Home Uncategorized ವಿಧಾನಪರಿಷತ್ ಸಭಾಪತಿ ಚುನಾವಣೆ: ನಾಳೆ ಮಧ್ಯಾಹ್ನ ನಾಮಪತ್ರ ಸಲ್ಲಿಸಲಿರುವ ಬಸವರಾಜ ಹೊರಟ್ಟಿ

ವಿಧಾನಪರಿಷತ್ ಸಭಾಪತಿ ಚುನಾವಣೆ: ನಾಳೆ ಮಧ್ಯಾಹ್ನ ನಾಮಪತ್ರ ಸಲ್ಲಿಸಲಿರುವ ಬಸವರಾಜ ಹೊರಟ್ಟಿ

17
0

ಬೆಳಗಾವಿ: ಡಿಸೆಂಬರ್​ 21ಕ್ಕೆ ವಿಧಾನಪರಿಷತ್ ಸಭಾಪತಿ ಚುನಾವಣೆ(Karnataka Legislative Council Chairman Election) ಹಿನ್ನೆಲೆ ನಾಳೆ ಮಧ್ಯಾಹ್ನ ಬಸವರಾಜ ಹೊರಟ್ಟಿ(Basavaraj Horatti) ನಾಮಪತ್ರ ಸಲ್ಲಿಸಲಿದ್ದಾರೆ. ಬೆಳಗಾವಿಯ ವಿಧಾನಪರಿಷತ್​ನ ಸಭಾಂಗಣದ ಬಳಿ ಬಿಜೆಪಿ ಸದಸ್ಯರ ಸಭೆ ನಡೆದಿದ್ದು ಅದರಲ್ಲಿ ಬಸವರಾಜ ಹೊರಟ್ಟಿ ಸೇರಿ ಬಿಜೆಪಿಯ ಎಲ್ಲಾ ಸದಸ್ಯರು ಭಾಗಿಯಾಗಿದ್ದರು. ನಾಳೆ ಮಧ್ಯಾಹ್ನ 2 ಗಂಟೆವರೆಗೆ ನಾಮಪತ್ರ ಸಲ್ಲಿಸಲು ಅವಕಾಶ ಇರಲಿದೆ.

ಬೆಳಗಾವಿಯ ಸುವರ್ಣ ಸೌಧದಲ್ಲಿ ಇಂದಿನಿಂದ ಚಳಿಗಾಲದ ಅಧಿವೇಶನ ಆರಂಭವಾಗಿದೆ. ಬೆಳಗಾವಿ ಅಧಿವೇಶನದಲ್ಲಿ ಡಿಸೆಂಬರ್ 21ರಂದು ವಿಧಾನಪರಿಷತ್ ಸಭಾಪತಿ ಸ್ಥಾನಕ್ಕೆ ಚುನಾವಣೆ ನಡೆಯಲಿದ್ದು ಬಸವರಾಜ ಹೊರಟ್ಟಿಯವರು ನಾಳೆ ಮಧ್ಯಾಹ್ನ ನಾಮಪತ್ರ ಸಲ್ಲಿಸಲಿದ್ದಾರೆ. ಜೆಡಿಎಸ್‌ಗೆ ರಾಜೀನಾಮೆ ನೀಡಿ ಬಿಜೆಪಿಗೆ ಬಂದ ಮಾಜಿ ಸಭಾಪತಿ ಬಸವರಾಜ ಹೊರಟ್ಟಿ ಅವರು ಮತ್ತೆ ಸಭಾಪತಿ ಸ್ಥಾನ ಏರುವ ನಿರೀಕ್ಷೆಯಲ್ಲಿದ್ದಾರೆ. ನಾಳೆ ಇವರು ನಾಮಪತ್ರ ಸಲ್ಲಿಸಲಿದ್ದು ಬಹುತೇಕ ಬಸವರಾಜ ಹೊರಟ್ಟಿ ಅವರೇ ಅಭಾಪತಿಯಾಗಲಿದ್ದಾರೆ ಎನ್ನಲಾಗುತ್ತಿದೆ. ಈ ಹಿಂದೆ ಹಂಗಾಮಿ ಸಭಾಪತಿ ರಘುನಾಥ್ ರಾವ್ ಮಲ್ಕಾಪೂರೆ ಅವರು ತಮ್ಮ ಸಭಾಪತಿ ಸ್ಥಾನವನ್ನು ಮುಂದುವರೆಸಿಕೊಂಡು ಹೋಗಲು ಲಾಬಿ ನಡೆಸಿದ್ದರು.

ಇದನ್ನೂ ಓದಿ:  ಎಲ್ಲರ ಜೊತೆಗೂ ಕಿರಿಕ್, ಠಾಣೆಯಲ್ಲಿ ಬರ್ತ್ ಡೇ ಸೆಲೆಬ್ರೇಶನ್: ರಾಯಚೂರಿನ ಲೇಡಿ ಎಸ್​ಐ ಗೀತಾಂಜಲಿ ಕೊನೆಗೂ ಸಸ್ಪೆಂಡ್!

ವಿಧಾನಸಭೆ ಚುನಾವಣೆಗೆ ಜೆಡಿಎಸ್​ ಮೊದಲ ಪಟ್ಟಿ ಪ್ರಕಟ: ಇಲ್ಲಿದೆ ವಿವರ

2023ರಲ್ಲಿ ನಡೆಯಲಿರುವ ಕರ್ನಾಟಕ ವಿಧಾನಸಭೆ ಚುನಾವಣೆಗೆ (Karnataka Assembly Elections 2023) ಜೆಡಿಎಸ್​ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿ (JDS Candidates List) ಪ್ರಕಟಿಸಿದೆ. JDS ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಸಮ್ಮುಖದಲ್ಲಿ 93 ಅಭ್ಯರ್ಥಿಗಳ ಮೊಲದ ಪಟ್ಟಿಯನ್ನು ಹೆಚ್.ಡಿ.ಕುಮಾರಸ್ವಾಮಿ (HD Kumaraswamy ಅವರು ಇಂದು (ಡಿಸೆಂಬರ್ 19) ಬೆಂಗಳೂರಿನಲ್ಲಿ ಪ್ರಕಟಿಸಿದರು.

LEAVE A REPLY

Please enter your comment!
Please enter your name here