನಲ್ಲಿ ಗಣಿಗಾರಿಕೆ ಕಾಲೇಜಿಗೆ ಪ್ರಧಾನ ಮೋದಿ ಶಂಕುಸ್ಥಾಪನೆ

ಫೆಬ್ರವರಿಯಲ್ಲಿ ಸಂಡೂರಿನಲ್ಲಿ ಗಣಿಗಾರಿಕೆ ಕಾಲೇಜಿಗೆ ಪ್ರಧಾನ ಮೋದಿ ಶಂಕುಸ್ಥಾಪನೆ

32
0

ದೇಶದ ಎರಡನೇ ಮತ್ತು ರಾಜ್ಯದ ಮೊದಲ ಸ್ಕೂಲ್ ಆಫ್ ಮೈನಿಂಗ್ ನ್ಯಾಷನಲ್ ಕಾಲೇಜು ಮುಂದಿನ ಶೈಕ್ಷಣಿಕ ವರ್ಷದಿಂದ ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನಲ್ಲಿ ಕಾರ್ಯಾರಂಭ ಮಾಡುವ ಸಾಧ್ಯತೆ ಇದ್ದು, ಕಾಲೇಜಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಫೆಬ್ರವರಿ ತಿಂಗಳಿನಲ್ಲಿ ಶಂಕುಸ್ಥಾಪನೆ ನೆರವೇರಿಸಲಿದ್ದಾರೆಂದು ತಿಳಿದುಬಂದಿದೆ. ಬಳ್ಳಾರಿ: ದೇಶದ ಎರಡನೇ ಮತ್ತು ರಾಜ್ಯದ ಮೊದಲ ಸ್ಕೂಲ್ ಆಫ್ ಮೈನಿಂಗ್ ನ್ಯಾಷನಲ್ ಕಾಲೇಜು ಮುಂದಿನ ಶೈಕ್ಷಣಿಕ ವರ್ಷದಿಂದ ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನಲ್ಲಿ ಕಾರ್ಯಾರಂಭ ಮಾಡುವ ಸಾಧ್ಯತೆ ಇದ್ದು, ಕಾಲೇಜಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಫೆಬ್ರವರಿ ತಿಂಗಳಿನಲ್ಲಿ ಶಂಕುಸ್ಥಾಪನೆ ನೆರವೇರಿಸಲಿದ್ದಾರೆಂದು ತಿಳಿದುಬಂದಿದೆ.

ಗಣಿ ಮತ್ತು ಭೂವಿಜ್ಞಾನ ಸಚಿವ ಹಾಲಪ್ಪ ಆಚಾರ್ ಅವರು ಮಾತನಾಡಿ, ಸಂಡೂರಿನಲ್ಲಿ ದೇಶದ ಎರಡನೇ ಗಣಿಗಾರಿಕೆ ರಾಷ್ಟ್ರೀಯ ಕಾಲೇಜು ಬರುತ್ತಿರುವುದು ನನಗೆ ಹೆಮ್ಮೆ ತಂದಿದೆ. ಬಳ್ಳಾರಿ ಗಣಿಗಾರಿಕೆಯಲ್ಲಿ ಸಮೃದ್ಧವಾಗಿರುವುದರಿಂದ ಇದು ಪರಿಪೂರ್ಣ ಸ್ಥಳವಾಗಿದೆ. ಶೀಘ್ರದಲ್ಲೇ ಕಾಲೇಜು ನಿರ್ಮಾಣ ಕಾರ್ಯ ಆರಂಭವಾಗಲಿದೆ ಎಂಬ ವಿಶ್ವಾಸವಿದೆ ಎಂದು ಹೇಳಿದ್ದಾರೆ.

ಸಂಡೂರು ದೇಶದ ಅತಿದೊಡ್ಡ ಗಣಿಗಾರಿಕೆ ಪ್ರದೇಶಗಳಲ್ಲಿ ಒಂದಾಗಿದೆ ಮತ್ತು ಜೆಎಸ್ಡಬ್ಲ್ಯೂ ಮತ್ತು ಎನ್ಎಂಡಿಸಿ ಯಂತಹ ಕಂಪನಿಗಳು ಇಲ್ಲಿ ನೆಲೆಗೊಂಡಿವೆ.

