Home Uncategorized ಕೊಪ್ಪಳ: ದೇವಸ್ಥಾನ ಪ್ರವೇಶಿಸಿದ ದಲಿತ ಯುವಕನಿಗೆ ಥಳಿತ, 8 ಮಂದಿ ವಿರುದ್ಧ ಎಫ್ಐಆರ್ ದಾಖಲು

ಕೊಪ್ಪಳ: ದೇವಸ್ಥಾನ ಪ್ರವೇಶಿಸಿದ ದಲಿತ ಯುವಕನಿಗೆ ಥಳಿತ, 8 ಮಂದಿ ವಿರುದ್ಧ ಎಫ್ಐಆರ್ ದಾಖಲು

25
0

ದೇವಸ್ಥಾನ ಪ್ರವೇಶಿಸಿದ ದಲಿತ ಯುವಕನೊಬ್ಬನ ಮೇಲೆ ಹಲ್ಲೆ ನಡೆಸಿರುವ ಘಟನೆಯೊಂದು ಕೊಪ್ಪಳ ಜಿಲ್ಲೆಯ ಹಿಟ್ನಾಳ ಗ್ರಾಮದಲ್ಲಿ ನಡೆದಿದೆ. ಮುನಿರಾಬಾದ್: ದೇವಸ್ಥಾನ ಪ್ರವೇಶಿಸಿದ ದಲಿತ ಯುವಕನೊಬ್ಬನ ಮೇಲೆ ಹಲ್ಲೆ ನಡೆಸಿರುವ ಘಟನೆಯೊಂದು ಕೊಪ್ಪಳ ಜಿಲ್ಲೆಯ ಹಿಟ್ನಾಳ ಗ್ರಾಮದಲ್ಲಿ ನಡೆದಿದೆ.

ಕಳೆದ ವಾರ ಹಿಟ್ನಾಳ ಗ್ರಾಮದಲ್ಲಿ ವಾರ್ಷಿಕ ಗ್ರಾಮೋತ್ಸವ ನಡೆದಿದ್ದು, ಈ ವೇಳೆ ಯುವಕ ದೇವಸ್ಥಾನ ಪ್ರವೇಶಿಸಿದ್ದಾನೆ. ಈ ವಿಚಾರ ಇಡೀ ಗ್ರಾಮಕ್ಕೆ ತಿಳಿದಿದ್ದು, ಮರುದಿನ ಗ್ರಾಮಸ್ಥರು ಯುವಕ ಮನೆಗೆ ನುಗ್ಗಿ ಆತನ ಮೇಲೆ ಹಲ್ಲೆ ನಡೆಸಿದ್ದಾರೆ.

ಈ ವೇಳೆ ಗ್ರಾಮಸ್ಥರು ಹಾಗೂ ಸಮುದಾಯಗಳ ನಡುವೆ ಮಾತಿನ ಚಕಮಕಿ ನಡೆದಿದೆ. ಸ್ಥಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರಲು ಆರಂಭಿಸಿದಾಗ ಗ್ರಾಮಸ್ಥರು ಎಚ್ಚರಿಕೆ ನೀಡಿ ಸ್ಥಳದಿಂದ ತೆರಳಿದ್ದಾರೆ.

ಗಾಯಗೊಂಡ ಯುವಕನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಚಿಕಿತ್ಸೆ ಬಳಿಕ ಯುವಕನ ಕುಟುಂಬಸ್ಥರು ಪೊಲೀಸರಿಗೆ ದೂರು ದಾಖಲಿಸಿದ್ದಾರೆ. ಬಳಿಕ ಗ್ರಾಮಸ್ಥರೂ ಕೂಡ ಯುವಕನ ವಿರುದ್ಧ ಪ್ರತಿದೂರು ದಾಖಲಿಸಿದ್ದಾರೆ.

