Home Uncategorized Weight loss! ರೈತ ಬೆಳೆದ ಶ್ರೀಗಂಧವನ್ನು ಅರಣ್ಯ ಇಲಾಖೆ ಗುಳುಂ ಮಾಡಿತಾ? ಏನಿದು ಗಂಧದ ತೂಕದಾಟ,...

Weight loss! ರೈತ ಬೆಳೆದ ಶ್ರೀಗಂಧವನ್ನು ಅರಣ್ಯ ಇಲಾಖೆ ಗುಳುಂ ಮಾಡಿತಾ? ಏನಿದು ಗಂಧದ ತೂಕದಾಟ, ಕಿತ್ತಾಟ!?

19
0

ಇತ್ತೀಚಿಗೆ ಎಲ್ಲ ಕಡೆಗೂ ಶ್ರೀಗಂಧ ಬೆಳೆಯ ಚರ್ಚೆ ಶುರುವಾಗಿದೆ. ಶ್ರೀಗಂಧ ಅತ್ಯಂತ ಹೆಚ್ಚು ಲಾಭ ತರೋ ಬೆಳೆಯಾಗಿದ್ದು, ಅನೇಕ ಕಡೆಗಳಲ್ಲಿ ರೈತರು ಈ ಬೆಳೆಯ ಮೊರೆ ಹೋಗಿದ್ದಾರೆ. ಇದೇ ಕಾರಣಕ್ಕೆ ರಾಜ್ಯ ಸರಕಾರ ಈ ಶ್ರೀಗಂಧ ಬೆಳೆಯನ್ನು ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಮಾಡೋ ಬಗ್ಗೆ ನಿರ್ಧಾರವನ್ನೂ ಮಾಡಿದೆ. ಆದರೆ ಇತ್ತ ಧಾರವಾಡದ (Dharwad) ಅರಣ್ಯ ಇಲಾಖೆಯ ಶ್ರೀಗಂಧದ ಡಿಪೋದಲ್ಲಿ ರೈತರೊಬ್ಬರು (Sandalwood grower) ನೀಡಿದ್ದ ಶ್ರೀಗಂಧದ ತೂಕದಲ್ಲಿ ಕಡಿಮೆಯಾಗಿದೆ ಅನ್ನೋ ಆರೋಪ ಕೇಳಿ ಬಂದಿದೆ. ಏನಿದು ಕಥೆ? ಇಲ್ಲಿದೆ ಒಂದು ವರದಿ…

ಧಾರವಾಡದ ಅರಣ್ಯ ಇಲಾಖೆ ಕಚೇರಿ (forest depatment) ಆವರಣದಲ್ಲಿಯೇ ಇದೆ ಶ್ರೀಗಂಧದ ಡಿಪೋ. ಉತ್ತರ ಕರ್ನಾಟಕದ ಹಲವಾರು ಜಿಲ್ಲೆಗಳ ಶ್ರೀಗಂಧ ಬೆಳೆಗಾರರು ತಮ್ಮ ಹೊಲಗಳಲ್ಲಿ ಬೆಳೆದ ಶ್ರೀಗಂಧವನ್ನು ಇಲ್ಲಿಗೆ ತಂದು ನೀಡುತ್ತಾರೆ. ಆ ಶ್ರೀಗಂಧದ ಗುಣಮಟ್ಟ ಮತ್ತು ತೂಕದ ಆಧಾರದ ಮೇಲೆ ಅರಣ್ಯ ಇಲಾಖೆ ಅಧಿಕಾರಿಗಳು ಅದರ ಬೆಲೆಯನ್ನು ನಿಗದಿಪಡಿಸುತ್ತಾರೆ.

ಇದನ್ನೂ ಓದಿ:

ಮಂಗಳೂರಿನಲ್ಲಿ ಹೆಚ್ಚಾದ ನೈತಿಕ ಪೊಲೀಸ್ ಗಿರಿ: ಹಿಂದೂ ಯುವತಿ- ಮುಸ್ಲಿಂ ಯುವಕ ಪ್ರಯಾಣಿಸುತ್ತಿದ್ದ ಬಸ್ ತಡೆದು ಭಜರಂಗದಳ ಕಾರ್ಯಕರ್ತರ ಗಲಾಟೆ

ಆದರೆ ಇದೀಗ ಇಲ್ಲಿ ತಮಗೆ ಅನ್ಯಾಯ ಮಾಡಲಾಗಿದೆ ಅಂತಾ ವಿಜಯಪುರ ಜಿಲ್ಲೆಯ ರೈತರೊಬ್ಬರು ಆರೋಪಿಸಿ, ಮೇಲಾಧಿಕಾರಿಗಳಿಗೆ ದೂರನ್ನು ಕೂಡ ನೀಡಿದ್ದಾರೆ. ಜಿಲ್ಲೆಯ ಕಪನಿಂಬರಗಿ ಗ್ರಾಮದ ರಾಮಚಂದ್ರ ಪಾಟೀಲ್ ಎಂಬುವವರು ತಮ್ಮ ಹೊಲದಲ್ಲಿ ಬೆಳೆದಿದ್ದ ಶ್ರೀಗಂಧದ ಎರಡು ಮರಗಳನ್ನು ಕತ್ತರಿಸಿ ಈ ಡಿಪೋಕ್ಕೆ ತಂದಿದ್ದರು. 2021 ಮಾರ್ಚ್ ತಿಂಗಳಲ್ಲಿ ತಂದು ನೀಡಿದಾಗ 267 ಕೆ.ಜಿ. ಇತ್ತಂತೆ. ಬಳಿಕ ಇಲ್ಲಿಗೆ ಬಂದು ತೂಕ ಮಾಡಿದಾಗ 189 ಕೆಜಿ ತೂಕ ಬಂತಂತೆ. ಮತ್ತೆ ಈ ಬಗ್ಗೆ ದೂರು ನೀಡಿದಾಗ ಮತ್ತೊಮ್ಮೆ ತೂಕ ಮಾಡಿದಾಗ ಹತ್ತು ಕೆಜಿ ಹೆಚ್ಚು ಬಂತಂತೆ. ಇದರಿಂದಾಗಿ ತಮಗೆ ಸಾಕಷ್ಟು ನಷ್ಟವಾಗಿದೆ ಅನ್ನೋದು ಶ್ರೀಗಂಧ ಬೆಳೆಗಾರ ರಾಮಚಂದ್ರ ಪಾಟೀಲ್ ಆರೋಪ.