ಮೊದಲ ಗಣಿಗಾರಿಕೆ ರಾಷ್ಟ್ರೀಯ ಕಾಲೇಜು, ಬಿನೋದ್ ಬಿಹಾರಿ ಮಹ್ತೋ ಕೊಯ್ಲಾಂಚಲ್ ವಿಶ್ವವಿದ್ಯಾಲಯ (ಬಿಬಿಎಂಕೆಯು) ಜಾರ್ಖಂಡ್‌ನ ಧನ್‌ಬಾದ್‌ನಲ್ಲಿದೆ.

ಧನಬಾದ್‌ನಲ್ಲಿರುವ ವಿಶ್ವವಿದ್ಯಾನಿಲಯವು 3,000 ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಹೊಂದಿದೆ ಎಂದು ಜಿಲ್ಲಾ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

“ಇದು ತಾಂತ್ರಿಕ ಕೋರ್ಸ್ ಆಗಿದೆ ಮತ್ತು ಮೆಕ್ಯಾನಿಕಲ್, ಎಲೆಕ್ಟ್ರಿಕಲ್ ಮತ್ತು ಸಿವಿಲ್‌ನಂತಹ ಎಂಜಿನಿಯರಿಂಗ್ ಕ್ಷೇತ್ರಗಳಿಗೆ ಇದು ಹೋಲುತ್ತದೆ. ಕರ್ನಾಟಕದಲ್ಲಿ, ಪಿಯು ಪರೀಕ್ಷೆಯ ನಂತರ ಸಿಇಟಿ ಬರೆದ ವಿದ್ಯಾರ್ಥಿಗಳು ಕೋರ್ಸ್‌ಗೆ ಅರ್ಹರಾಗುತ್ತಾರೆ. ಇದು ಎಂಜಿನಿಯರಿಂಗ್‌ನ ದೊಡ್ಡ ಶಾಖೆಯಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ರೂ.200 ಕೋಟಿ ವೆಚ್ಚದಲ್ಲಿ ಗಣಿಗಾರಿಕೆ ಕಾಲೇಜು ನಿರ್ಮಾಣ
ಗಣಿಗಾರಿಕೆ ಕಾಲೇಜು ನಿರ್ಮಾಣ ಸಂಬಂಧ ಕೇಂದ್ರ ಮತ್ತು ರಾಜ್ಯ ಸರ್ಕಾರದ ಅಧಿಕಾರಿಗಳೊಂದಿಗೆ ಮಾತುಕತೆ ನಡೆಯುತ್ತಿದೆ. ಈ ಹಿಂದೆ ಬಳ್ಳಾರಿಯ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಆವರಣದಲ್ಲಿ ಕಾಲೇಜು ಆರಂಭಿಸಲು ಮುಂದಾಗಿದ್ದೆವು. ಆದರೆ ನಂತರ, ಸಂಡೂರಿನ ವಿಶ್ವವಿದ್ಯಾನಿಲಯ ಸಂಯೋಜಿತ ಕಾಲೇಜಿನ ಆವರಣವನ್ನು ಬಳಸಿಕೊಳ್ಳಲು ನಿರ್ಧರಿಸಲಾಯಿತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಕಾಲೇಜು ನಿರ್ಮಿಸಲು 200 ಕೋಟಿ ರೂಪಾಯಿ ವೆಚ್ಚ ಮಾಡಲಾಗುತ್ತಿದೆ. “ಇದು ಬೋಧಕ ಮತ್ತು ಬೋಧಕೇತರ 300 ಸಿಬ್ಬಂದಿಯನ್ನು ಹೊಂದಿರಲಿದೆ. ಈ ಕೋರ್ಸ್ ವಿದ್ಯಾರ್ಥಿಗಳಿಗೆ ಗಣಿ ಉದ್ಯಮದ ಬಗ್ಗೆ ಅಧ್ಯಯನ ಮಾಡಲು ಮತ್ತು ಸಂಶೋಧನೆ ನಡೆಸಲು ಸಹಾಯ ಮಾಡುತ್ತದೆ. ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳು ಇಲ್ಲಿ ಎಂಟೆಕ್‌ ಮತ್ತು ಪಿಎಚ್‌ಡಿ ಕೂಡ ಮಾಡಬಹುದು ಎಂದು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here