Home Uncategorized ಬಾಕಿ ಹಣ ಕೇಳಿದ್ದಕ್ಕೆ ಅಂಗಡಿಯ ದಂಪತಿ, 5 ವರ್ಷದ ಮಗುವಿಗೆ ಥಳಿಸಿದ ಮೂವರು ಆರೋಪಿಗಳು

ಬಾಕಿ ಹಣ ಕೇಳಿದ್ದಕ್ಕೆ ಅಂಗಡಿಯ ದಂಪತಿ, 5 ವರ್ಷದ ಮಗುವಿಗೆ ಥಳಿಸಿದ ಮೂವರು ಆರೋಪಿಗಳು

13
0
bengaluru

950 ರೂ. ಬಾಕಿ ಪಾವತಿಸುವಂತೆ ಕೇಳಿದ್ದಕ್ಕೆ ಅಂಗಡಿ ವ್ಯಾಪಾರಿಗಳಾದ ದಂಪತಿ ಮತ್ತು ಅವರ ಐದು ವರ್ಷದ ಮಗನಿಗೆ ಥಳಿಸಲಾಗಿದೆ. ಕೆಂಗೇರಿ ಪೊಲೀಸ್ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಗಳಲ್ಲಿ ಒಬ್ಬನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬೆಂಗಳೂರು: 950 ರೂ. ಬಾಕಿ ಪಾವತಿಸುವಂತೆ ಕೇಳಿದ್ದಕ್ಕೆ ಅಂಗಡಿ ವ್ಯಾಪಾರಿಗಳಾದ ದಂಪತಿ ಮತ್ತು ಅವರ ಐದು ವರ್ಷದ ಮಗನಿಗೆ ಥಳಿಸಲಾಗಿದೆ. ಕೆಂಗೇರಿ ಪೊಲೀಸ್ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಗಳಲ್ಲಿ ಒಬ್ಬನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಜಿವಿ ಶಿವಕುಮಾರ್ (35) ಮತ್ತು ಆತನ ಪತ್ನಿ ದಿವ್ಯಶ್ರೀ (26) ಎಂಬುವವರು ಕೆಂಗೇರಿ ಉಪನಗರದಲ್ಲಿ ಕಾಂಡಿಮೆಂಟ್ಸ್ ಅಂಗಡಿ ನಡೆಸುತ್ತಿದ್ದಾರೆ. ಮೂವರು ಆರೋಪಿಗಳು ನಿತ್ಯ ಅಂಗಡಿಗೆ ಬಂದು ಟೀ, ಸಿಗರೇಟು ಸೇವಿಸಿ ಹಣ ನೀಡದೆ ತೆರಳುತ್ತಿದ್ದರು. ಅಲ್ಲದೆ, ಇದನ್ನು ಪುಸ್ತಕದಲ್ಲಿ ಬರೆದುಕೊಳ್ಳುವಂತೆ ಮತ್ತು ಬಳಿಕ ಹಣ ಪಾವತಿಸುವುದಾಗಿ ದಂಪತಿಗೆ ಹೇಳಿದ್ದಾರೆ. ಈ ಮೊತ್ತ ಹೆಚ್ಚಾದಾಗ ದಂಪತಿ, ಇನ್ನೂ ಸಾಲ ನೀಡಲು ನಿರಾಕರಿಸಿದ್ದಾರೆ

ಈ ಕುಟುಂಬವು ಕೆಂಗೇರಿ ಉಪನಗರದ ಕಾಳಿಕಾಂಬ ದೇವಸ್ಥಾನದ ಬಳಿಯ 6ನೇ ಮುಖ್ಯ ರಸ್ತೆಯಲ್ಲಿ ವಾಸವಾಗಿದ್ದು, ಅದೇ ರಸ್ತೆಯಲ್ಲಿ ಚೌಡೇಶ್ವರಿ ಕಾಂಡಿಮೆಂಟ್ಸ್ ಅನ್ನು ಹೊಂದಿದ್ದಾರೆ.  

