Home Uncategorized ಕೆಎಸ್‌ಆರ್‌ಟಿಸಿ ಇ-ಬಸ್‌ಗಳನ್ನು ಖಾಸಗೀಕರಣ ಮಾಡುವ ಬದಲು ಖರೀದಿಸಬೇಕು ಅಥವಾ ಗುತ್ತಿಗೆ ನೀಡಬೇಕು: ಒಕ್ಕೂಟಗಳ ಒತ್ತಾಯ

ಕೆಎಸ್‌ಆರ್‌ಟಿಸಿ ಇ-ಬಸ್‌ಗಳನ್ನು ಖಾಸಗೀಕರಣ ಮಾಡುವ ಬದಲು ಖರೀದಿಸಬೇಕು ಅಥವಾ ಗುತ್ತಿಗೆ ನೀಡಬೇಕು: ಒಕ್ಕೂಟಗಳ ಒತ್ತಾಯ

18
0
Advertisement
bengaluru

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಇ-ಬಸ್‌ಗಳು ಸೋಮವಾರ ವಾಣಿಜ್ಯ ಕಾರ್ಯಾಚರಣೆಯನ್ನು ಆರಂಭಿಸಿದ್ದು, ಇಡೀ ನಿಗಮವನ್ನು ಖಾಸಗೀಕರಣಗೊಳಿಸಲು ಇದು ಮುನ್ನುಡಿಯಾಗಿದೆ ಎಂದು ಹೇಳಿರುವ ಕೆಎಸ್‌ಆರ್‌ಟಿಸಿ ನೌಕರರ ಸಂಘಗಳು ಕೆಎಸ್‌ಆರ್‌ಟಿಸಿ ನಡೆಗೆ ವಿರೋಧ ವ್ಯಕ್ತಪಡಿಸುತ್ತಿವೆ. ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಇ-ಬಸ್‌ಗಳು ಸೋಮವಾರ ವಾಣಿಜ್ಯ ಕಾರ್ಯಾಚರಣೆಯನ್ನು ಆರಂಭಿಸಿದ್ದು, ಇಡೀ ನಿಗಮವನ್ನು ಖಾಸಗೀಕರಣಗೊಳಿಸಲು ಇದು ಮುನ್ನುಡಿಯಾಗಿದೆ ಎಂದು ಹೇಳಿರುವ ಕೆಎಸ್‌ಆರ್‌ಟಿಸಿ ನೌಕರರ ಸಂಘಗಳು ಕೆಎಸ್‌ಆರ್‌ಟಿಸಿ ನಡೆಗೆ ವಿರೋಧ ವ್ಯಕ್ತಪಡಿಸುತ್ತಿವೆ.

ಕಾರ್ಯಾಚರಣೆಯನ್ನು ಸಂಪೂರ್ಣವಾಗಿ ಖಾಸಗೀಕರಣಗೊಳಿಸುವ ಬದಲು ಬಸ್‌ಗಳನ್ನು ಖರೀದಿಸುವುದು ಅಥವಾ ಗುತ್ತಿಗೆಗೆ ಪಡೆದುಕೊಳ್ಳುವಂತೆ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ.

“ಖಾಸಗಿ ನಿರ್ವಾಹಕರು ಪ್ರತಿ ಇ-ಬಸ್‌ಗೆ 88 ಲಕ್ಷ ರೂಪಾಯಿ ಸಬ್ಸಿಡಿ ಪಡೆಯುತ್ತಾರೆ. ಚಾರ್ಜಿಂಗ್ ಸ್ಟೇಷನ್‌ಗಳನ್ನು ಸ್ಥಾಪಿಸಲು ಅವರು 10 ಲಕ್ಷ ರೂ. ಸಬ್ಸಿಡಿ ಪಡೆಯುತ್ತಾರೆ. ಕೆಎಸ್‌ಆರ್‌ಟಿಸಿ ಭೂಮಿಯನ್ನು ಒದಗಿಸಲಿದೆ ಮತ್ತು ಇತರ ಸಂಪನ್ಮೂಲಗಳನ್ನು ನೀಡುತ್ತದೆ. ಈ ಎಲ್ಲ ಪ್ರಯೋಜನಗಳನ್ನು ಪಡೆದುಕೊಂಡು ಖಾಸಗಿಯವರು ಲಾಭ ಪಡೆಯುತ್ತಾರೆಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಒಕ್ಕೂಟದ ಜಂಟಿ ಕಾರ್ಯದರ್ಶಿ ಆನಂದ್ ಅವರು ಹೇಳಿದ್ದಾರೆ.

ಎಲ್ಲಾ ನಾಲ್ಕು ಸಾರಿಗೆ ನಿಗಮಗಳ (ಕೆಎಸ್‌ಆರ್‌ಟಿಸಿ, ಬಿಎಂಟಿಸಿ, ಎನ್‌ಡಬ್ಲ್ಯೂಕೆಎಸ್‌ಆರ್‌ಟಿ ಮತ್ತು ಕೆಕೆಆರ್‌ಟಿಸಿ) ಆಸ್ತಿ 1 ಲಕ್ಷ ಕೋಟಿ ರೂಪಾಯಿ ದಾಟಬಹುದಾದರೂ, ಕೆಎಸ್‌ಆರ್‌ಟಿಸಿ ಬಳಿ ಹಣವಿಲ್ಲ ಎಂದು ಹೇಳಿ ಖಾಸಗಿಯವರಿಗೆ ಬಸ್‌ಗಳನ್ನು ಓಡಿಸಲು ಅನುಮತಿ ನೀಡುವ ನಿರ್ಧಾರವು ಇಡೀ ನಿಗಮವನ್ನು ಖಾಸಗೀಕರಣಗೊಳಿಸುವ ಮೊದಲ ಪ್ರಮುಖ ಹೆಜ್ಜೆಯಾಗಿದೆ ಎಂದು ತಿಳಿಸಿದ್ದಾರೆ.

