Home Uncategorized ಇದು ನೆಹರೂ ಭಾರತವಲ್ಲ: ರಾಹುಲ್ ಗಾಂಧಿಯ ಚೀನಾ ಬೆದರಿಕೆ ಕುರಿತ ಹೇಳಿಕೆಗೆ ಬಿಜೆಪಿ ತಿರುಗೇಟು

ಇದು ನೆಹರೂ ಭಾರತವಲ್ಲ: ರಾಹುಲ್ ಗಾಂಧಿಯ ಚೀನಾ ಬೆದರಿಕೆ ಕುರಿತ ಹೇಳಿಕೆಗೆ ಬಿಜೆಪಿ ತಿರುಗೇಟು

7
0
Advertisement
bengaluru

ಚೀನಾ(China)ದಿಂದ ಯುದ್ಧದ ಬೆದರಿಕೆಯನ್ನು ಭಾರತ ನಿರ್ಲಕ್ಷಿಸುತ್ತಿದೆ ಎಂದು ಹೇಳಿದ್ದಕ್ಕಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ(Rahul Gandhi)ಗೆ ತಿರುಗೇಟು ನೀಡಿರುವ ಬಿಜೆಪಿ, ರಾಹುಲ್ ಗಾಂಧಿ ಸೇನೆಯ ಧೈರ್ಯವನ್ನು ಕುಗ್ಗಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದೆ ಮತ್ತು ಅವರ ಮುತ್ತಜ್ಜ ಮಾಜಿ ಪ್ರಧಾನಿ ಜವಾಹರಲಾಲ್ ನೆಹರೂ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಹಿಂದಿನ ದಿನ ಭಾರತ್ ಜೋಡೋ ಯಾತ್ರೆಯ ನಿಲುಗಡೆಯಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಗಾಂಧಿ, ಚೀನಾ ಯುದ್ಧಕ್ಕೆ ತಯಾರಿ ನಡೆಸುತ್ತಿದೆ ಆದರೆ ಭಾರತ ಸರ್ಕಾರ ಮಾತ್ರ ಯಾವುದೇ ಚಿಂತೆ ಇಲ್ಲದೆ ನಿದ್ರಿಸುತ್ತಿದೆ ಹಾಗೂ ಬೆದರಿಕೆಯನ್ನು ನಿರ್ಲಕ್ಷಿಸುತ್ತಿದೆ ಎಂದು ಆರೋಪಿಸಿದ್ದರು.

ಇದಕ್ಕೆ ಪ್ರತಿಕ್ರಿಯಿಸಿರುವ ಬಿಜೆಪಿ ವಕ್ತಾರ ರಾಜ್ಯವರ್ಧನ್ ಸಿಂಗ್ ರಾಥೋಡ್, ರಾಹುಲ್ ಗಾಂಧಿ ಚೀನಾದೊಂದಿಗೆ ಸಾಮೀಪ್ಯ ಇರಬೇಕು ಎಂದು ಭಾವಿಸಿದ್ದಾರೆ. ಈಗ ಅವರು ತುಂಬಾ ಸಾಮೀಪ್ಯವನ್ನು ಬೆಳೆಸಿಕೊಂಡಿದ್ದಾರೆ, ಚೀನಾ ಏನು ಮಾಡುತ್ತದೆ ಎಂದು ಅವರಿಗೆ ತಿಳಿದಿದೆ ಎಂದು ಹೇಳಿದ್ದಾರೆ.

ಆದರೆ, 2014 ರಲ್ಲಿ ನರೇಂದ್ರ ಮೋದಿ ಸರ್ಕಾರ ಅಧಿಕಾರ ವಹಿಸಿಕೊಂಡ ನಂತರ ಗಡಿ ಮೂಲಸೌಕರ್ಯಗಳ ವೆಚ್ಚದಲ್ಲಿ ಮೂರು ಬಾರಿ ಹೆಚ್ಚಳವಾಗಿದೆ. ದೇಶವು ಈಗ ತನ್ನ ಗಡಿ ಮತ್ತು ಪ್ರದೇಶವನ್ನು ದೃಢವಾಗಿ ಕಾಪಾಡುತ್ತಿದೆ ಎಂದು ಅವರು ಹೇಳಿದರು.

