Home Uncategorized ಕೋವಿಶೀಲ್ಡ್ ಬೂಸ್ಟರ್‌ ಡೋಸ್‌'ಗೆ ಹೆಚ್ಚಿದ ಬೇಡಿಕೆ: ರಾಜ್ಯದ ಲಸಿಕೆ ಮನವಿಗೆ ಇನ್ನೂ ಪ್ರತಿಕ್ರಿಯಿಸದ ಕೇಂದ್ರ ಸರ್ಕಾರ

ಕೋವಿಶೀಲ್ಡ್ ಬೂಸ್ಟರ್‌ ಡೋಸ್‌'ಗೆ ಹೆಚ್ಚಿದ ಬೇಡಿಕೆ: ರಾಜ್ಯದ ಲಸಿಕೆ ಮನವಿಗೆ ಇನ್ನೂ ಪ್ರತಿಕ್ರಿಯಿಸದ ಕೇಂದ್ರ ಸರ್ಕಾರ

20
0

ವಿದೇಶದಲ್ಲಿ ಕೋವಿಡ್-19 ಪ್ರಕರಣಗಳು ಹೆಚ್ಚುತ್ತಿದ್ದು, ಆತಂಕಕ್ಕೊಳಗಾಗಿರುವ ಜನತೆ ಬೂಸ್ಟರ್ ಡೋಸ್ ಪಡೆದುಕೊಳ್ಳಲು ಮುಂದಾಗುತ್ತಿದ್ದಾರೆ. ಆದರೆ, ಈ ನಡುವೆ ಲಸಿಕೆಗಳ ಕೊರತೆ ಎದುರಾಗಿದ್ದು, ರಾಜ್ಯ ಸರ್ಕಾರ 30 ಲಕ್ಷ ಡೋಸ್ ಲಸಿಕೆಗಳಿಗೆ ಬೇಡಿಕೆ ಮುಂದಿಟ್ಟಿದ್ದರೂ ಕೇಂದ್ರದಿಂದ ಮಾತ್ರ ಇನ್ನೂ ಯಾವುದೇ ರೀತಿಯ ಪ್ರತಿಕ್ರಿಯೆಗಳು ಬಂದಿಲ್ಲ ಎನ್ನಲಾಗಿದೆ. ಬೆಂಗಳೂರು: ವಿದೇಶದಲ್ಲಿ ಕೋವಿಡ್-19 ಪ್ರಕರಣಗಳು ಹೆಚ್ಚುತ್ತಿದ್ದು, ಆತಂಕಕ್ಕೊಳಗಾಗಿರುವ ಜನತೆ ಬೂಸ್ಟರ್ ಡೋಸ್ ಪಡೆದುಕೊಳ್ಳಲು ಮುಂದಾಗುತ್ತಿದ್ದಾರೆ. ಆದರೆ, ಈ ನಡುವೆ ಲಸಿಕೆಗಳ ಕೊರತೆ ಎದುರಾಗಿದ್ದು, ರಾಜ್ಯ ಸರ್ಕಾರ 30 ಲಕ್ಷ ಡೋಸ್ ಲಸಿಕೆಗಳಿಗೆ ಬೇಡಿಕೆ ಮುಂದಿಟ್ಟಿದ್ದರೂ ಕೇಂದ್ರದಿಂದ ಮಾತ್ರ ಇನ್ನೂ ಯಾವುದೇ ರೀತಿಯ ಪ್ರತಿಕ್ರಿಯೆಗಳು ಬಂದಿಲ್ಲ ಎನ್ನಲಾಗಿದೆ.

ಜನವರಿ ಅಂತ್ಯದ ವೇಳೆಗೆ ಅರ್ಹ ಜನಸಂಖ್ಯೆಯ ಕನಿಷ್ಠ 50 ಪ್ರತಿಶತದಷ್ಟು ಜನರಿಗೆ ಬೂಸ್ಟರ್ ಡೋಸ್ ನೀಡಲುವ ಗುರಿಯನ್ನು ಸರ್ಕಾರ ಹೊಂದಿದ್ದು, ಲಸಿಕೆ ಒದಗಿಸುವ ಕುರಿತು ಕೇಂದ್ರ ಸರ್ಕಾರದ ಯಾವುದೇ ಪ್ರತಿಕ್ರಿಯೆ ನೀಡದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ಗುರಿಗೆ ಹಿನ್ನಡೆಯುಂಟಾದಂತಾಗಿದೆ.

ಗುರುವಾರದವರೆಗೆ ರಾಜ್ಯ ಸರ್ಕಾರ ಕೇವಲ ಶೇ.21ರಷ್ಟು ಜನರಿಗೆ ಮಾತ್ರ ಬೂಸ್ಟರ್ ಡೋಸ್ ನೀಡಿದ್ದು, ಕೋವಿಶೀಲ್ಟ್ ಕೊರತೆಯೇ ಈ ಹಿನ್ನಡೆಗೆ ಪ್ರಮುಖ ಕಾರಣ ಎಂದು ಹೇಳಲಾಗುತ್ತಿದೆ.

