Home Uncategorized ಬೆಂಗಳೂರು: ನೆರೆಹೊರೆಯವರ ಮುಂದೆ ಕೂಗಾಡಿದ ಕುಡುಕ ತಂದೆಯ ಹತ್ಯೆಗೈದ ಪುತ್ರ

ಬೆಂಗಳೂರು: ನೆರೆಹೊರೆಯವರ ಮುಂದೆ ಕೂಗಾಡಿದ ಕುಡುಕ ತಂದೆಯ ಹತ್ಯೆಗೈದ ಪುತ್ರ

10
0
bengaluru

ನೆರೆಹೊರೆಯವರ ಮುಂದೆ ಕುಟುಂಬಸ್ಥರ ಮೇಲೆ ಕೂಗಾಡಿದ ಕುಡಕ ತಂದೆಯನ್ನು ಪುತ್ರನೊಬ್ಬ ಹತ್ಯೆ ಮಾಡಿರುವ ಘಟನೆ ನರಗುಂದ ತಾಲೂಕಿನ ಹದ್ಲಿ ಗ್ರಾಮದಲ್ಲಿ ನಡೆದಿದೆ. ಗದಗ: ನೆರೆಹೊರೆಯವರ ಮುಂದೆ ಕುಟುಂಬಸ್ಥರ ಮೇಲೆ ಕೂಗಾಡಿದ ಕುಡಕ ತಂದೆಯನ್ನು ಪುತ್ರನೊಬ್ಬ ಹತ್ಯೆ ಮಾಡಿರುವ ಘಟನೆ ನರಗುಂದ ತಾಲೂಕಿನ ಹದ್ಲಿ ಗ್ರಾಮದಲ್ಲಿ ನಡೆದಿದೆ.

ಮಲಕಸಾಬ್ ಕಾಳೇಖಾನ್ (40) ಮೃತ ವ್ಯಕ್ತಿಯಾಗಿದ್ದಾರೆ. ಮೌಲಾಸಾಬ್ ಕಾಳೇಖಾನ್ ತಂದೆಯನ್ನು ಹತ್ಯೆ ಮಾಡಿದ ವ್ಯಕ್ತಿಯಾಗಿದ್ದಾರೆ.

ಫೆಬ್ರವರಿ 16ರ ರಾತ್ರಿ 10 ಗಂಟೆ ಸುಮಾರಿಗೆ ಮಲಕಸಾಬ್ ಕಾಳೇಖಾನ್ ಕುಡಿದು ಮನೆಗೆ ಬಂದಿದ್ದು, ಹೊರಗೆ ನಿಂತು ಕುಟುಂಬಸ್ಥರ ಮೇಲೆ ಕೂಗಾಡಲು ಆರಂಭಿಸಿದ್ದಾರೆ. ಈ ವೇಳೆ ಕುಟುಂಬಸ್ಥರು ಮನೆಗೆ ಬಂದು ಕುಳಿತು ಮಾತನಾಡುವಂತೆ ತಿಳಿಸಿದ್ದಾರೆ. ಆದರೂ ಕೇಳದ ಮಲಕಸಾಬ್ ಕೂಗಾಡುವುದನ್ನು ಮುಂದುವರೆಸಿದ್ದಾರೆ. ಇದರಿಂದ ಕೋಪಗೊಂಡ ಮಲಕಸಾಬ್ ಅವರು ಕೊಡಲಿ ತೆಗೆದುಕೊಂಡು ತಂದೆಯ ಕುತ್ತಿಗೆಗೆ ಹೊಡೆದಿದ್ದಾನೆ.

ಕೂಡಲೇ ಮಲಕಸಾಬ್ ಕೆಳಗೆ ಬಿದ್ದಿದ್ದು, ನೆರೆಮನೆಯವರು 108 ಆ್ಯಂಬುಲೆನ್ಸ್’ಕರೆ ಮಾಡಿ ನರಗುಂದ ತಾಲೂಕು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್’ಗೆ ಕರೆದೊಯ್ಯುವಂತೆ ಸಲಹೆ ನೀಡಿದ್ದಾರೆ. ಕಿಮ್ಸ್’ಗೆ ಕರೆದೊಯ್ಯುವಾಗ ಮಾರ್ಗಮಧ್ಯೆಯೇ ಮಲಕಸಾಬ್ ಅವರು ಮೃತಪಟ್ಟಿದ್ದಾರೆ.

bengaluru

ಘಟನೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮಲಕಸಾಬ್ ಅವರ ಪುತ್ರನನ್ನು ಬಂಧನಕ್ಕೊಳಪಡಿಸಿದ್ದಾರೆ.

bengaluru

LEAVE A REPLY

Please enter your comment!
Please enter your name here