Home Uncategorized ವಿದೇಶಿ ನೆಲದಲ್ಲಿ ಮೂರು ಪ್ರಶಸ್ತಿ ಬಾಚಿಕೊಂಡ ‘ಆರ್​ಆರ್​ಆರ್​’ ಸಿನಿಮಾ; ನಿಂತಿಲ್ಲ ಗೆಲುವಿನ ಓಟ

ವಿದೇಶಿ ನೆಲದಲ್ಲಿ ಮೂರು ಪ್ರಶಸ್ತಿ ಬಾಚಿಕೊಂಡ ‘ಆರ್​ಆರ್​ಆರ್​’ ಸಿನಿಮಾ; ನಿಂತಿಲ್ಲ ಗೆಲುವಿನ ಓಟ

6
0

ಈ ವರ್ಷ ತೆರೆಕಂಡ ಅತ್ಯುತ್ತಮ ಸಿನಿಮಾಗಳ ಪೈಕಿ ಎಸ್​.ಎಸ್​. ರಾಜಮೌಳಿ (SS Rajamouli) ನಿರ್ದೇಶನದ ‘ಆರ್​ಆರ್​ಆರ್​’ ಚಿತ್ರಕ್ಕೂ ಸ್ಥಾನ ಸಿಕ್ಕಿದೆ. ಈ ಸಿನಿಮಾ ಸೂಪರ್ ಹಿಟ್ ಆಯಿತು. ಈ ಸಿನಿಮಾ ಬಾಕ್ಸ್ ಆಫೀಸ್​​ನಲ್ಲಿ ಸಾವಿರಾರು ಕೋಟಿ ರೂಪಾಯಿ ಬಾಚಿಕೊಳ್ಳುವ ಮೂಲಕ ನಿರ್ಮಾಪಕರ ಜೇಬು ತುಂಬಿಸಿದೆ. ಇನ್ನು ಅನೇಕ ಕಡೆಗಳಲ್ಲಿ ಸಿನಿಮಾ ಪ್ರಶಸ್ತಿ ಬಾಚಿಕೊಳ್ಳುತ್ತಿದೆ. ಈ ಚಿತ್ರಕ್ಕೆ ಆಸ್ಕರ್ ಅವಾರ್ಡ್ ಸಿಗಬೇಕು ಎನ್ನುವ ಅಭಿಪ್ರಾಯ ವ್ಯಕ್ತವಾಗುತ್ತಿರುವ ಮಧ್ಯೆಯೇ ‘ಆರ್​ಆರ್​ಆರ್​’ ಚಿತ್ರ (RRR Movie) ವಿದೇಶಿ ಸಿನಿಮೋತ್ಸವಗಳಲ್ಲಿ ಸದ್ದು ಮಾಡುತ್ತಿದೆ. ಸದ್ಯ ‘ಆರ್​ಆರ್​ಆರ್​’ ಚಿತ್ರ ‘ಫಿಲಡೆಲ್ಫಿಯಾ ಫಿಲ್ಮ್​ ಕ್ರಿಟಕ್ಸ್ ಸರ್ಕಲ್ ಆ್ಯನ್ಯುವಲ್ ಅವಾರ್ಡ್​​’ನಲ್ಲಿ ಮೂರು ಪ್ರಶಸ್ತಿಗಳನ್ನು ಪಡೆದುಕೊಂಡಿದೆ.

ಈ ವಿಚಾರವನ್ನು ‘ಆರ್​ಆರ್​ಆರ್​’ ಸಿನಿಮಾದ ಅಧಿಕೃತ ಟ್ವಿಟರ್ ಖಾತೆ ಮೂಲಕ ಶೇರ್ ಮಾಡಿಕೊಳ್ಳಲಾಗಿದೆ. ಈ ವೇಳೆ ಅವಾರ್ಡ್​ ನೀಡಿದವರಿಗೆ ಧನ್ಯವಾದ ತಿಳಿಸಲಾಗಿದೆ. ಈ ಪೋಸ್ಟ್​ಗೆ ಫ್ಯಾನ್ಸ್ ಬಗೆಬಗೆಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ. ಅಂದಹಾಗೆ, ‘ಆರ್​ಆರ್​ಆರ್​’ ಅತ್ಯುತ್ತಮ ವಿದೇಶಿ ಸಿನಿಮಾ, ಅತ್ಯುತ್ತಮ ಛಾಯಾಗ್ರಹಣ, ಅತ್ಯುತ್ತಮ ಸಂಗೀತ ಸಂಯೋಜನೆ ವಿಭಾಗದಲ್ಲಿ ಪ್ರಶಸ್ತಿ ಬಾಚಿಕೊಂಡಿದೆ.

