Home Uncategorized ಬಜೆಟ್'ಗೆ ಬಿಬಿಎಂಪಿ ಸಿದ್ಧತೆ: ಸಚಿವರು, ಶಾಸಕರು, ಉನ್ನತಾಧಿಕಾರಿಗಳೊಂದಿಗೆ ಸಚಿವ ಅಶ್ವತ್ಥ್ ನಾರಾಯಣ್ ಸಭೆ

ಬಜೆಟ್'ಗೆ ಬಿಬಿಎಂಪಿ ಸಿದ್ಧತೆ: ಸಚಿವರು, ಶಾಸಕರು, ಉನ್ನತಾಧಿಕಾರಿಗಳೊಂದಿಗೆ ಸಚಿವ ಅಶ್ವತ್ಥ್ ನಾರಾಯಣ್ ಸಭೆ

10
0
bengaluru

2023-24ರ ಬಿಬಿಎಂಪಿ ಬಜೆಟ್ ಕುರಿತು ಚರ್ಚಿಸಲು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥ್ ನಾರಾಯಣ ಅವರು ನಗರದ ಶಾಸಕರು, ಎಂಎಲ್‌ಸಿಗಳು ಮತ್ತು ಬಿಬಿಎಂಪಿ ಉನ್ನತ ಅಧಿಕಾರಿಗಳೊಂದಿಗೆ ಗುರುವಾರ ಸಭೆ ನಡೆಸಿದರು. ಬೆಂಗಳೂರು: 2023-24ರ ಬಿಬಿಎಂಪಿ ಬಜೆಟ್ ಕುರಿತು ಚರ್ಚಿಸಲು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥ್ ನಾರಾಯಣ ಅವರು ನಗರದ ಶಾಸಕರು, ಎಂಎಲ್‌ಸಿಗಳು ಮತ್ತು ಬಿಬಿಎಂಪಿ ಉನ್ನತ ಅಧಿಕಾರಿಗಳೊಂದಿಗೆ ಗುರುವಾರ ಸಭೆ ನಡೆಸಿದರು.

ಸಭೆಯಲ್ಲಿ ಬಿಬಿಎಂಪಿ ಆಡಳಿತಾಧಿಕಾರಿ ರಾಕೇಶ್ ಸಿಂಗ್ ಅವರು, ಬಜೆಟ್‌ನಲ್ಲಿ ನಗರದ ಸರ್ವತೋಮುಖ ಅಭಿವೃದ್ಧಿಗೆ ಯೋಜನೆಗಳನ್ನು ಅಳವಡಿಸಿಕೊಳ್ಳಲು ಸಲಹೆಗಳ ನೀಡುವಂತೆ ಜನ ಪ್ರತಿನಿಧಿಗಳ ಬಳಿ ಮನವಿ ಮಾಡಿಕೊಂಡರು.

ಬೀದಿ ದೀಪ, ಉದ್ಯಾನ, ರಾಜಕಾಲುವೆ ನಿರ್ವಹಣೆ, ಭದ್ರತಾ ಸಿಬ್ಬಂದಿ ನಿಯೋಜನೆ, ಬೀದಿಬದಿ ಕಸ ಸುರಿಯುವ ತಾಣಗಳ ನಿರ್ಮೂಲನೆ, ಲ್ಯಾಪ್‌ಟಾಪ್, ಹೊಲಿಗೆ ಯಂತ್ರ,ಒಂಟಿ ಮನೆ, ರಸ್ತೆ ವಿಸ್ತರಣೆ, ಪ್ರತಿ ವಾರ್ಡ್‌ಗೆ ಸಾರ್ವಜನಿಕ ಕಾಮಗಾರಿಗಳಿಗೆ ಅನುದಾನ, ಭಿಕ್ಷಾಟನೆ, ಗ್ರಂಥಾಲಯ ಹಾಗೂ ಡಲ್ಟ್ ಸೆಸ್ ವಿನಿಯೋಗ, ಕಾಮಗಾರಿಗಳನ್ನು ಪೂರ್ಣಗೊಳಿಸಲು ಆದ್ಯತೆ ನೀಡುವ ವಿಷಯಗಳು ಸಭೆಯಲ್ಲಿ ಚರ್ಚೆಯಾದವು,

ಆರೋಗ್ಯ ಸಿಬ್ಬಂದಿ ನಿಯೋಜನೆ, ಶಿಕ್ಷಣ, ಕಲ್ಯಾಣ ಕಾರ್ಯಕ್ರಮ, ಕೆರೆ, ಪಾದಚಾರಿ ಮಾರ್ಗ, ರಸ್ತೆ, ಬೀದಿದೀಪ, ಉದ್ಯಾನಗಳ ನಿರ್ವಹಣೆಗೆ ಬಿಬಿಎಂಪಿ ಆಯವ್ಯಯದಲ್ಲಿ ಅನುದಾನ ಮೀಸಲಿಡಲು ನಿರ್ಧರಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

bengaluru
bengaluru

LEAVE A REPLY

Please enter your comment!
Please enter your name here