30 ಲಕ್ಷ ಡೋಸ್ ಲಸಿಕೆ ಪೂರೈಕೆ ಮಾಡುವಂತೆ ಈ ಹಿಂದೆಯೇ ರಾಜ್ಯ ಸರ್ಕಾರ ಕೇಂದ್ರಕ್ಕೆ ಮನವಿ ಮಾಡಿಕೊಂಡಿತ್ತು. ಮನವಿಯಂತೆ ಕೇಂದ್ರ ಸರ್ಕಾರ ಕಳೆದ ವಾರವೇ ಲಸಿಕೆ ಪೂರೈಕೆ ಮಾಡಬೇಕಿತ್ತು. ಆದರೆ, ಕೇಂದ್ರದಿಂದ ಇನ್ನೂ ಯಾವುದೇ ಪ್ರತಿಕ್ರಿಯೆಗಳು ಬಂದಿಲ್ಲ.

ಖಾಸಗಿ ಕಾಲೇಜಿನಲ್ಲಿ ಕೆಲಸ ಮಾಡುತ್ತಿರುವ ರವಿಕುಮಾರ್ ಎಂಬುವವರು ಮಾತನಾಡಿ, “ಚೀನಾ, ಅಮೆರಿಕಾ ಮತ್ತು ಇತರ ದೇಶಗಳಲ್ಲಿ ಕೋವಿಡ್ ಸೋಂಕು ಪ್ರಕರಣಗಳು ಹೆಚ್ಚುತ್ತಿವೆ. ಮತ್ತೊಂದು ಸಾಂಕ್ರಾಮಿಕ ರೋಗದ ಭಯದಿಂದ, ನಾನು ಬೂಸ್ಟರ್ ಡೋಸ್ ಪಡೆಯಲು ಮುಂದಾಗಿದ್ದೇನೆ. ಆದರೆ, ಎಲ್ಲಾ ಲಸಿಕೆ ಕೇಂದ್ರಗಳಲ್ಲಿಯೂ ಕೋವಾಕ್ಸಿನ್ ಲಸಿಕೆಗಳು ಮಾತ್ರ ಇವೆ. ಕೋವಿಶೀಲ್ಡ್ ಇಲ್ಲ. ಒಂದು ಕಡೆ, ಸರ್ಕಾರವು ಬೂಸ್ಟರ್ ಡೋಸ್ ಪಡೆದುಕೊಳ್ಳುವಂತೆ ಮನವಿ ಮಾಡಿಕೊಳ್ಳುತ್ತದೆ, ಆದರೆ, ಮತ್ತೊಂದೆಡೆ ಲಸಿಕೆಯ ದಾಸ್ತಾನು ಇಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಲಭ್ಯವಿರುವ ಅಂಕಿಅಂಶಗಳ ಪ್ರಕಾರ, ಜನವರಿ 11 ರ ಹೊತ್ತಿಗೆ, ರಾಜ್ಯದಲ್ಲಿ 5.12 ಲಕ್ಷ ಕೋವಾಕ್ಸಿನ್ ಡೋಸ್‌ಗಳು ಮತ್ತು 320 ಡೋಸ್ ಕೋವಿಶೀಲ್ಡ್ ಸ್ಟಾಕ್‌ಗಳಿದ್ದು, ಕೋವಾಕ್ಸಿನ್ ಅಥವಾ ಕೋವಿಶೀಲ್ಡ್ ಅನ್ನು ತೆಗೆದುಕೊಂಡವರಿಗೆ ನೀಡಬಹುದಾದ ಭಿನ್ನರೂಪದ ಕಾರ್ಬೆವಾಕ್ಸ್‌ನ ದಾಸ್ತಾನು ರಾಜ್ಯದ ಬಳಿ ಇಲ್ಲ ಎಂದು ತಿಳಿದುಬಂದಿದೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತ ಡಿ ರಂದೀಪ್ ಅವರು ಮಾತನಾಡಿ, ಕೇಂದ್ರದಿಂದ ಇನ್ನೂ ಲಸಿಕೆ ಬಂದಿಲ್ಲ ಎಂದು ಹೇಳಿದ್ದಾರೆ.

ರಾಜ್ಯದಲ್ಲಿ ಇರುವ ಲಸಿಕೆಯ ದಾಸ್ತಾನು ಹಾಗೂ ಅವುಗಳ ಅವಧಿಯನ್ನು ಮೊದಲು ಪರಿಶೀಲಿಸುವುದು ಅಗತ್ಯವಿದೆ. ಇನ್ನು ಕೆಲವೇ ತಿಂಗಳಲ್ಲಿ ಕರ್ನಾಟಕವು 8 ಲಕ್ಷ ಕೋವಿಶೀಲ್ಡ್ ಲಸಿಕೆಗಳನ್ನು ಪಡೆದುಕೊಳ್ಳುವ ನಿರೀಕ್ಷೆಗಳಿವೆ ಎಂದು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here