ಸಲ್ಮಾನ್ ಟಿಪ್ಪು ಎಂದು ಗುರುತಿಸಲಾದ ಆರೋಪಿಗಳಲ್ಲಿ ಒಬ್ಬಾತ ಅಂಗಡಿಗೆ ಯಾವಾಗಲೂ ಬರುತ್ತಿದ್ದನು. ಮಂಗಳವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ಟೀ ಮತ್ತು ಸಿಗರೇಟ್‌ಗಾಗಿ ಅಂಗಡಿಗೆ ಬಂದಿದ್ದರು ಎನ್ನಲಾಗಿದೆ. ಅಂಗಡಿಯಲ್ಲಿದ್ದ ಕುಮಾರ್ ಬಾಕಿ ಇತ್ಯರ್ಥಪಡಿಸುವಂತೆ ಕೇಳಿದ್ದಾರೆ. ಅಲ್ಲದೆ, ವಿಫಲವಾದರೆ ಹಣ ಪಾವತಿಸುವವರೆಗೂ ಬೇರೆ ಯಾವ ವಸ್ತುವನ್ನು ನೀಡುವುದಿಲ್ಲ ಎಂದಿದ್ದಾರೆ. ಇದರಿಂದ ಹತಾಶನಾದ ಸಲ್ಮಾನ್ ಕುಮಾರ್‌, ನಿಂದಿಸಲು ಆರಂಭಿಸಿದ್ದು, ಕುಮಾರ್‌ಗೆ ತಕ್ಕ ಪಾಠ ಕಲಿಸುವುದಾಗಿ ಎಚ್ಚರಿಸಿ ಅಲ್ಲಿಂದ ತೆರಳಿದ್ದಾನೆ.

ಸಂಜೆ 5.50ರ ಸುಮಾರಿಗೆ ಟಿಪ್ಪು ತನ್ನ ಸಹಚರರೊಂದಿಗೆ ವಾಪಸಾಗಿದ್ದಾನೆ. ಈ ವೇಳೆ ಅಂಗಡಿಗೆ ನುಗ್ಗಿ ಕೆಲ ವಸ್ತುಗಳನ್ನು ಒಡೆದಿದ್ದಾನೆ. ಆರೋಪಿಗಳು ಥಳಿಸಲು ಪ್ರಾರಂಭಿಸಿದ ನಂತರ ಕುಮಾರ್ ಸಹಾಯಕ್ಕಾಗಿ ಕಿರುಚಲು ಪ್ರಾರಂಭಿಸಿದ್ದಾರೆ. ಕಿರುಚಾಟ ಕೇಳಿ ಪತಿಗೆ ಸಹಾಯ ಮಾಡಲು ಬಂದ ದಿವ್ಯಶ್ರೀ ಮೇಲೆ ಹಲ್ಲೆ ನಡೆಸಿ ಕಪಾಳಮೋಕ್ಷ ಮಾಡಿದ್ದಾರೆ. ಆರೋಪಿಗಳು ದಂಪತಿಯ ಮಗನನ್ನೂ ಬಿಡದೆ ಕಲ್ಲಿನಿಂದ ಹಲ್ಲೆ ನಡೆಸಿದ್ದಾರೆ ಎಂದು ತನಿಖೆಯ ಭಾಗವಾಗಿರುವ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ನೆರೆಹೊರೆಯವರು ಮತ್ತು ದಾರಿಹೋಕರು ಅವರನ್ನು ರಕ್ಷಿಸಲು ಬಂದಾಗ, ಅವರು ತಮ್ಮ ಕಾರಿನಲ್ಲಿ ಎಸ್ಕೇಪ್ ಆಗಿದ್ದಾರೆ. ಕುಮಾರ್ ಬುಧವಾರ ರಾತ್ರಿ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಗುರುವಾರ ಟಿಪ್ಪುವನ್ನು ಬಂಧಿಸಿದ್ದು, ಇತರ ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಕೆಂಗೇರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here