Home Uncategorized ಸಂಪುಟ ಸೇರ್ಪಡೆ ಭರವಸೆ ಸಿಕ್ಕಿದೆ! ಸಿಎಂ ಬೊಮ್ಮಾಯಿಗೆ ಥ್ಯಾಂಕ್ಸ್​ ಹೇಳ್ತಾ ಸದ್ಯಕ್ಕೆ ಯಾವುದೇ ಕಠಿಣ ನಿರ್ಧಾರ...

ಸಂಪುಟ ಸೇರ್ಪಡೆ ಭರವಸೆ ಸಿಕ್ಕಿದೆ! ಸಿಎಂ ಬೊಮ್ಮಾಯಿಗೆ ಥ್ಯಾಂಕ್ಸ್​ ಹೇಳ್ತಾ ಸದ್ಯಕ್ಕೆ ಯಾವುದೇ ಕಠಿಣ ನಿರ್ಧಾರ ತೆಗೆದುಕೊಳ್ಳುವುದಿಲ್ಲ ಎಂದ ಕೆಎಸ್​ ಈಶ್ವರಪ್ಪ

4
0
bengaluru

ಬೆಂಗಳೂರು: ಗುತ್ತಿಗೆದಾರರೊಬ್ಬರ ಆತ್ಮಹತ್ಯೆ ಪ್ರಕರಣದಲ್ಲಿ ತಮ್ಮ ಮೇಲಿನ ಆರೋಪ ನಿರಾಧಾರ ಎಂದು ತನಿಖೆಯಿಂದ ಸಾಬೀತಾಗಿದೆ. ಹಾಗಾಗಿ ತಮ್ಮನ್ನು ಸಚಿವ ಸಂಪುಟಕ್ಕೆ ಮತ್ತೆ ಸೇರಿಸಿಕೊಳ್ಳಬೇಕು ಎಂದು ಮಾಜಿ ಸಚಿವ ಕೆ ಎಸ್​ ಈಶ್ವರಪ್ಪ(KS Eshwarappa) ಪಟ್ಟು ಹಿಡಿದಿದ್ದು ಇಂದು ಈ ಸಂಬಂಧ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ್ದಾರೆ. ಸುದ್ದಿಗೋಷ್ಠಿ ವೇಳೆ ಮಾತನಾಡಿದ ಈಶ್ವರಪ್ಪ ತಮಗೆ ಸಂಪುಟ ಸೇರ್ಪಡೆ ಭರವಸೆ ಸಿಕ್ಕಿದೆ! ಹಾಗಾಗಿ ಸಿಎಂ ಬೊಮ್ಮಾಯಿಗೆ(Basavaraj Bommai) ಥ್ಯಾಂಕ್ಸ್​ ಹೇಳ್ತಾ ಸದ್ಯಕ್ಕೆ ಯಾವುದೇ ಕಠಿಣ ನಿರ್ಧಾರ ತೆಗೆದುಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ತಮ್ಮ ಜೊತೆಗೆ ರಮೇಶ್ ಜಾರಕಿಹೊಳಿ ಅವರನ್ನೂ ಸಂಪುಟಕ್ಕೆ ಮತ್ತೆ ಸೇರಿಸಿಕೊಳ್ಳುವ ಭರವಸೆ ಸಿಎಂ ಬಸವರಾಜ ಬೊಮ್ಮಾಯಿ ಅವರಿಂದ ಸಿಕ್ಕಿದೆ. ಹಾಗಾಗಿ ಸದ್ಯಕ್ಕೆ ಯಾವುದೇ ಕಠಿಣ ನಿರ್ಧಾರ ತೆಗೆದುಕೊಳ್ಳುವುದಿಲ್ಲ ಎಂದು ಈಶ್ವರಪ್ಪ ಹೇಳಿದ್ದಾರೆ.