ಇನ್ನು ಶ್ರೀಗಂಧವನ್ನು ಅದರ ಗುಣಮಟ್ಟಕ್ಕೆ ತಕ್ಕಂತೆ ಗ್ರೇಡಿಂಗ್ ಮಾಡಲಾಗುತ್ತೆ. ಅಲ್ಲಿಯೂ ಕಳೆದ ಬಾರಿ ಅವರಿಗೆ ನಷ್ಟವಾಗಿದೆ ಅನ್ನೋದು ರಾಮಚಂದ್ರ ಅವರ ಆರೋಪ. ಇದೇ ಕಾರಣಕ್ಕೆ ಇತ್ತೀಚಿಗೆ ರಾಜ್ಯ ಸರಕಾರ ಶ್ರೀಗಂಧವನ್ನು ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ಅವಕಾಶ ನೀಡಿರೋದ್ರಿಂದ, ಮುಂದಿನ ದಿನಗಳಲ್ಲಿ ಅಲ್ಲಿಯೇ ಮಾರಾಟ ಮಾಡಲು ರಾಮಚಂದ್ರ ನಿರ್ಧರಿಸಿದ್ದಾರೆ.

ಇದನ್ನೂ ಓದಿ: ಕಡಿಮೆ ಜನಸಂಖ್ಯೆಯ ವಿಜಯನಗರ ಜಿಲ್ಲೆಯಾಯ್ತು! ಅದೇ ಚಿಕ್ಕೋಡಿ ಜಿಲ್ಲೆಗಾಗಿ 25 ವರ್ಷದಿಂದ ಹೋರಾಟ ನಡೆದಿದೆ

ಇನ್ನು ಈ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳು ಹೇಳೋದೇ ಬೇರೆ. ರಾಮಚಂದ್ರ ಶ್ರೀಗಂಧ ತಂದಾಗ ಅದು ಹಸಿಯಾಗಿತ್ತು. ಇದೀಗ ಅದು ಒಣಗಿರೋ ಹಿನ್ನೆಲೆಯಲ್ಲಿ ಸಹಜವಾಗಿ ಅದರ ತೂಕ ಕಡಿಮೆಯಾಗುತ್ತೆ. ಅಲ್ಲದೇ ಅವರು ಅಲ್ಲಿಂದ ಇದನ್ನು ತರೋವಾಗಲೇ ಅಲ್ಲಿನ ಅರಣ್ಯ ಇಲಾಖೆ ಅಧಿಕಾರಿಗಳು ಉಪಯೋಗವಿಲ್ಲದ ಸಣ್ಣ ಸಣ್ಣ ಕಟ್ಟಿಗೆ ತುಂಡನ್ನು ಅಲ್ಲಿಯೇ ಕಿತ್ತೊಗೆಯಬೇಕಿತ್ತು. ಆದರೆ ಅದನ್ನು ಕೂಡ ಹಾಕಿ ಕಳಿಸಿದ್ದಾರೆ. ಆ ಸಣ್ಣ ಕಟ್ಟಿಗೆಯನ್ನು ಖರೀದಿಸಲು ಸಾಧ್ಯವಿಲ್ಲ. ಹೀಗಾಗಿ ಅದರ ತೂಕ ಸಹಜವಾಗಿ ಕಡಿಮೆಯಾಗುತ್ತೆ ಅನ್ನುತ್ತಾರೆ ಆರ್.ಎಫ್.ಒ ಅಧಿಖಾರಿ ಆರ್. ಎಸ್. ಉಪ್ಪಾರ್ ಅವರು.

ಒಟ್ಟಿನಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ರೈತ ಹಾಗೂ ಅಧಿಕಾರಿಗಳ ನಡುವೆ ಪತ್ರದ ಯುದ್ಧವೇ ನಡೆದಿದೆ. ಈ ಪ್ರಕರಣದಲ್ಲಿ ದೂರು ನೀಡಿರೋ ರಾಮಚಂದ್ರ ಪಾಟೀಲ್ ಶ್ರೀಗಂಧ ಬೆಳೆಗಾರರ ಸಂಘದ ಕಾರ್ಯಕಾರಿಣಿ ಸದಸ್ಯರೂ ಆಗಿರೋದ್ರಿಂದ ಈ ಪ್ರಕರಣವನ್ನು ಅಷ್ಟು ಸುಲಭವಾಗಿ ಪರಿಗಣಿಸುವಂತೆಯೂ ಇಲ್ಲ. ಹೀಗಾಗಿ ಈ ಪ್ರಕರಣ ಮುಂದೆ ಎಲ್ಲಿಗೆ ಹೋಗಿ ನಿಲ್ಲುತ್ತೆ ಅನ್ನೋದನ್ನು ಕಾದು ನೋಡಬೇಕಿದೆ.

ವರದಿ: ನರಸಿಂಹಮೂರ್ತಿ ಪ್ಯಾಟಿ, ಟಿವಿ 9, ಧಾರವಾಡ

ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

LEAVE A REPLY

Please enter your comment!
Please enter your name here