bengaluru bengaluru

ಮತ್ತಷ್ಟು ಓದಿ: ಚೀನಾ ಯುದ್ಧಕ್ಕೆ ಅಣಿಯಾಗುತ್ತಿದೆ, ಇಲ್ಲಿ ಕೇಂದ್ರ ಸರ್ಕಾರ ನಿದ್ದೆ ಮಾಡುತ್ತಿದೆ: ರಾಹುಲ್ ಗಾಂಧಿ

ರಾಷ್ಟ್ರೀಯ ಭದ್ರತೆಯ ಬಗ್ಗೆ ಬೇಜವಾಬ್ದಾರಿ ಟೀಕೆಗಳನ್ನು ಮಾಡಬಾರದು ಎಂದು ಅವರು ಹೇಳಿದರು. ರಾಜೀವ್ ಗಾಂಧಿ ಫೌಂಡೇಶನ್ ಚೀನಾದಿಂದ ಹಣ ತೆಗೆದುಕೊಂಡಿರುವುದರಿಂದ ರಾಹುಲ್ ಗಾಂಧಿಯವರ ಅಭಿಪ್ರಾಯವನ್ನು ಗಂಭೀರವಾಗಿ ಪರಿಗಣಿಸುವ ಅಗತ್ಯವಿಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.

ಇದೊಂದು ರೀತಿಯ ಭ್ರಷ್ಟಾಚಾರ. ಪಂಡಿತ್ ನೆಹರೂ ಮತ್ತು ಕಾಂಗ್ರೆಸ್ ಆಡಳಿತದಲ್ಲಿ ನಮ್ಮ ಭೂಮಿ ಚೀನಾಕ್ಕೆ ಹೋಯಿತು ಎಂದು ಎಲ್ಲರಿಗೂ ತಿಳಿದಿದೆ. ರಾಹುಲ್ ಗಾಂಧಿ ಅವರನ್ನು ಗಂಭೀರವಾಗಿ ಪರಿಗಣಿಸಬಾರದು’ ಎಂದು ಜೋಶಿ ವಾಗ್ದಾಳಿ ನಡೆಸಿದ್ದಾರೆ

ನಮ್ಮ ಸೈನಿಕರು ಚೀನಾ ಸೈನಿಕರಿಗೆ ತಕ್ಕ ಪ್ರತ್ಯುತ್ತರ ನೀಡಿದ್ದಾರೆ. ಆದರೂ, ರಾಹುಲ್ ಗಾಂಧಿ ಅವರು ಚೀನಾ ಸೈನಕರೇ ನಮ್ಮ ಸೈನಿಕರನ್ನು ಹೊಡೆದಿದ್ದಾರೆ ಎಂಬುದಾಗಿ ರಾಹುಲ್‌ ಹೇಳಿದ್ದಾರೆ ಎಂದು ಬಿಜೆಪಿ ವಕ್ತಾರ ಪೂನಾವಾಲಾ ಹೇಳಿದ್ದಾರೆ.
ಚೀನಾವು ನಮ್ಮ ಭೂಮಿಯನ್ನು ವಶಪಡಿಸಿಕೊಂಡಿದೆ. ಅವರು ನಮ್ಮ ಸೈನಿಕರನ್ನು ಹೊಡೆದು ಹಾಕುತ್ತಿದ್ದಾರೆ.

ಚೀನಾದ ಬೆದರಿಕೆ ಸ್ಪಷ್ಟವಾಗಿದೆ. ಆದರೆ, ನಮ್ಮ ಸರ್ಕಾರ ಈ ವಾಸ್ತವವನ್ನು ಮರೆಮಾಡುತ್ತಿದೆ. ಎಲ್ಲವನ್ನೂ ನಿರ್ಲಕ್ಷಿಸುತ್ತಿದೆ. ಲಡಾಖ್ ಮತ್ತು ಅರುಣಾಚಲದಲ್ಲಿ ಚೀನಾ ಆಕ್ರಮಣಕ್ಕೆ ತಯಾರಿ ನಡೆಸುತ್ತಿದೆ. ನಮ್ಮ ಸರ್ಕಾರ ಮಾತ್ರ ನಿದ್ರಿಸುತ್ತಿದೆ ಎಂದು ರಾಹುಲ್‌ ಆರೋಪಿಸಿದ್ದರು.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 


bengaluru

LEAVE A REPLY

Please enter your comment!
Please enter your name here