Home Uncategorized ಮತ್ತೆ ಕೊರೋನಾ ಸೋಂಕು 'ಜಿಗಿಜಿಗಿತ': ಇಂದಿನಿಂದ ಬಿಎಂಟಿಸಿ, ಮೆಟ್ರೋದಲ್ಲಿ ಮಾಸ್ಕ್‌ ಕಡ್ಡಾಯ!

ಮತ್ತೆ ಕೊರೋನಾ ಸೋಂಕು 'ಜಿಗಿಜಿಗಿತ': ಇಂದಿನಿಂದ ಬಿಎಂಟಿಸಿ, ಮೆಟ್ರೋದಲ್ಲಿ ಮಾಸ್ಕ್‌ ಕಡ್ಡಾಯ!

7
0
Advertisement
bengaluru

ಚೀನಾದಲ್ಲಿ ಕೊರೊನಾ ಮತ್ತೆ ಆರ್ಭಟ ಹೆಚ್ಚಾಗುತ್ತಿದ್ದಂತೆ ಕರುನಾಡಿನಲ್ಲೂ ಆತಂಕ ಹೆಚ್ಚಾಗಿದೆ. ಹೀಗಾಗಿ ಸರ್ಕಾರ ಹಲವು ನಿರ್ಧಾರ ಜಾರಿಗೆ ತಂದಿದೆ. ಈ ಮೂಲಕ ಇಂದಿನಿಂದ ಬಿಎಂಟಿಸಿ ಬಸ್​ ಹತ್ತ ಬೇಕು ಅಂದ್ರೆ ಮಾಸ್ಕ್ ಕಡ್ಡಾಯವಾಗಿ ಬೇಕು. ಬೆಂಗಳೂರು: ಚೀನಾದಲ್ಲಿ ಕೊರೊನಾ ಮತ್ತೆ ಆರ್ಭಟ ಹೆಚ್ಚಾಗುತ್ತಿದ್ದಂತೆ ಕರುನಾಡಿನಲ್ಲೂ ಆತಂಕ ಹೆಚ್ಚಾಗಿದೆ. ಹೀಗಾಗಿ ಸರ್ಕಾರ ಹಲವು ನಿರ್ಧಾರ ಜಾರಿಗೆ ತಂದಿದೆ. ಈ ಮೂಲಕ ಇಂದಿನಿಂದ ಬಿಎಂಟಿಸಿ ಬಸ್​ ಹತ್ತ ಬೇಕು ಅಂದ್ರೆ ಮಾಸ್ಕ್ ಕಡ್ಡಾಯವಾಗಿ ಬೇಕು, ಮಾರ್ಷಲ್​ಗಳು ರಸ್ತೆಗೆ ಇಳಿದಿದ್ದು ನಿಯಮ ಪಾಲಿಸಿಲ್ಲ ಅಂದ್ರೆ ಜೇಬಿಗೆ ದಂಡದ ಬರೆ ಬಿಳಲಿದೆ.

ಕೋವಿಡ್‌ ಮಹಾಮಾರಿ ಸೋಂಕು ಮತ್ತೆ ತೀವ್ರವಾಗುವ ಭೀತಿ ಹಿನ್ನೆಲೆಯಲ್ಲಿ ಬಿಎಂಟಿಸಿ ಬಸ್‌ಗಳಲ್ಲಿ ಸಂಚರಿಸುವ ಪ್ರಯಾಣಿಕರಿಗೂ ಮಾಸ್ಕ್‌ ಧರಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಈ ಸಂಬಂಧ ಸುತ್ತೋಲೆ ಹೊರಡಿಸಿರುವ ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕಿ ಕೆ.ಎಸ್‌.ಸತ್ಯವತಿ, ಮಾಸ್ಕ್‌ ಹಾಕಿಕೊಳ್ಳದ ಪ್ರಯಾಣಿಕರಿಗೆ ಚಾಲನಾ ಸಿಬ್ಬಂದಿ ಜಾಗೃತಿ ಮೂಡಿಸಬೇಕು.

ಚಾಲನಾ ಸಿಬ್ಬಂದಿ ಸೇರಿದಂತೆ ಸಂಸ್ಥೆಯ ಎಲ್ಲ ವರ್ಗದ ಸಿಬ್ಬಂದಿ ಹಾಗೂ ಅಧಿಕಾರಿಗಳು ಕಡ್ಡಾಯವಾಗಿ ಮಾಸ್ಕ್‌ ಧರಿಸಿಕೊಂಡು ಕರ್ತವ್ಯ ನಿರ್ವಹಿಸಬೇಕು. ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು, ಎಂದು ಸೂಚಿಸಿದ್ದಾರೆ.

ಪ್ರಸ್ತುತ ಕೋವಿಡ್‌ ನಿಯಂತ್ರಣದಲ್ಲಿದ್ದರೂ ಜಗತ್ತಿನ ಕೆಲವೊಂದು ದೇಶಗಳಲ್ಲಿ ಕೊರೊನಾ ಸೋಂಕಿತ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆಯಾಗುತ್ತಿದೆ. ಮುಂಬರುವ ಕ್ರಿಸ್‌ಮಸ್‌ ಮತ್ತು ಹೊಸ ವರ್ಷಾಚರಣೆ ಸಂದರ್ಭದಲ್ಲಿಎಚ್ಚರ ವಹಿಸುವ ಅಗತ್ಯವಿದೆ. ಸಮೂಹ ಸಾರಿಗೆ ಪ್ರಯಾಣದ ಸಂದರ್ಭದಲ್ಲಿ ಹೆಚ್ಚು ಜಾಗರೂಕರಾಗಿ ಸೋಂಕು ಹರಡದಂತೆ ಮುಂಜಾಗ್ರತಾ ಕ್ರಮವಾಗಿ ನೌಕರರು ಹಾಗೂ ಅಧಿಕಾರಿಗಳು ಕಡ್ಡಾಯವಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಮಾರ್ಗಸೂಚಿಗಳನ್ನು ಪಾಲಿಸಬೇಕಿದೆ, ಎಂದು ತಿಳಿಸಿದ್ದಾರೆ.

bengaluru bengaluru

ಮಾಸ್ಕ್‌ ಹಾಕಿದರೆ ಮಾತ್ರ ಮೆಟ್ರೊ ನಿಲ್ದಾಣ ಪ್ರವೇಶಕ್ಕೆ ಅನುಮತಿ ನೀಡಲಾಗುತ್ತಿದೆ. ಮಾಸ್ಕ್‌ ಹಾಕದೆ ಬರುವ ಪ್ರಯಾಣಿಕರನ್ನು ಮೆಟ್ರೊ ನಿಲ್ಧಾಣಗಳಲ್ಲಿ ಭದ್ರತಾ ಸಿಬ್ಬಂದಿ ತಡೆಯುತ್ತಿದ್ದಾರೆ.


bengaluru

LEAVE A REPLY

Please enter your comment!
Please enter your name here