ನಾನ್ ವೆಜ್ ವಿಚಾರಕ್ಕೆ ಸಂಬಂಧಿಸಿದಂತೆ ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾ ಮೂರ್ತಿ ಅವರು ನೀಡಿರುವ ಹೇಳಿಕೆ ಇದೀಗ ವ್ಯಾಪಕ ಚರ್ಚೆಗೆ ಕಾರಣವಾಗಿದ್ದು, ಸುಧಾ ಮೂರ್ತಿ ಅವರ ಆಸ್ತಿ ಜಗದಗಲ, ತಿಳುವಳಿಕೆ ಚಮಚದಗಲ ಎಂದು ನಟ ಚೇತನ್ ಅವರು ಟೀಕಿಸಿದ್ದಾರೆ. ಬೆಂಗಳೂರು: ನಾನ್ ವೆಜ್ ವಿಚಾರಕ್ಕೆ ಸಂಬಂಧಿಸಿದಂತೆ ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾ ಮೂರ್ತಿ ಅವರು ನೀಡಿರುವ ಹೇಳಿಕೆ ಇದೀಗ ವ್ಯಾಪಕ ಚರ್ಚೆಗೆ ಕಾರಣವಾಗಿದ್ದು, ಸುಧಾ ಮೂರ್ತಿ ಅವರ ಆಸ್ತಿ ಜಗದಗಲ, ತಿಳುವಳಿಕೆ ಚಮಚದಗಲ ಎಂದು ನಟ ಚೇತನ್ ಅವರು ಟೀಕಿಸಿದ್ದಾರೆ.
ಸುಧಾ ಮೂರ್ತಿಯವರು ನಮ್ಮ ಬ್ರಾಹ್ಮಣ್ಯ-ಬಂಡವಾಳಶಾಹಿ ಸಮಾಜದಿಂದ ಅತಿಯಾದ ಬಿಲ್ಡಪ್‌ನಿಂದ ಗುರುತಿಸಲ್ಪಟ್ಟ ಮತ್ತು ಅನರ್ಹವಾಗಿ ಗೌರವಿಸಲ್ಪಟ್ಟ ಸಾರ್ವಜನಿಕ ವ್ಯಕ್ತಿ. ಅವರು ತಮ್ಮ ಸೀಮಿತ, ಮಡಿವಂತಿಕೆಯ ಚಿಂತನೆಯನ್ನು ಬಹಿರಂಗಪಡಿಸುವ ಹೇಳಿಕೆಗಳನ್ನು ನಿರಂತರವಾಗಿ ಮಾಡುತ್ತಾರೆ ಎಂದು ನಟ ಚೇತನ್ ಅವರು ಸಾಮಾಜಿಕ ಮಾಧ್ಯಮದಲ್ಲಿ ಬರೆದುಕೊಂಡಿದ್ದಾರೆ.
ಸುಧಾ ಮೂರ್ತಿಯವರು ಹೆಚ್ಚು ಮಾತನಾಡಬೇಕು …
ಅವರ ಆಸ್ತಿ ಜಗದಗಲ — ತಿಳುವಳಿಕೆ ಚಮಚದಗಲ ಎಂದು ಚೇತನ್ ಅವರು ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ.
ತಾವು ವಿದೇಶಕ್ಕೆ ಹೋಗುವಾಗ ತಮಗೆ ಬೇಕಾದ ಊಟ ತಿಂಡಿಯನ್ನು ರೆಡಿ ಮಾಡಿಕೊಂಡು ಬ್ಯಾಗ್ ನಲ್ಲಿ ಹಾಕಿಕೊಂಡು ಹೋಗುತ್ತೇನೆ. ನಾನು ಶುದ್ಧ ಸಸ್ಯಾಹಾರಿ, ಮೊಟ್ಟೆ, ಈರುಳ್ಳಿ, ಬೆಳ್ಳುಳ್ಳಿ ಕೂಡ ಸೇವಿಸುವುದಿಲ್ಲ. ಹೊರಗೆ ಹೋದರೆ ಶುದ್ಧ ಸಸ್ಯಾಹಾರಿ ಹೊಟೇಲ್ ನ್ನು ಹುಡುಕುತ್ತೇನೆ, ಸಸ್ಯಾಹಾರಿ ಮತ್ತು ಮಾಂಸಾಹಾರಿ ಅಡುಗೆಗಳಿಗೆ ಒಂದೇ ಸ್ಪೂನ್ ಬಳಸಿದರೆ ಎಂಬ ಆತಂಕ ನನಗೆ, ಹೀಗಾಗಿ ವಿದೇಶಕ್ಕೆ ಹೋಗುವಾಗ ಸ್ಪೂನ್ ಕೂಡ ಜೊತೆಗೆ ಒಯ್ಯುತ್ತೇನೆ ಎಂದು ಸುಧಾ ಮೂರ್ತಿ ಅವರು ಹೇಳಿರುವ ಮಾತು ಟ್ರೋಲ್ ಆಗುತ್ತಿದೆ.