Home ಕರ್ನಾಟಕ ಐಪಿಎಲ್ ಆರಂಭಕ್ಕೆ ಮೊದಲು ಆರ್ ಸಿ ಬಿ ಪಾಳಯಕ್ಕೆ ವಿರಾಟ್ ಕೊಹ್ಲಿ ಸೇರ್ಪಡೆ

ಐಪಿಎಲ್ ಆರಂಭಕ್ಕೆ ಮೊದಲು ಆರ್ ಸಿ ಬಿ ಪಾಳಯಕ್ಕೆ ವಿರಾಟ್ ಕೊಹ್ಲಿ ಸೇರ್ಪಡೆ

34
0

ಹೊಸದಿಲ್ಲಿ: ಭಾರತದ ರನ್ ಯಂತ್ರ ಹಾಗೂ ಮಾಜಿ ನಾಯಕ ವಿರಾಟ್ ಕೊಹ್ಲಿ ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್ ಹಾಗೂ ಆರ್ ಸಿ ಬಿಯ ಅನ್ಬಾಕ್ಸ್ ಕಾರ್ಯಕ್ರಮಕ್ಕೆ ಮೊದಲು ಬೆಂಗಳೂರಿಗೆ ಆಗಮಿಸಿದ್ದಾರೆ.

ಭಾರತ ಹಾಗೂ ಆರ್ ಸಿ ಬಿಯ ಪ್ರಮುಖ ಆಟಗಾರನಾಗಿರುವ ಕೊಹ್ಲಿ ಐಪಿಎಲ್ ಆರಂಭವಾದಾಗಿನಿಂದ ಆರ್ ಸಿ ಬಿ ಫ್ರಾಂಚೈಸಿಯನ್ನು ಪ್ರತಿನಿಧಿಸುತ್ತಿದ್ದಾರೆ. 9 ವರ್ಷಗಳ ಕಾಲ ಆರ್ ಸಿ ಬಿ ತಂಡದ ನೇತೃತ್ವ ವಹಿಸಿದ್ದರು.

ಆರ್ ಸಿ ಬಿ ಎಕ್ಸ್ನಲ್ಲಿ ಕೊಹ್ಲಿ ಆಗಮನವನ್ನು ಘೋಷಿಸಿದ್ದು, ಎಲ್ಲವೂ ವೇಗವಾಗಿ ನಡೆಯುತ್ತಿದೆ. ನಾವು ನಿಧಾನಗತಿಯಲ್ಲಿಲ್ಲ ಎಂದು ಬರೆದುಕೊಂಡಿದೆ.

ರವಿವಾರ ರಾತ್ರಿ ಮುಂಬೈ ಏರ್ಪೋರ್ಟ್ ನಲ್ಲಿದ್ದ ಕೊಹ್ಲಿ ಐಪಿಎಲ್ 2024ರಲ್ಲಿ ಭಾಗವಹಿಸಲು ಆರ್ ಸಿ ಬಿಯನ್ನು ಸೇರಿಕೊಳ್ಳಲು ಬೆಂಗಳೂರು ವಿಮಾನ ಏರಿದ್ದರು.

ಕೊಹ್ಲಿ ವೈಯಕ್ತಿಕ ಕಾರಣಕ್ಕೆ ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಯನ್ನು ತಪ್ಪಿಸಿಕೊಂಡಿದ್ದರು. ಆ ಸರಣಿಯನ್ನು ಭಾರತವು 4-1 ಅಂತರದಿಂದ ಗೆದ್ದುಕೊಂಡಿತ್ತು.

ಐಪಿಎಲ್-2024 ಮಾರ್ಚ್ 22ರಂದು ಆರಂಭವಾಗಲಿದೆ. ಚೆನ್ನೈನ ಎಂ.ಎ. ಚಿದಂಬರಂ ಸ್ಟೇಡಿಯಂ ನಲ್ಲಿ ನಡೆಯುವ ಐಪಿಎಲ್ ನ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್(ಸಿಎಸ್ಕೆ) ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್ ಸಿ ಬಿ)ತಂಡದೊಂದಿಗೆ ಸೆಣಸಾಡಿದ್ದರು.

LEAVE A REPLY

Please enter your comment!
Please enter your name here