Home Uncategorized ಬೆಂಗಳೂರಿನಲ್ಲಿ ಅವಾಂತರ: ದೈತ್ಯ ಅರಳಿ ಮರ ಬಿದ್ದು ಯುವಕನಿಗೆ ಗಂಭೀರ ಗಾಯ

ಬೆಂಗಳೂರಿನಲ್ಲಿ ಅವಾಂತರ: ದೈತ್ಯ ಅರಳಿ ಮರ ಬಿದ್ದು ಯುವಕನಿಗೆ ಗಂಭೀರ ಗಾಯ

6
0
Advertisement
bengaluru

ಚಂದ್ರಿಕಾ ಹೋಟೆಲ್ ಜಂಕ್ಷನ್ ಎಂದೂ ಕರೆಯಲ್ಪಡುವ ಕನ್ನಿಂಗ್‌ಹ್ಯಾಮ್-ಮಿಲ್ಲರ್ಸ್ ರಸ್ತೆ ಜಂಕ್ಷನ್‌ನಲ್ಲಿ ಶುಕ್ರವಾರ ಸಂಜೆ ದೈತ್ಯ ಅರಳಿ ಮರವೊಂದು ಕುಸಿದು ಬಿದ್ದಿದ್ದು, 18 ವರ್ಷದ ಪಾದಚಾರಿಯೊಬ್ಬರಿಗೆ ಗಂಭೀರ ಗಾಯಗಳಾಗಿವೆ. ಬೆಂಗಳೂರು: ಚಂದ್ರಿಕಾ ಹೋಟೆಲ್ ಜಂಕ್ಷನ್ ಎಂದೂ ಕರೆಯಲ್ಪಡುವ ಕನ್ನಿಂಗ್‌ಹ್ಯಾಮ್-ಮಿಲ್ಲರ್ಸ್ ರಸ್ತೆ ಜಂಕ್ಷನ್‌ನಲ್ಲಿ ಶುಕ್ರವಾರ ಸಂಜೆ ದೈತ್ಯ ಅರಳಿ ಮರವೊಂದು ಕುಸಿದು ಬಿದ್ದಿದ್ದು, 18 ವರ್ಷದ ಪಾದಚಾರಿಯೊಬ್ಬರಿಗೆ ಗಂಭೀರ ಗಾಯಗಳಾಗಿವೆ.

ಯುವಕನ ಸ್ಥಿತಿ ಚಿಂತಾಜನಕವಾಗಿದೆ ಎಂದು ಚಿಕಿತ್ಸೆ ನೀಡುತ್ತಿರುವ ವೈದ್ಯರು ತಿಳಿಸಿದ್ದಾರೆ.

ಚಿಕ್ಕಬಳ್ಳಾಪುರದ ಕೆವಿ ರಾಜಶೇಖರ್ ಎಂಬ ವಿದ್ಯಾರ್ಥಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಮರ ಮೇಲೆ ಬಿದ್ದಿದೆ. ಪರಿಣಾಮ ಅವರ ಪೆಲ್ವಿಕ್ ಮೂಳೆ ಒಡೆದು ತೀವ್ರ ಆಂತರಿಕ ರಕ್ತಸ್ರಾವ ಉಂಟಾಗಿದೆ. ಮಿಲ್ಲರ್ಸ್ ರಸ್ತೆಯಲ್ಲಿರುವ ಮಣಿಪಾಲ ವಿಕ್ರಮ್ ಆಸ್ಪತ್ರೆಯ ವೈದ್ಯರು ರಾಜಶೇಖರ್ ಅವರು ಬಹು ಮುರಿತಗಳು ಮತ್ತು ರಕ್ತದ ನಷ್ಟದಿಂದಾಗಿ ಗಂಭೀರರಾಗಿದ್ದಾರೆ ಎಂದು ಹೇಳಿದ್ದಾರೆ.

