Home Uncategorized ಸರ್ವೆ ವೇಳೆ ಮತದಾರರ ಮಾಹಿತಿ ಸಂಗ್ರಹಕ್ಕೆ ನಿರ್ಬಂಧ: ಎಚ್ಚರ ವಹಿಸುವಂತೆ ಡಿಸಿಗಳಿಗೆ ರಾಜ್ಯ ಚುನಾವಣಾಧಿಕಾರಿ ಸೂಚನೆ

ಸರ್ವೆ ವೇಳೆ ಮತದಾರರ ಮಾಹಿತಿ ಸಂಗ್ರಹಕ್ಕೆ ನಿರ್ಬಂಧ: ಎಚ್ಚರ ವಹಿಸುವಂತೆ ಡಿಸಿಗಳಿಗೆ ರಾಜ್ಯ ಚುನಾವಣಾಧಿಕಾರಿ ಸೂಚನೆ

4
0

ಬೆಂಗಳೂರು: ನಗರದಲ್ಲಿ ಚಿಲುಮೆ ಖಾಸಗಿ ಸಂಸ್ಥೆಯಿಂದ ನಡೆದ ವೋಟರ್​ ಐಡಿ ಅಕ್ರಮದಿಂದ (Voter ID Scam) ರಾಜ್ಯ ಚುನಾವಣಾ ಆಯೋಗಕ್ಕೆ ಮುಜುಗರಕ್ಕೀಡಾಗಿದ್ದು, ಆಯೋಗದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗುತ್ತಿದೆ. ಈ ಹಿನ್ನೆಲೆ ರಾಜ್ಯ ಮುಖ್ಯ ಚುನಾವಣಾಧಿಕಾರಿ ಜಿಲ್ಲಾ ಚುನಾವಣಾಧಿಕಾರಿಗಳಿಗೆ ಖಡಕ್​ ಸೂಚನೆ ನೀಡಿದ್ದಾರೆ. ಖಾಸಗಿ ಸರ್ವೆ ವೇಳೆ ಮತದಾರರ ಮಾಹಿತಿ ಸಂಗ್ರಹವನ್ನು ಸಂಪೂರ್ಣ ನಿರ್ಬಂಧ ವಿಧಿಸಬೇಕೆಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್​​ ಮೀನಾ (State Election Officer Manoj Meena)  ಜಿಲ್ಲಾ ಚುನಾವಣಾಧಿಕಾರಿಗಳಿಗೆ  ಸೂಚನೆ ನೀಡಿದ್ದಾರೆ.

ಈ ಕುರಿತು ಮಾಧ್ಯಮ ಪ್ರಕಟಣೆ ಹೊರಡಿಸಿದ ಮನೋಜ್ ಮೀನಾ ಕೆಲವು ಜಿಲ್ಲೆಗಳಲ್ಲಿ ಏಜೆನ್ಸಿ, NGOಗಳು ಮನೆಮನೆಗೆ ತೆರಳಿ ಸರ್ವೆ ಮಾಡುತ್ತವೆ. ಈ ವೇಳೆ ಮತದಾರರ ಮಾಹಿತಿ ಸಂಗ್ರಹಿಸುವಂತಿಲ್ಲ. ಒಂದು ವೇಳೆ ಸಂಗ್ರಹಿಸಿದರೇ ಆ ಸಂಸ್ಥೆ ವಿರುದ್ಧ ಕ್ರಮ ಕೈಗೊಳ್ಳುವಂತೆ  ಹೇಳಿದ್ದಾರೆ.

ಇದನ್ನೂ ಓದಿ: ಹೋಟೆಲ್​ಗಳಲ್ಲಿ ಸಿಸಿಕ್ಯಾಮೆರಾ ಕಡ್ಡಾಯ: ಹೊಟೇಲ್​ ಮಾಲಿಕರಿಗೆ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಸೂಚನೆ

ಖಾಸಗಿ ಸಂಸ್ಥೆಗಳು ಡೋರ್ ಟು ಡೋರ್ ಸರ್ವೆ ಮಾಡುವಂತಿಲ್ಲ

ಖಾಸಗಿ ಸಂಸ್ಥೆಗಳು ಮನೆಗಳಿಗೆ ತೆರಳಿ ಮತದಾರರ ಮಾಹಿತಿ ಪಡೆಯುವ ಯಾವುದೇ ಸರ್ವೆ ಮಾಡುವಂತಿಲ್ಲ ಎಂದು ರಾಜ್ಯ ಚುನಾವಣಾ ಆಯೋಗಕ್ಕೆ, ಕೇಂದ್ರ ಚುನಾವಣಾ ಆಯೋಗ ಪತ್ರ ಬರೆದಿದೆ.

ಈಗಾಗಲೇ ಖಾಸಗಿ ಸಂಸ್ಥೆಗಳಿಗೆ ನೀಡಿದ್ದ ಅನುಮತಿಯನ್ನು ರದ್ದುಪಡಿಸಿ. ಅನುಮತಿಯನ್ನು ರದ್ದುಪಡಿಸಿ ಸರ್ವೆ ಮಾಡದಂತೆ ಸೂಕ್ತ ಕ್ರಮಕೈಗೊಳ್ಳಿ ಎಂದು ಖಡಖ್​ ಸಂದೇಶ ರವಾನೆ ಮಾಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

LEAVE A REPLY

Please enter your comment!
Please enter your name here