ಸಿಎಂ ಬಸವರಾಜ ಬೊಮ್ಮಾಯಿ ಅವರು ಇಂದು ಬೆಳಗ್ಗೆ ಖಾಸಗಿ ಟಿವಿ ಚಾನೆಲ್ ಜೊತೆ ಮಾತನಾಡುತ್ತಾ ಕೆ ಎಸ್​ ಈಶ್ವರಪ್ಪ ಅವರನ್ನು ತಮ್ಮ ಸಂಪುಟಕ್ಕೆ ಮರುಸೇರ್ಪಡೆ ಮಾಡಿಕೊಳ್ಳುವ ಬಗ್ಗೆ ಪಕ್ಷದ ಹೈಕಮಾಂಡ್​ ಜೊತೆ ಮಾತನಾಡಿರುವೆ. ಅವರನ್ನು ಸಂಪುಟಕ್ಕೆ ಮತ್ತೆ ಸೇರಿಸಿಕೊಳ್ಳುವ ಬಗ್ಗೆ ನಮ್ಮ ಕೇಂದ್ರ ನಾಯಕರು ಭರವಸೆ ನೀಡಿದ್ದಾರೆ. ಹಾಗಾಗಿ ಈಶ್ವರಪ್ಪ ಮತ್ತು ರಮೇಶ್ ಜಾರಕಿಹೊಳಿ ಅವರನ್ನು ಮತ್ತೆ ಸಂಪುಟಕ್ಕೆ ಸೇರಿಸಿಕೊಳ್ಳುವ ಸಂಭವವಿದೆ ಎಂದು ತಿಳಿಸಿದ್ದಾರೆ. ಈ ಭರವಸೆಯ ಹಿನ್ನೆಲೆಯಲ್ಲಿ ಸದ್ಯಕ್ಕೆ ತಾವು ಯಾವುದೇ ಕಠಿಣ ನಿರ್ಧಾರ ತೆಗೆದುಕೊಳ್ಳುತ್ತಿಲ್ಲ. ಕೇಂದ್ರ ನಾಯಕರ ಮುಂದಿನ ಕ್ರಮಕ್ಕೆ ಕಾಯುವೆ. ಆ ನಂತರವಷ್ಟೇ ನನ್ನ ನಿರ್ಧಾರ ಹೊರಬೀಳಲಿದೆ ಎಂದು ಈಶ್ವರಪ್ಪ ಹೇಳಿದ್ದಾರೆ.

ಇದನ್ನೂ ಓದಿ: ನಾಯಿ, ಇಲಿ ಹೇಳಿಕೆಗೆ ಮಲ್ಲಿಕಾರ್ಜುನ ಖರ್ಗೆ ಕ್ಷಮೆಯಾಚಿಸಬೇಕು: ಸಂಸತ್​​ನಲ್ಲಿ ಬಿಜೆಪಿ ಪಟ್ಟು

ಇಷ್ಟಕ್ಕೂ ಸುದ್ದಿಗೋಷ್ಠಿಯಲ್ಲಿ ಈಶ್ವರಪ್ಪ ಹೇಳಿದ್ದೇನು? ಪೂರ್ಣ ಪಾಠ ಇಲ್ಲಿದೆ:

bengaluru

ಕರ್ನಾಟಕದಲ್ಲಿ ಭಾರತೀಯ ಜನತಾ ಪಾರ್ಟಿ 90 ನೇ ದಶಕದಲ್ಲಿ ವೇಗ ಪಡೆದುಕೊಳ್ತು. ಹಗಲಿಗೆ ಹೆಗಲು ಕೊಟ್ಟು ಕೆಲಸ ಮಾಡಿದ್ವಿ. ನಾನೂ ಇದ್ದ ಆ ಸಂದರ್ಭದಲ್ಲಿ ಪ್ರಹ್ಲಾದ್ ಜೋಶಿ, ಜಗದೀಶ್ ಶೆಟ್ಟರ್ ಅಧ್ಯಕ್ಷರಾದಾಗ ಪಾರ್ಟಿ ಇನ್ನೂ ಬೆಳೆಯಿತು. ನನ್ನ ಮೇಲೆ ನಿರಾಧಾರವಾದ ಆರೋಪ ಬಂದಿತ್ತು. ಆರೋಪ‌ ಬಂದಾಗ, ಕೇಂದ್ರದ ನಾಯಕರಿಗೆ, ರಾಜ್ಯದ ನಾಯಕರಿಗೆ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡುವುದಾಗಿ ಹೇಳಿದೆ. ಅವರು ಬೇಡ ಅಂದ್ರು, ಈ ಹಿಂದೆ ಗೃಹಮಂತ್ರಿಗಳ ಮೇಲೆ ಆರೋಪ ಬಂದಾಗ ಕೆ.ಜೆ. ಜಾರ್ಜ್ ಅವರಿಗೆ ನಾನೇ ಬಹಳ ಒತ್ತಾಯ ಮಾಡಿದೆ. ತನಿಖೆ ಆಗಲಿ, ಆರೋಪ ಮುಕ್ತರಾಗಿ ಅಂತ ಹೇಳಿದೆ. ಆ ಮೇಲೆ ಅವರು ರಾಜೀನಾಮೆ ‌ಕೊಟ್ಟರು. ಅವರು ಮತ್ತೆ ಕ್ಯಾಬಿನೆಟ್ ಸೇರಿಕೊಂಡ್ರು. ನನ್ನ ಮೇಲೆಯೂ ಆರೋಪ ಬಂದಾಗ ನಾನು ರಾಜೀನಾಮೆ ಕೊಟ್ಟೆ. ನನ್ನ ಮೇಲೆ ಆರೋಪ ನಿರಾಧಾರ ಅಂತ ತನಿಖೆಯಲ್ಲಿ ಗೊತ್ತಾಯ್ತು. ಕ್ಲೀನ್ ಚಿಟ್ ಬಂದು ನಾಲ್ಕು ತಿಂಗಳಾಯ್ತು. ಆದರೂ ನಾನು ರಾಜ್ಯದ ಯಾವುದೇ ನಾಯರಲ್ಲಿ ಈ ಬಗ್ಗೆ ಪ್ರಸ್ತಾಪ ಮಾಡಿರಲಿಲ್ಲ.

