Home Uncategorized ಬೆಂಗಳೂರು: ಶೂ ಗೋದಾಮಿನಲ್ಲಿ ಅಗ್ನಿ ಅವಘಡ; 4 ಕೋಟಿ ರೂ. ಮೌಲ್ಯದ ಚಪ್ಪಲಿ- ಶೂ ಬೆಂಕಿಗಾಹುತಿ

ಬೆಂಗಳೂರು: ಶೂ ಗೋದಾಮಿನಲ್ಲಿ ಅಗ್ನಿ ಅವಘಡ; 4 ಕೋಟಿ ರೂ. ಮೌಲ್ಯದ ಚಪ್ಪಲಿ- ಶೂ ಬೆಂಕಿಗಾಹುತಿ

3
0
Advertisement
bengaluru

ಚಪ್ಪಲಿ ಗೋದಾಮಿನಲ್ಲಿ ನಿನ್ನೆ ತಡರಾತ್ರಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಕೋಟ್ಯಂತರ ರೂಪಾಯಿ ಮೌಲ್ಯದ ಚಪ್ಪಲಿ, ಶೂ ಸೇರಿದಂತೆ ಅನೇಕ ವಸ್ತುಗಳು ಅಗ್ನಿಗೆ ಆಹುತಿಯಾಗಿರುವ ಘಟನೆ ಕೆಂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ  ನಡೆದಿದೆ. ಬೆಂಗಳೂರು: ಚಪ್ಪಲಿ ಗೋದಾಮಿನಲ್ಲಿ ನಿನ್ನೆ ತಡರಾತ್ರಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಕೋಟ್ಯಂತರ ರೂಪಾಯಿ ಮೌಲ್ಯದ ಚಪ್ಪಲಿ, ಶೂ ಸೇರಿದಂತೆ ಅನೇಕ ವಸ್ತುಗಳು ಅಗ್ನಿಗೆ ಆಹುತಿಯಾಗಿರುವ ಘಟನೆ ಕೆಂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ  ನಡೆದಿದೆ.

ಕೆಂಗೇರಿ ಸ್ಯಾಟಲೈಟ್ ಟೌನ್‌ನ ಹರ್ಷಾ ಲೇಔಟ್‌ನಲ್ಲಿರುವ ಯುನಿಕಾರ್ನ್ ಮಾರ್ಕೆಟಿಂಗ್ ಬೆಂಗಳೂರು ಪ್ರೈವೇಟ್ ಲಿಮಿಟೆಡ್ ಮತ್ತು ಎಎಸ್‌ಆರ್ ಮಾರ್ಕೆಟಿಂಗ್‌ಗೆ ಸೇರಿದ ಗೋದಾಮುಗಳಲ್ಲಿ ರಾತ್ರಿ 10.20 ರ ಸುಮಾರಿಗೆ ಈ ಘಟನೆ ಸಂಭವಿಸಿದ್ದು, ಸುಮಾರು 4 ಕೋಟಿ ರು ಮೌಲ್ಯದ ಚಪ್ಪಲಿ ಶೂ ಬೆಂಕಿಗಾಹುತಿಯಾಗಿವೆಯ

ಗೋಡೌನ್​ ಬಳಿಯ ವಿದ್ಯುತ್ ಕಂಬಕ್ಕೆ ಕ್ಯಾಂಟರ್​ ಡಿಕ್ಕಿ ಹೊಡೆದಿದ್ದು, ಪರಿಣಾಮ  ಶ್ರೀನಿವಾಸ್ ಎಂಬುವವರಿಗೆ ಸೇರಿದ ಗೋಡೌನ್​​ಗೆ ಸಂಪರ್ಕಿಸಿದ್ದ ವಿದ್ಯುತ್ ​​​ತಂತಿಯಿಂದ ಶಾರ್ಟ್​ಸರ್ಕ್ಯೂಟ್ ಉಂಟಾಗಿ ಈ ಅವಘಡ ಸಂಭವಿಸಿದೆ.

