Home Uncategorized ಬೆಳಗಾವಿ: ಧಾರವಾಡದಿಂದ ಬಂದ ರೈಲಿನಲ್ಲಿ 3 ವರ್ಷದ ಬಾಲಕಿಯ ಶವ ಪತ್ತೆ

ಬೆಳಗಾವಿ: ಧಾರವಾಡದಿಂದ ಬಂದ ರೈಲಿನಲ್ಲಿ 3 ವರ್ಷದ ಬಾಲಕಿಯ ಶವ ಪತ್ತೆ

6
0
bengaluru

ಬುಧವಾರ ಸಂಜೆ ಧಾರವಾಡದಿಂದ ಬೆಳಗಾವಿಗೆ ಬಂದ ಪ್ಯಾಸೆಂಜರ್ ರೈಲಿನ ಸೀಟಿನ ಕೆಳಗೆ ಮೂರು ವರ್ಷದ ಬಾಲಕಿಯ ಶವ ಪತ್ತೆಯಾಗಿದೆ. ಬೆಳಗಾವಿ: ಬುಧವಾರ ಸಂಜೆ ಧಾರವಾಡದಿಂದ ಬೆಳಗಾವಿಗೆ ಬಂದ ಪ್ಯಾಸೆಂಜರ್ ರೈಲಿನ ಸೀಟಿನ ಕೆಳಗೆ ಮೂರು ವರ್ಷದ ಬಾಲಕಿಯ ಶವ ಪತ್ತೆಯಾಗಿದೆ.

ಮೂಲಗಳ ಪ್ರಕಾರ, ಮೈಸೂರು-ಧಾರವಾಡ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ: 07357) ಮಧ್ಯಾಹ್ನ 1 ಗಂಟೆಗೆ ಬೆಳಗಾವಿ ರೈಲು ನಿಲ್ದಾಣವನ್ನು ತಲುಪಿತು. ಎಸ್ 3 ಕೋಚ್ ನ ಸೀಟ್ ನಂ. 20ರ ಕೆಳಗೆ ಸಂಜೆ 4 ಗಂಟೆ ಸುಮಾರಿಗೆ ರೈಲ್ವೇ ಸಿಬ್ಬಂದಿ ಸ್ವಚ್ಛಗೊಳಿಸುತ್ತಿದ್ದಾಗ ಗುಲಾಬಿ ಬಣ್ಣದ ಸ್ಲೀವ್ ಲೆಸ್ ಫ್ರಾಕ್ ಧರಿಸಿದ್ದ ಬಾಲಕಿಯ ಶವ ಪತ್ತೆಯಾಗಿದೆ.

ಇದನ್ನೂ ಓದಿ: ಬೆಂಗಳೂರು: ರೈಲು ನಿಲ್ದಾಣದಲ್ಲಿ ಡ್ರಮ್ ನಲ್ಲಿ ಮಹಿಳೆ ಮೃತದೇಹ ಪತ್ತೆ ಪ್ರಕರಣ; ಮೂವರ ಬಂಧನ

ಕೂಡಲೇ ಕಾರ್ಮಿಕರು ತಮ್ಮ ಮೇಲಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಅವರು ರೈಲ್ವೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮೃತದೇಹದಲ್ಲಿ ಯಾವುದೇ ಗಾಯದ ಗುರುತುಗಳಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಮುಂದಿನ ತನಿಖೆ ನಡೆಯುತ್ತಿದೆ.

bengaluru
bengaluru

LEAVE A REPLY

Please enter your comment!
Please enter your name here