ಮುಖ್ಯಮಂತ್ರಿಗಳು, ಸಚಿವ ಸಂಪುಟ ವಿಸ್ತರಣೆ ಮಾಡುವ ಬಗ್ಗೆ ಹೇಳ್ತಾ ಇದ್ರು. ಹೀಗಾಗಿ ಮುಖ್ಯಮಂತ್ರಿ  ರಾಷ್ಟ್ರೀಯ ವಾಹಿನಿಯಲ್ಲಿ ಪ್ರಸ್ತಾಪ‌ ಮಾಡಿದ್ದಾರೆ. ರಮೇಶ್ ಜಾರಕಿಹೊಳಿ, ಹಾಗೂ ಈಶ್ವರಪ್ಪ ತನಿಖೆಯಲ್ಲಿ ಕ್ಲೀನ್ ಚಿಟ್ ಪಡೆದುಕೊಂಡಿದ್ದಾರೆ. ಹೀಗಾಗಿ ಅವರಿಗೆ ಪ್ರತಿಭಟಿಸುವ ಹಕ್ಕಿದೆ ಅಂತ ಹೇಳಿದ್ದಾರೆ. ಸಚಿವ ಸಂಪುಟದಲ್ಲಿ ಇವರಿಬ್ಬರಿಗೂ ಸ್ಥಾನ ನೀಡುವ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ. ಇದು ಇವತ್ತಿನ ಬೆಳವಣಿಗೆ ಆಗಿದ್ದರಿಂದ, ಅವರ ತೀರ್ಮಾನಕ್ಕೆ ಸ್ವಾಗತಿಸುತ್ತೇನೆ.

ಸಚಿವ ಸಂಪುಟ ವಿಸ್ತರಣೆ ಸಂಬಂಧಿಸಿದಂತೆ ಇದು ಯಾವುದೋ ಗುಂಪು ಆಗಬಾರ್ದು, ಬೇರೆ ರೀತಿಯ ಸಂದೇಶ ಹೋಗಬಾರ್ದು ಅನ್ನೋ ಕಾರಣದಿಂದ ನಾನು ಬಹಳ ಸೂಕ್ಷ್ಮವಾಗಿ ಸ್ಪಷ್ಟವಾಗಿ ಇದರ ಪ್ರಸ್ತಾಪ ಮಾಡೋಕೆ ಹೋಗಿದ್ದೆ, 90‌ರ ದಶಕದಲ್ಲಿ ಆ‌ ಶಕ್ತಿ ಇರಲಿಲ್ಲ ನಮಗೆ ಯಡಿಯೂರಪ್ಪನವರು, ಅನಂತಕುಮಾರ್ ರವರು ನಾನು ಗಂಟೆಗಟ್ಟಲೆ ಚರ್ಚೆ ಮಾಡಿದ್ದೇವೆ. ಪಕ್ಷ ಬೆಳೆಯುವ ನಿಟ್ಟಿನಲ್ಲಿ ಕೆಲಸ ಮಾಡಿದ್ದೇನೆ. ಹೀಗೆ ಇಷ್ಟೆಲ್ಲಾ ಕೆಲಸ‌ ಮಾಡಿದ್ದರು, ಸ್ವಾಮೀಜಿಗಳು, ಸಂತರು ನನಗೆ ಕರೆ ಮಾಡಿ ಕೇಳ್ತಾ ಇದ್ದಾರೆ. ಪಕ್ಷದಲ್ಲಿ ಇಷ್ಟು ನಿಷ್ಟೆಯಿಂದ ಕೆಲಸ ಮಾಡಿದ ನಿಮಗೆ ಹಿಗ್ಯಾಕೆ ಅನ್ಯಾಯ ಆಗ್ತಿದೆ ಅನ್ನೋದನ್ನು ಕೇಳ್ತಾ ಇದ್ದರೆ. ನನ್ನ ನಿಲುವಿನ ಬಗ್ಗೆ ಈಗ ಸ್ಪಷ್ಟಪಡಿಸಲ್ಲ. ಮುಖ್ಯಮಂತ್ರಿಗಳ ಬಳಿ ಇವತ್ತು ನೇರವಾಗಿ ಮಾತಾಡ್ತೀನಿ. ನನ್ನ ಮುಖ್ಯಮಂತ್ರಿಗಳ ಮೇಲೆ ನನಗೆ ನಂಬಿಕೆ ಇದೆ. ಗುಜರಾತ್ ಚುನಾವಣೆ ಬಳಿಕೆ ವಿಸ್ತರಣೆ ಆಗುವ ನಂಬಿಕೆ ಇತ್ತು. ಅದು ಆಗದಿದ್ದಾಗ, ನಾನು ಸೌಜನ್ಯ ಪ್ರತಿಭಟನೆ ಮಾಡಿದ್ದೇನೆ. ಮೂರು ನಾಲ್ಕು ತಿಂಗಳಾದ್ರೂ ಯಾವುದೇ ಪ್ರತಿಕ್ರಿಯೆ ಬರದಿದ್ದಾಗ,‌ ಸೌಜನ್ಯ ಪ್ರತಿಭಟನೆ ಮಾಡಿದ್ದೇನೆ.

