ಎಸ್ಟೇಟ್‌ನಲ್ಲಿದ್ದ ಶೌಚಗುಂಡಿಗೆ ಬಿದ್ದು ಕಾಡಾನೆಯೊಂದು ಮೃತಪಟ್ಟಿರುವ ಘಟನೆ ಶನಿವಾರ ಉತ್ತರ ಕೊಡಗಿನ ಶನಿವಾರಸಂತೆಯಲ್ಲಿ ನಡೆದಿದೆ. ಮಡಿಕೇರಿ: ಎಸ್ಟೇಟ್‌ನಲ್ಲಿದ್ದ ಶೌಚಗುಂಡಿಗೆ ಬಿದ್ದು ಕಾಡಾನೆಯೊಂದು ಮೃತಪಟ್ಟಿರುವ ಘಟನೆ ಶನಿವಾರ ಉತ್ತರ ಕೊಡಗಿನ ಶನಿವಾರಸಂತೆಯಲ್ಲಿ ನಡೆದಿದೆ.
ಶನಿವಾರಸಂತೆಯ ಎಳನೀರಗುಡಿ ಗ್ರಾಮದ ಖಾಸಗಿ ಎಸ್ಟೇಟ್‌ನಲ್ಲಿ ತೋಡಿದ್ದ ಶೌಚಗುಂಡಿಗೆ ಆಕಸ್ಮಿಕವಾಗಿ ಬಿದ್ದಿದ್ದ ಸುಮಾರು 20 ವರ್ಷ ಪ್ರಾಯದ ಹೆಣ್ಣು ಆನೆ ಮೃತಪಟ್ಟಿದೆ ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನು ಓದಿ: ಕೊಡಗು: ಇಬ್ಬರನ್ನು ಬಲಿಪಡೆದಿದ್ದ ಹುಲಿ ಸೆರೆ
ಮಾಲಂಬಿ ಅರಣ್ಯದ ಅಂಚಿನಲ್ಲಿ ಈ ಎಸ್ಟೇಟ್ ಇದೆ. ಗುಂಡಿಗೆ ಬಿದ್ದ ನಂತರ ಆನೆಗೆ ಆಂತರಿಕ ಗಾಯಗಳಾಗಿದ್ದು, ಹೊಂಡದಿಂದ ಹೊರಬರಲು ಸಾಧ್ಯವಾಗಿಲ್ಲ. ಶನಿವಾರ ನಸುಕಿನ ವೇಳೆ ಈ ಘಟನೆ ನಡೆದಿರುವ ಶಂಕೆ ವ್ಯಕ್ತವಾಗಿದೆ ಎಂದು ಘಟನಾ ಸ್ಥಳಕ್ಕೆ ಭೇಟಿ ನೀಡಿದ ಆರ್‌ಎಫ್‌ಒ ಪ್ರಫುಲ್ ಶೆಟ್ಟಿ ಹೇಳಿದ್ದಾರೆ.
ಆನೆಯ ಮೃತದೇಹವನ್ನು ಹೊರತೆಗೆಯಲಾಗಿದೆ. ಮರಣೋತ್ತರ ಪರೀಕ್ಷೆಯ ವರದಿ ಬಂದ ಬಳಿಕ ಆನೆ ಸಾವಿಗೆ ನಿಖರ ಕಾರಣ ತಿಳಿಯಲಿದೆ ಎಂದು ಅವರು ತಿಳಿಸಿದ್ದಾರೆ.