Home Uncategorized ಹಂಪಿ ಉತ್ಸವ 2023: ಕನ್ನಡ ಗೀತೆ ಹಾಡಲಿಲ್ಲವೆಂದು ಪದ್ಮಶ್ರೀ ಪುರಸ್ಕೃತ ಗಾಯಕ ಕೈಲಾಶ್ ಖೇರ್ ಮೇಲೆ...

ಹಂಪಿ ಉತ್ಸವ 2023: ಕನ್ನಡ ಗೀತೆ ಹಾಡಲಿಲ್ಲವೆಂದು ಪದ್ಮಶ್ರೀ ಪುರಸ್ಕೃತ ಗಾಯಕ ಕೈಲಾಶ್ ಖೇರ್ ಮೇಲೆ ಬಾಟಲಿ ಎಸೆತ, ಇಬ್ಬರ ಬಂಧನ

6
0
bengaluru

ಹಂಪಿ ಉತ್ಸವದ ಸಮಾರೋಪ ಸಮಾರಂಭದ ವೇಳೆ ಕನ್ನಡ ಗೀತೆ ಹಾಡಲಿಲ್ಲವೆಂದು ಗಾಯಕ ಕೈಲಾಶ್ ಖೇರ್​ ಅವರ ಮೇಲೆ ಕೆಲ ಕಿಡಿಗೇಡಿಗಳು ಬಾಟಲಿ ಎಸೆದ ಅಹಿತಕರ ಘಟನೆ ಭಾನುವಾರ ನಡೆದಿದೆ. ವಿಜಯನಗರ: ಹಂಪಿ ಉತ್ಸವದ ಸಮಾರೋಪ ಸಮಾರಂಭದ ವೇಳೆ ಕನ್ನಡ ಗೀತೆ ಹಾಡಲಿಲ್ಲವೆಂದು ಗಾಯಕ ಕೈಲಾಶ್ ಖೇರ್​ ಅವರ ಮೇಲೆ ಕೆಲ ಕಿಡಿಗೇಡಿಗಳು ಬಾಟಲಿ ಎಸೆದ ಅಹಿತಕರ ಘಟನೆ ಭಾನುವಾರ ನಡೆದಿದೆ.

ಪ್ರೇಕ್ಷಕರ ಗ್ಯಾಲರಿಯಿಂದ ಕೈಲಾಶ್ ಖೇರ್ ಮೇಲೆ ನೀರಿನ ಬಾಟಲಿ ಎಸೆಯಲಾಗಿದೆ. ಆದರೂ ಇದಕ್ಕೆ ಹಿಂಜರಿಯದ ಗಾಯಕ ಕೈಲಾಶ್ ಅವರು ತಮ್ಮ ಗಾಯನವನ್ನು ಮುಂದುವರೆಸಿದ್ದರೆಂದು ತಿಳಿದುಬಂದಿದೆ.

ಘಟನೆ ಸಂಬಂಧ ಪೊಲೀಸರು ಇಬ್ಬರನ್ನು ಬಂಧನಕ್ಕೊಳಪಡಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆಂದು ವರದಿಗಳಿಂದ ತಿಳಿದುಬಂದಿದೆ.

bengaluru

LEAVE A REPLY

Please enter your comment!
Please enter your name here