ತೆರವು ಕಾರ್ಯ ನಡೆಯುತ್ತಿರುವಾಗಲೇ ಮರವು ಮೂರು ಭಾಗಗಳಾಗಿ ಒಡೆದು ಕ್ರಮೇಣ ಬಿದ್ದಿದೆ ಎಂದು ಸಂಚಾರ ಪೊಲೀಸರು ತಿಳಿಸಿದ್ದಾರೆ. ಮೊದಲ ಭಾಗವು ರಾತ್ರಿ 7.15 ರ ಸುಮಾರಿಗೆ ಬಿದ್ದರೆ, ಉಳಿದ ಭಾಗವು ರಾತ್ರಿ 9 ರ ಸುಮಾರಿಗೆ ಕೆಳಗೆ ಬಿದ್ದಿದೆ.

bengaluru bengaluru

ಸಮೀಪದಲ್ಲೇ ಕರ್ತವ್ಯ ನಿರ್ವಹಿಸುತ್ತಿದ್ದ ಶ್ರೀಮಂತ್ ಎಂಬ ಪೊಲೀಸ್ ಪೇದೆ ಘಟನಾ ಸ್ಥಳಕ್ಕೆ ಧಾವಿಸಿ ನೋಡಿದಾಗ ಮರದ ಕೆಳಗೆ ಹಲವು ವಾಹನಗಳು ನಜ್ಜುಗುಜ್ಜಾಗಿರುವುದು ಕಂಡು ಬಂದಿದೆ. ಕೆಲವು ರೆಂಬೆ ಮತ್ತು ಕೊಂಬೆಗಳು ನನ್ನ ಮೇಲೂ ಬಿದ್ದವು. ಆದರೆ, ನನಗೆ ಯಾವುದೇ ಗಾಯಗಳಾಗಿಲ್ಲ. ಅಪಘಾತದಿಂದ ತತ್ತರಿಸಿ ಹೋಗಿದ್ದೇನೆ ಎಂದು ಹೇಳಿದರು.

ಸಂಚಾರ ಪೊಲೀಸರು, ಕಾನೂನು ಸುವ್ಯವಸ್ಥೆ ಹಾಗೂ ಬಿಬಿಎಂಪಿಯ ಅರಣ್ಯ ಇಲಾಖೆ ರಕ್ಷಣಾ ಮತ್ತು ತೆರವು ಕಾರ್ಯದಲ್ಲಿ ತೊಡಗಿದೆ.

ಜಂಟಿ ಪೊಲೀಸ್ ಆಯುಕ್ತ (ಸಂಚಾರ) ಎಂ.ಎನ್. ಅನುಚೇತ್ ಮಾತನಾಡಿ, ರಾತ್ರಿ 9 ಗಂಟೆಯ ಹೊತ್ತಿಗೆ ಏಳು ಕಾರುಗಳು ಮರದ ಕೆಳಗೆ ಸಿಲುಕಿ ನಜ್ಜುಗುಜ್ಜಾಗಿವೆ ಮತ್ತು ಮೂರು ದ್ವಿಚಕ್ರ ವಾಹನಗಳು ಸಹ ಕೊಂಬೆಗಳ ಭಾರಕ್ಕೆ ಕೆಳಗೆ ಬಿದ್ದಿವೆ. ಆದಾಗ್ಯೂ, ರಕ್ಷಣಾ ಕಾರ್ಯಗಳು ನಡೆಯುತ್ತಿರುವುದರಿಂದ ಹಾನಿಗೊಳಗಾದ ವಾಹನಗಳ ನಿಖರವಾದ ಸಂಖ್ಯೆಯನ್ನು ಇನ್ನೂ ನಿರ್ಧರಿಸಲಾಗಿಲ್ಲ ಎಂದರು.

ರಾಜಶೇಖರ್ ಅವರ ಜೊತೆಗೆ ಇತರ ಇಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅನುಚೇತ್ ತಿಳಿಸಿದರು.

ಟ್ರಾಫಿಕ್ ಪೊಲೀಸರು ಬಾಳೇಕುಂದ್ರಿ ವೃತ್ತ ಮತ್ತು ಕಲ್ಪನಾ ವೃತ್ತದಿಂದ ವಾಹನಗಳ ಮಾರ್ಗವನ್ನು ಬದಲಾಯಿಸಿದ್ದು, ಅಪಘಾತದಿಂದಾಗಿ ಈ ಪ್ರದೇಶದಲ್ಲಿ ಗಮನಾರ್ಹ ಟ್ರಾಫಿಕ್ ಜಾಮ್ ಉಂಟಾಗಿದೆ.


bengaluru

LEAVE A REPLY

Please enter your comment!
Please enter your name here