bengaluru bengaluru

“ಕಡಿಮೆ ಜನರಿದ್ದರೂ, ಕೆಎಸ್ಆರ್ಟಿಸಿ ತನ್ನ ಬಸ್ಗಳನ್ನು ಚಾಲನೆ ಮಾಡುತ್ತಿದೆ. ಆದರೆ, ಅದನ್ನು ನಾವು ಖಾಸಗಿಯವರಿಂದ ನಿರೀಕ್ಷಿಸಲು ಸಾಧ್ಯವಿಲ್ಲ. ಖಾಸಗಿ ಸೇವೆಯು ಜನಸ್ನೇಹಿಯಾಗಿರಬೇಕೆಂದು ನಾವು ನಿರೀಕ್ಷಿಸಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

ಕೆಎಸ್‌ಆರ್‌ಟಿಸಿ ಸ್ಟಾಫ್ ಅಂಡ್ ವರ್ಕರ್ಸ್ ಫೆಡರೇಶನ್ (ಎಐಟಿಯುಸಿಗೆ ಸಂಯೋಜಿತವಾಗಿದೆ) ಅಧ್ಯಕ್ಷರೂ ಆಗಿರುವ ಸಾರಿಗೆ ಕಾರ್ಯಕರ್ತ ಎಚ್ ವಿ ಅನಂತ ಸುಬ್ಬರಾವ್ ಅವರು ಮಾತನಾಡಿ, “ನಾವು ಇ-ಬಸ್‌ಗಳ ಪರಿಚಯಕ್ಕೆ ವಿರುದ್ಧವಿಲ್ಲ, ಆದರೆ ಕೆಎಸ್‌ಆರ್‌ಟಿಸಿ ಖಾಸಗೀಕರಣಕ್ಕೆ ವಿರುದ್ಧವಿದ್ದೇವೆಂದು ಹೇಳಿದ್ದಾರೆ.

ಬಸ್ಸುಗಳನ್ನು ಖರೀದಿಸುವ ಅಥವಾ ಬಾಡಿಗೆಗೆ ನೀಡುವ ಬದಲು ಇಡೀ ಕಾರ್ಯಾಚರಣೆಯನ್ನು ಖಾಸಗೀಕರಣಗೊಳಿಸಲಾಗುತ್ತಿದೆ. ಸಾರಿಗೆ ನಿಗಮವು ಇ-ಬಸ್‌ಗಳನ್ನು ಪ್ರಯೋಗಿಸುತ್ತಿರುವುದರಿಂದ, 12 ವರ್ಷಗಳವರೆಗೆ ಒಪ್ಪಂದದ ಮೇಲೆ ಒಂದೇ ಬಾರಿಗೆ 50 ಬಸ್‌ಗಳಿಗೆ ಅನುಮತಿ ನೀಡುವ ಬದಲು 10 ಇ-ಬಸ್‌ಗಳಿಗೆ ಅನುಮತಿ ನೀಡುವಂತೆ ನಿರ್ಬಂಧಿಸಬೇಕು ಎಂದು ಸುಬ್ಬರಾವ್ ಆಗ್ರಹಿಸಿದ್ದಾರೆ.

ಕೆಎಸ್‌ಆರ್‌ಟಿಸಿಯು ಪ್ರಯಾಣಿಕರ ಆಧಾರಿತ ಉದ್ಯಮವಾಗಿದೆ, ಬಸ್ ಸಂಖ್ಯೆಗಳನ್ನು ಹೆಚ್ಚಿಸುವ ಮೊದಲು ಕೆಲವು ಬಸ್‌ಗಳನ್ನು ಓಡಿಸಿದ ನಂತರ ಜನರ ಇಷ್ಟ ಮತ್ತು ಕಷ್ಟಗಳನ್ನು ಅರಿಯಬೇಕು ಎಂದಿದ್ದಾರೆ.

ಕೆಎಸ್‌ಆರ್‌ಟಿಸಿಯ ಉನ್ನತ ಅಧಿಕಾರಿಯೊಬ್ಬರು ಮಾತನಾಡಿ, “ಸದ್ಯಕ್ಕೆ, ಖಾಸಗಿ ನಿರ್ವಾಹಕರು ಒಟ್ಟು ವೆಚ್ಚದ ಒಪ್ಪಂದದಲ್ಲಿ 50 ಇ-ಬಸ್‌ಗಳನ್ನು ಓಡಿಸಲಿದ್ದಾರೆ. ಬಸ್‌ಗಳು ಹೇಗೆ ಕಾರ್ಯನಿರ್ವಹಿಸುತ್ತಿವೆ ಎಂಬುದನ್ನು ನಾವು ಗಮನಿಸುತ್ತೇವೆ ಮತ್ತು ಬಸ್‌ಗಳನ್ನು ಬಾಡಿಗೆಗೆ ನೀಡುವ ಆಯ್ಕೆಗಳನ್ನು ಅನ್ವೇಷಿಸುತ್ತೇವೆಂದಿದ್ದಾರೆ.


bengaluru

LEAVE A REPLY

Please enter your comment!
Please enter your name here