Home Uncategorized ಮಂಗಳೂರಿನಲ್ಲಿ ಹೆಚ್ಚಾದ ನೈತಿಕ ಪೊಲೀಸ್ ಗಿರಿ: ಹಿಂದೂ ಯುವತಿ- ಮುಸ್ಲಿಂ ಯುವಕ ಪ್ರಯಾಣಿಸುತ್ತಿದ್ದ ಬಸ್...

ಮಂಗಳೂರಿನಲ್ಲಿ ಹೆಚ್ಚಾದ ನೈತಿಕ ಪೊಲೀಸ್ ಗಿರಿ: ಹಿಂದೂ ಯುವತಿ- ಮುಸ್ಲಿಂ ಯುವಕ ಪ್ರಯಾಣಿಸುತ್ತಿದ್ದ ಬಸ್ ತಡೆದು ಭಜರಂಗದಳ ಕಾರ್ಯಕರ್ತರ ಗಲಾಟೆ

14
0

ಮಂಗಳೂರು: ದಕ್ಷಿಣಕನ್ನಡ ಜಿಲ್ಲೆಯಲ್ಲಿ ನೈತಿಕ ಪೊಲೀಸ್ ಗಿರಿ(Moral Policing) ಪ್ರಕರಣ ಹೆಚ್ಚಾಗುತ್ತಿದೆ. ಕಳೆದ ಎರಡು ವಾರಗಳ ಅಂತರದಲ್ಲಿ ಈ ರೀತಿಯ ಆರು ಪ್ರಕರಣಗಳು ವರದಿಯಾಗಿದ್ದು ಇದೀಗ ಬಸ್​ನಲ್ಲಿ ಬೆಂಗಳೂರಿಗೆ ತೆರಳುತ್ತಿದ್ದ ಹಿಂದೂ-ಮುಸ್ಲಿಂ(Hindu Muslim Couple) ಜೋಡಿ ತಡೆದು ಭಜರಂಗದಳ(Bajrang Dal) ನೈತಿಕ ಪೊಲೀಸ್ ಗಿರಿ ಮೆರೆದಿದೆ.

ದ‌‌.ಕ ಜಿಲ್ಲೆಯ ಬಂಟ್ವಾಳ ತಾಲೂಕಿನ ಕಲ್ಲಡ್ಕದ ದಾಸಕೋಡಿ ಬಳಿ ಮುಸ್ಲಿಂ ಯುವಕ ಮಹಮ್ಮದ್ ರಾಯಿಫ್​ನೊಂದಿಗೆ ಹಿಂದೂ ಯುವತಿ ನಿಧಿ ಶೆಟ್ಟಿ ಪ್ರಯಾಣಿಸುತ್ತಿದ್ದಳು. ಇದಕ್ಕೆ ಭಜರಂಗದಳ ಆಕ್ಷೇಪ ವ್ಯಕ್ತಪಡಿಸಿದೆ. ಭಜರಂಗದಳ ಕಾರ್ಯಕರ್ತರು ಪಂಪ್ ವೆಲ್ ಬಳಿ ಮುಸ್ಲಿಂ ಯುವಕ ಹಾಗೂ ಹಿಂದೂ ಯುವತಿಯನ್ನು ತಡೆಯಲು ಯತ್ನಿಸಿ ವಿಫಲರಾಗಿದ್ದಾರೆ. ಬಳಿಕ ತಕ್ಷಣವೇ ಕಲ್ಲಡ್ಕದ ಭಜರಂಗದಳ ಕಾರ್ಯಕರ್ತರಿಗೆ ಮಾಹಿತಿ ನೀಡಿದ್ದು ಅವರು ದುರ್ಗಾಂಬ ಬಸ್​ ತಡೆದು ಇಬ್ಬರನ್ನೂ ಇಳಿಸಿದ್ದಾರೆ. ನಂತರ ಯುವಕ-ಯುವತಿ ಹಾಗೂ ಕಾರ್ಯಕರ್ತರ ನಡುವೆ ಮಾತಿನ ಚಕಮಕಿಯಾಗಿದೆ. ಭಜರಂಗದಳ ಕಾರ್ಯಕರ್ತರು ಯುವತಿಗೆ ಬೈದು ಬುದ್ಧಿ ಹೇಳಿದ್ದಾರೆ, ಗಲಾಟೆ ಮಾಡಿದ್ದಾರೆ. ಬಳಿಕ ಬಂಟ್ವಾಳ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಮಧ್ಯ ಪ್ರವೇಶಿಸಿ ಪ್ರಕರಣ ಠಾಣೆಯ ಮೆಟ್ಟಿಲೇರಿದೆ.

