Home Uncategorized ಹಿಟ್ ಆ್ಯಂಡ್ ರನ್ ಕೇಸ್: ಪೊಲೀಸ್ ಹೆಡ್​ ಕಾನ್ಸ್​ಸ್ಟೇಬಲ್ ಸಾವು

ಹಿಟ್ ಆ್ಯಂಡ್ ರನ್ ಕೇಸ್: ಪೊಲೀಸ್ ಹೆಡ್​ ಕಾನ್ಸ್​ಸ್ಟೇಬಲ್ ಸಾವು

13
0
bengaluru

ಕರ್ತವ್ಯ ಮುಗಿಸಿ ಮನೆಗೆ ತೆರಳುತ್ತಿದ್ದ ಪೊಲೀಸ್ ಹೆಡ್ ಕಾನ್​​ಸ್ಟೇಬಲ್ ಅಪಘಾತದಲ್ಲಿ ಮೃತಪಟ್ಟ ಘಟನೆ ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಬರದೂರು ಬಳಿ ನಡೆದಿದೆ. ಗದಗ: ಕರ್ತವ್ಯ ಮುಗಿಸಿ ಮನೆಗೆ ತೆರಳುತ್ತಿದ್ದ ಪೊಲೀಸ್ ಹೆಡ್ ಕಾನ್​​ಸ್ಟೇಬಲ್ ಅಪಘಾತದಲ್ಲಿ ಮೃತಪಟ್ಟ ಘಟನೆ ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಬರದೂರು ಬಳಿ ನಡೆದಿದೆ.

ಮುಂಡರಗಿ ಠಾಣೆಯಲ್ಲಿ ಹೆಡ್ ಕಾನ್ಸಸ್ಟೇಬಲ್ ಆಗಿದ್ದ ಕೊಟ್ರೆಪ್ಪ ಬಂಡಗಾರ (59) ಅಪಘಾತದಲ್ಲಿ ಸಾವನ್ನಪ್ಪಿದ್ದಾರೆಂದು ತಿಳಿದುಬಂದಿದೆ.

ಹೆಡ್ ಕಾನಸ್ಟೇಬಲ್ ಕೊಟ್ರೆಪ್ಪ ಬಂಡಗಾರ ಮುಂಡರಗಿ ತಾಲೂಕಿನ ಜಂತ್ಲಿಶೀರೂರ್ ನಿವಾಸಿಯಾಗಿದ್ದಾರೆ. ಇವರು ಮುಂಡರಗಿ ತಾಲೂಕಿನ ಡಂಬಳಕ್ಕೆ ಕರ್ತವ್ಯದ ಮೇಲೆ ಹೋಗಿದ್ದರು. ಕೆಲಸ ಮುಗಿಸಿ ರಾತ್ರಿ 12 ಗಂಟೆಯ ಮೇಲೆ ಮನೆಗೆ ಕಡೆಗೆ ತೆರಳುತ್ತಿದ್ದರು.

ಈ ವೇಳೆ ಕೊಟ್ರೆಪ್ಪ ಬಂಡಗಾರ ಅವರಿಗೆ ಅಪರಿಚಿತ ಟ್ರ್ಯಾಕ್ಟರ್​​ವೊಂದು ಗುದ್ದಿ ಪರಾರಿಯಾಗಿದೆ. ಮುಂಡರಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಟ್ರ್ಯಾಕ್ಟರ್ ಚಾಲಕನಿಗಾಗಿ ಹುಡುಕಾಟ ಆರಂಭಿಸಿದ್ದಾರೆ.

bengaluru
bengaluru

LEAVE A REPLY

Please enter your comment!
Please enter your name here