ಯುವಕ ಜಾತ್ರೆಯಲ್ಲಿ ಇತರರಿಗೆ ಕಿರುಕುಳ ನೀಡುತ್ತಿದ್ದ ಎಂದು ಗ್ರಾಮಸ್ಥರು ದೂರಿನಲ್ಲಿ ಹೇಳಿದ್ದು, ದೇವಸ್ಥಾನದೊಳಗೆ ಹೋಗಿದ್ದಕ್ಕೇ ಹಲ್ಲೆ ನಡೆಸಿದ್ದಾರೆಂದು ಸಂತ್ರಸ್ತ ಯುವಕ ಹೇಳಿಕೊಂಡಿದ್ದಾನೆ.

ಮೊದಲ ಎರಡು ದಿನ ಗ್ರಾಮಸ್ಥರು ಹಾಗೂ ರಾಜಕೀಯ ನಾಯಕರು ಪ್ರಕರಣ ದಾಖಲಿಸದಂತೆ ಪ್ರಯತ್ನ ನಡೆಸಿದರು. ಈ ರೀತಿ ನಡೆಯುತ್ತಿರುವುದು ಇದೇ ಮೊದಲಲ್ಲ. ಹಲವು ಬಾರಿ ನಡೆದಿದೆ. ದೂರುಗಳನ್ನೂ ನೀಡಿದ್ದೇವೆ. ನಮ್ಮನ್ನು ಗ್ರಾಮದಲ್ಲಿ ಕೆಟ್ಟದಾಗಿ ನಡೆಸಿಕೊಳ್ಳಲಾಗುತ್ತಿದೆ ಎಂದು ಯುವಕನ ಕುಟುಂಬಸ್ಥರು ಹೇಳಿದ್ದಾರೆ.

ಸಣ್ಣ ಜಗಳವೊಂದು ಹಲವು ಜಗಳಕ್ಕೆ ಕಾರಣವಾಗಿದೆ. ಈ ಘಟನೆ ಸಂಬಂಧ ಸಂಧಾನಕ್ಕೂ ಯತ್ನ ನಡೆಸಲಾಯಿತು. ಆದರೆ, ಫಲಕಾರಿಯಾಗಲಿಲ್ಲ. ಮನೆಗೆ ನುಗ್ಗಿ ಯುವಕನನ್ನು ಥಳಿಸಿದ್ದರಿಂದ ಸಮುದಾಯದವರು ಕೆಂಡಾಮಂಡಲಗೊಂಡಿದ್ದಾರೆ. ದೂರನ್ನು ಹಿಂಪಡೆದುಕೊಳ್ಳಲು ಬಯಸುತ್ತಿಲ್ಲ. ಇಂತಹ ದೌರ್ಜನ್ಯಗಳು ನಡೆಯದಂತೆ ನೋಡಿಕೊಳ್ಳಲು ಗ್ರಾಮದ ಮುಖಂಡರು ಮತ್ತು ಅಧಿಕಾರಿಗಳು ನಿಯಮಿತವಾಗಿ ಸಭೆಗಳನ್ನು ನಡೆಸಬೇಕು ಎಂದು ಗ್ರಾಮಸ್ಥರೊಬ್ಬರು ಹೇಳಿದ್ದಾರೆ.

ಘಟನೆ ಸಂಬಂಧ ಪೊಲೀಸರು ಗ್ರಾಮದ ನಿವಾಸಿಗಳಾದ ಫಕೀರವ್ವ ಗುನ್ನಾಳ್, ಶ್ರೀಧರ ಮಡಿವಾಳ್, ಗಣೇಶ್ ಬೆಣಕಲ್, ಗುರುಕಿರಣ್ ಇಳಿಗೇರ್, ಕಾಶಿನಾಥ ಉಪ್ಪಾಪರ್, ದುರ್ಗೇಶ್ ಗೊಲ್ಲರ, ಶಿವಕುಮಾರ ಭಜಂತ್ರಿ, ಅಪ್ಪಾಜಿ ವಾಲ್ಮೀಕಿ ಎಂಬುವವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮುನಿರಾಬಾದ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.

LEAVE A REPLY

Please enter your comment!
Please enter your name here