ಅಗ್ನಿ ಅವಘಡದಿಂದ ಗೋಡೌನ್​​​​​ನಲ್ಲಿದ್ದ ಅಪಾರ ಮೌಲ್ಯ ಶೂ, ಚಪ್ಪಲಿ ನಾಶಗೊಂಡವೆ. ಪ್ರತಿಷ್ಠಿತ ಕಂಪನಿಗಳ ಶೂ, ಚಪ್ಪಲಿಗಳನ್ನು ಶ್ರೀನಿವಾಸ್ ಅವರು ವಿತರಣೆ ಮಾಡುತ್ತಿದ್ದರು. ಬೆಂಗಳೂರಿನ ಬಹುತೇಕ ಅಂಗಡಿಗಳಿಗೆ ಶೂ, ಚಪ್ಪಲಿಗಳು ಈ ಗೋಡೌನ್​ನಿಂದಲೇ ಪೂರೈಕೆ ಆಗುತ್ತಿದ್ದವು. ಹೀಗಾಗಿ ಕೋಟ್ಯಾಂತರ ರೂಪಾಯಿ ಮೌಲ್ಯದ ಚಪ್ಪಲಿ ಶೂಗಳನ್ನು ಇಲ್ಲಿ ಶೇಖರಿಸಿ ಇಡಲಾಗಿತ್ತು.

bengaluru bengaluru

ಇದನ್ನೂ ಓದಿ: ಗುಂಡ್ಲುಪೇಟೆ: ಮಹಿಳೆ, ಇಬ್ಬರು ಮಕ್ಕಳು ಅನುಮಾನಾಸ್ಪದ ಸಾವು; ಪತಿಯಿಂದ ಕೊಲೆ ಶಂಕೆ, ಸ್ಥಳದಿಂದ ಪರಾರಿ!

20 ಲಕ್ಷ ಮೌಲ್ಯದ ಪಾದರಕ್ಷೆಗಳನ್ನು ಇಳಿಸಿದ ನಂತರ ಗೋದಾಮಿನ ವ್ಯವಸ್ಥಾಪಕ ಶ್ರೀನಿವಾಸ್ ಹೋದ ಸ್ವಲ್ಪ ಸಮಯದಲ್ಲೇ ಬೆಂಕಿ ಕಾಣಿಸಿಕೊಂಡಿದೆ.  ಗೋದಾಮಿನ ಗೇಟ್ ಬಳಿ ರಿವರ್ಸ್ ತೆಗೆದುಕೊಳ್ಳುತ್ತಿದ್ದ ಟ್ರಕ್ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ, ಕಳಪೆ  ಗುಣಮಟ್ಟದ ವಿದ್ಯುತ್ ಕಂಬ ಮುರಿದು ಬಿದ್ದಿದೆ ಎಂದು  ಯೂನಿಕಾರ್ನ್ ಮಾರ್ಕೆಟಿಂಗ್‌ನ ವ್ಯವಸ್ಥಾಪಕರ ಪತ್ನಿ ಮತ್ತು ಉದ್ಯೋಗಿಯೂ ಆಗಿರುವ ಅಂಬಿಕಾ ಶ್ರೀನಿವಾಸ್ ಹೇಳಿದ್ದಾರೆ.

ವಿದ್ಯುತ್ ಕಂಬವು ರಸ್ತೆಯ ಮೇಲೆ ಕುಸಿದು ಬಿದ್ದಿದ್ದು, ವೈರಿಂಗ್ ಸಡಿಲಗೊಂಡಿದ್ದರಿಂದ ಗೋದಾಮಿನೊಳಗೆ ಶಾರ್ಟ್ ಸರ್ಕ್ಯೂಟ್ ಉಂಟಾಗಿ ಬೆಂಕಿ ಹೊತ್ತಿಕೊಂಡಿದೆ ಎಂದು ವರದಿಯಾಗಿದೆ.

10 ಅಗ್ನಿಶಾಮಕ ಟೆಂಡರ್‌ಗಳು  ಬೆಂಕಿಯನ್ನು ನಿಯಂತ್ರಿಸಲು ಸ್ಥಳಕ್ಕೆ ಆಗಮಿಸಿತು, ಆದರೆ 20 ನಿಮಿಷಗಳಲ್ಲಿ, ಗೋದಾಮಿನ ದಾಖಲೆಗಳನ್ನು ಒಳಗೊಂಡಿರುವ ಕಂಪ್ಯೂಟರ್ ಸಿಸ್ಟಮ್‌ಗಳನ್ನು ಹೊರತುಪಡಿಸಿ, 4 ಕೋಟಿ ರೂಪಾಯಿಗಳಿಗೂ ಹೆಚ್ಚು ಮೌಲ್ಯದ ಪಾದರಕ್ಷೆಗಳು ಈಗಾಗಲೇ ಸುಟ್ಟುಹೋಗಿವೆ


bengaluru

LEAVE A REPLY

Please enter your comment!
Please enter your name here