ಇದನ್ನೂ ಓದಿ: ಕಡಿಮೆ ಜನಸಂಖ್ಯೆಯ ವಿಜಯನಗರ ಜಿಲ್ಲೆಯಾಯ್ತು! ಅದೇ ಚಿಕ್ಕೋಡಿ ಜಿಲ್ಲೆಗಾಗಿ 25 ವರ್ಷದಿಂದ ಹೋರಾಟ ನಡೆದಿದೆ

ಕೂಲಿ ಕಾರ್ಮಿಕನನ್ನು ಮರಕ್ಕೆ ಕಟ್ಟಿ ಹಾಕಿ ಮನಸೋ ಇಚ್ಛೆ ಥಳಿತ

ದಕ್ಷಿಣಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಮೂಲರಪಟ್ಣ ನಿವಾಸಿಯಾಗಿರುವ ಇಸಾಕ್ ಪ್ರತಿನಿತ್ಯ ಬಿಸಿರೋಡ್ನಿಂದ ಮೂಡಬಿದ್ರೆಗೆ ಕೆಲಸಕ್ಕಾಗಿ ಖಾಸಗಿ ಬಸ್ನಲ್ಲಿ ಸಂಚರಿಸುತ್ತಿದ್ದ. ಡಿ.14ರ ಬೆಳಗ್ಗೆಯೂ ಬಸ್ನಲ್ಲಿ ಸಂಚರಿಸುವಾಗ ರಷ್ ಇದ್ದ ಕಾರಣ ವಿದ್ಯಾರ್ಥಿನಿಯೊಬ್ಬಳು ಬ್ಯಾಗೊಂದನ್ನು ಕುಳಿತಿದ್ದ ಇಸಾಕ್ ಕೈಗೆ ಕೊಟ್ಟಿದ್ದಳು. ಆದ್ರೆ ಬಸ್ ಚಲಿಸುತ್ತಿದ್ದಂತೆ ಬಸ್ನ ನಿರ್ವಾಹಕ ಮಹಿಳೆಯರ ಮೈಕೈ ಮುಟ್ಟುತ್ತೀಯಾ ಅಂತ ಗಲಾಟೆ ಮಾಡಿ ಇಸಾಕ್ನನ್ನು ಕುದ್ಕೋಳಿಯಲ್ಲಿ ಇಳಿಸಿ ಗಲಾಟೆ ಮಾಡಿದ್ದಾನೆ. ಆಗ ಅಲ್ಲಿ ಮೊದಲೇ ಕೆಲ ಯುವಕರು ಬಂದು ನಿಂತಿದ್ದು ಅವರು ಆಟೋ ರಿಕ್ಷಾದಲ್ಲಿ ಇಸಾಕ್ನ್ನು ಹಾಕಿಕೊಂಡು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಗೋಳಿ ಮರಕ್ಕೆ ಕಟ್ಟಿ ಹಾಕಿ ಮನಸೋ ಇಚ್ಚೆ ಥಳಿಸಿದ್ದಾರೆ.

ಬಸ್ಸಿನಲ್ಲಿ ಸಂಚರಿಸುವಾಗ ಮಹಿಳೆಯರಿಗೆ, ವಿದ್ಯಾರ್ಥಿನಿಯರಿಗೆ ಕಿರುಕುಳ ನೀಡುತ್ತಿರುವುದಾಗಿ ಆರೋಪಿಸಿ ಯುವಕರ ತಂಡ ಹಲ್ಲೆ ಮಾಡಿದೆ ಎಂದು ಹಲ್ಲೆಗೊಳಗಾದ ಇಸಾಕ್ ಆರೋಪಿಸಿದ್ದಾರೆ. ಹಲ್ಲೆಯಿಂದ ಇಸಾಕ್ನ ಒಂದು ಕಣ್ಣು ಊದಿಕೊಂಡಿದ್ದು, ಬೆನ್ನು, ಕೈ ಕಾಲಿನಲ್ಲಿ ಬಾಸುಂಡೆ ಬಂದಿದೆ. ಹಲ್ಲೆಯ ಬಳಿಕ ವಿಷಯ ತಿಳಿದು ಸ್ಥಳಕ್ಕೆ ಬಂದ ಬಂಟ್ವಾಳ ಪೊಲೀಸರು ಘಟನೆಯ ಬಗ್ಗೆ ಮಾಹಿತಿ ಪಡೆದಿದ್ದಾರೆ. ಬಂಟ್ವಾಳ ತಾಲೂಕು ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಪಡೆದು ಸಂಜೆ ವೇಳೆಗೆ ಇಸಾಕ್ ಮನೆಗೆ ಬಂದಾಗ ಮೈ ಪೂರ್ತಿ ಬಾಸುಂಡೆ ಬಂದಿರೋದು ಗೊತ್ತಾಗಿದೆ.

ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹಲ್ಲೆ ಮಾಡಿರುವ ಯುವಕರ ಬಗ್ಗೆ ಪರಿಚಯವಿಲ್ಲ, ನೋಡಿದರೆ ಗುರುತಿಸುವುದಾಗಿ ಇಸಾಕ್ ಹೇಳಿದ್ದಾರೆ. ಒಟ್ಟಿನಲ್ಲಿ ಕಾರಣ ಏನೇ ಇದ್ರು ಕಾನೂನು ಕೈಗೆತ್ತಿಕೊಳ್ಳುವ ಬದಲು ಸಂಬಂಧಪಟ್ಟವರಿಗೆ ದೂರು ನೀಡಿದ್ರೆ ಈ ರೀತಿಯ ಘಟನೆಗಳು ನಡೆಯಲ್ಲ.

LEAVE A REPLY

Please enter your comment!
Please enter your name here