ಕ್ಲೀನ್ ಚಿಟ್ ಸಿಕ್ಕ ಬಳಿಕ ನಾನು ಯಾವುದೇ ಕೇಂದ್ರದ‌ ನಾಯಕರಲ್ಲಿ ಹೋಗಿಲ್ಲ. ರಾಜ್ಯದ‌‌ ನಾಯಕರಲ್ಲಿ ನಾನು ಈ ಬಗ್ಗೆ ಪ್ರಸ್ತಾಪವೂ ಮಾಡಿರಲಿಲ್ಲ. ಆದರೆ ಕ್ಲೀನ್ ಚಿಟ್ ಸಿಕ್ಕ ಬಳಿಕ ಸಚಿವ ಸಂಪುಟದಲ್ಲಿ ಸ್ಥಾನ ಸಿಗುವ ನಂಬಿಕೆ ಇತ್ತು. ಮೂರು ನಾಲ್ಕು ತಿಂಗಳು ಕಳೆದ ಬಳಿಕವೂ ಯಾವುದೇ ರೆಸ್ಪಾನ್ಸ್ ಸಿಕ್ಕಿರಲಿಲ್ಲ. ಹೀಗಾಗಿ ನಾನು ಸೌಜನ್ಯದ ಪ್ರತಿಭಟನೆ ನಡೆಸಿದ್ದೆ, ಅದು ನೆನ್ನೆವರೆಗೂ, ಮುಖ್ಯಮಂತ್ರಿಯವರು ನಿನ್ನೆ ರಾಷ್ಟ್ರೀಯ ವಾಹಿನಿಯಲ್ಲಿ ಮಾತನಾಡುವಾಗ ಸಚಿವ ಸ್ಥಾನದ ಬಗ್ಗೆ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಇವತ್ತು ಸಂಜೆ ನಾನು ಮುಖ್ಯಮಂತ್ರಿ ಜತೆ‌ ಖುದ್ದಾಗಿ ಮಾತನಾಡುತ್ತೇನೆ ಎಂದರು.

ಕಾಂಗ್ರೆಸ್ ವಿರುದ್ಧ ಈಶ್ವರಪ್ಪ ವಾಗ್ದಾಳಿ

ಹಿಂದುತ್ವದ ವಿರುದ್ಧ ಚುನಾವಣೆಗೆ ಕಾಂಗ್ರೆಸ್​ ಹೋಗಲು ಸಿದ್ಧತೆ ಮಾಡಿಕೊಳ್ಳುತ್ತಿದೆ. ಕುಕ್ಕರ್ ಬಾಂಬ್​ ಸ್ಫೋಟದ ವಿಚಾರದಲ್ಲಿ ‘ಕೈ’ ನಾಯಕರ ಹೇಳಿಕೆ ಗಮನಿಸಿದರೆ ಇದು ಸ್ಪಷ್ಟವಾಗಿ ಗೊತ್ತಾಗ್ತಿದೆ. ಸದನದಲ್ಲಿ ಸಾವರ್ಕರ್​ ಫೋಟೋ ವಿಚಾರದಲ್ಲೂ ಕಾಂಗ್ರೆಸ್​ನವರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

bengaluru

LEAVE A REPLY

Please enter your comment!
Please enter your name here