ಕ್ರಿಟಿಕ್ಸ್​ ಚಾಯ್ಸ್​ ಅವಾರ್ಡ್ಸ್​ 2023

‘ಕ್ರಿಟಿಕ್ಸ್​ ಚಾಯ್ಸ್​ ಅವಾರ್ಡ್ಸ್​ 2023’ರ ನಾಮಿನೇಷನ್ ಪಟ್ಟಿಯನ್ನು ಇತ್ತೀಚೆಗೆ ಬಿಡುಗಡೆ ಮಾಡಲಾಯಿತು. ಅತ್ಯುತ್ತಮ ಸಿನಿಮಾ, ಅತ್ಯುತ್ತಮ ನಿರ್ದೇಶನ, ಅತ್ಯುತ್ತಮ ವಿದೇಶಿ ಭಾಷಾ ಚಿತ್ರ, ಅತ್ಯುತ್ತಮ ವಿಶ್ಯವಲ್​ ಎಫೆಕ್ಟ್ ಹಾಗೂ ಅತ್ಯುತ್ತಮ ಹಾಡು ವಿಭಾಗಗಳಲ್ಲಿ ‘ಆರ್​ಆರ್​ಆರ್​’ ಸಿನಿಮಾ ನಾಮಿನೇಟ್​ ಆಗಿದೆ. 2022ರಲ್ಲಿ ಬಿಡುಗಡೆಯಾದ ಸಿನಿಮಾಗಳ ಪೈಕಿ ‘ಆರ್​ಆರ್​ಆರ್’ ಚಿತ್ರ ಬ್ಲಾಕ್​ ಬಸ್ಟರ್​ ಹಿಟ್​ ಎನಿಸಿಕೊಂಡಿದೆ. ಗಲ್ಲಾಪೆಟ್ಟಿಗೆಯಲ್ಲಿ ಸಾವಿರ ಕೋಟಿ ರೂಪಾಯಿಗೂ ಅಧಿಕ ಗಳಿಕೆ ಮಾಡಿ ಸೈ ಎನಿಸಿಕೊಂಡಿದೆ. ಜಗತ್ತಿನ ಪ್ರತಿಷ್ಠಿತ ಪ್ರಶಸ್ತಿಗಳನ್ನು ಪಡೆಯುವತ್ತ ಈ ಸಿನಿಮಾ ಗುರಿ ಇಟ್ಟುಕೊಂಡಿದೆ. ಸ್ವತಂತ್ರವಾಗಿ ಆಸ್ಕರ್​ ಪ್ರಶಸ್ತಿಗೂ ನಾಮನಿರ್ದೇಶನಗೊಳ್ಳಲು ಪ್ರಯತ್ನಿಸುತ್ತಿದೆ.

ಇದನ್ನೂ ಓದಿ: Kantara Movie: ‘ಕಾಂತಾರ’ ಚಿತ್ರದ ಯಶಸ್ಸು ಅತಿ ಹೆಚ್ಚು ಅಚ್ಚರಿ ಮೂಡಿಸಿದ್ದು ರಾಜಮೌಳಿಗೆ; ಕಾರಣ ಇಲ್ಲಿದೆ..

2023ರ ಜನವರಿಯಲ್ಲಿ ‘ಕ್ರಿಟಿಕ್ಸ್​ ಚಾಯ್ಸ್​ ಅವಾರ್ಡ್ಸ್​’ ಸಮಾರಂಭ ನಡೆಯಲಿದೆ. 5 ವಿಭಾಗಗಳ ಪೈಕಿ ಯಾವೆಲ್ಲ ವಿಭಾಗಗಳಲ್ಲಿ ‘ಆರ್​ಆರ್​ಆರ್​’ ಚಿತ್ರಕ್ಕೆ ಪ್ರಶಸ್ತಿ ಒಲಿಯಲಿದೆ ಎಂಬುದನ್ನು ಕಾದು ನೋಡಬೇಕಿದೆ. ಹಲವು ಪ್ರಶಸ್ತಿಗೆ ಈ ಚಿತ್ರ ನಾಮಿನೇಟ್​ ಆಗುತ್ತಿರುವುದರಿಂದ ವಿಶ್ವಾದ್ಯಂತ ಇರುವ ಸಿನಿಪ್ರಿಯರು ಈ ಚಿತ್ರದ ಬಗ್ಗೆ ಗಮನ ಹರಿಸುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

LEAVE A REPLY

Please enter your comment!
Please enter your name here