Home Uncategorized ಗಗನಯಾನ ಅಭಿಯಾನಕ್ಕೆ ಆಯ್ಕೆಯಾದ ನಾಲ್ವರು ಗಗನಯಾತ್ರಿಗಳು ಯಾರು?; ಇಲ್ಲಿದೆ ಮಾಹಿತಿ

ಗಗನಯಾನ ಅಭಿಯಾನಕ್ಕೆ ಆಯ್ಕೆಯಾದ ನಾಲ್ವರು ಗಗನಯಾತ್ರಿಗಳು ಯಾರು?; ಇಲ್ಲಿದೆ ಮಾಹಿತಿ

6
0

ಹೊಸದಿಲ್ಲಿ: ಗಗನಯಾನ ಅಭಿಯಾನಕ್ಕೆ ಆಯ್ಕೆಯಾಗಿರುವ ನಾಲ್ವರು ಗಗನಯಾತ್ರಿಗಳ ಹೆಸರುಗಳನ್ನು ಪ್ರಧಾನಿ ನರೇಂದ್ರ ಮೋದಿಯವರು ಮಂಗಳವಾರ ಇಲ್ಲಿ ಪ್ರಕಟಿಸಿದರು. ಈ ಗಗನಯಾತ್ರಿಗಳು ದೇಶದ ಚೊಚ್ಚಲ ಮಾನವ ಸಹಿತ ಬಾಹ್ಯಾಕಾಶ ಯಾನಕ್ಕಾಗಿ ತರಬೇತಿ ಪಡೆಯುತ್ತಿದ್ದಾರೆ.

ಪ್ರಶಾಂತ್ ನಾಯರ್, ಅಂಗದ ಪ್ರತಾಪ್,‌ ಅಜಿತ್ ಕೃಷ್ಣನ್ ಮತ್ತು ಶುಭಾಂಶು ಶುಕ್ಲಾ ಅವರು ಈ ನಾಲ್ವರು ಗಗನಯಾತ್ರಿಗಳಾಗಿದ್ದಾರೆ. ಗಗನಯಾನ ಭಾರತದ ಮೊದಲ ಮಾನವ ಸಹಿತ ಅಂತರಿಕ್ಷ ಯಾನ ಕಾರ್ಯಕ್ರಮವಾಗಿದ್ದು, ಇದಕ್ಕಾಗಿ ವಿವಿಧ ಇಸ್ರೋ ಕೇಂದ್ರಗಳಲ್ಲಿ ವ್ಯಾಪಕ ಸಿದ್ಧತೆಗಳು ನಡೆಯುತ್ತಿವೆ.

ಮೂರು ದಿನಗಳ ಗಗನಯಾನ ಅಭಿಯಾನವು ಗಗನಯಾತ್ರಿಗಳನ್ನು 400 ಕಿ.ಮೀ.ದೂರದ ಕಕ್ಷೆಗೆ ಉಡಾವಣೆಗೊಳಿಸುವ ಮತ್ತು ಬಳಿಕ ಭಾರತೀಯ ಸಮುದ್ರದಲ್ಲಿ ಇಳಿಸುವ ಮೂಲಕ ಅವರನ್ನು ಭೂಮಿಗೆ ಸುರಕ್ಷಿತವಾಗಿ ಕರೆತರುವುದನ್ನು ಒಳಗೊಂಡಿದ್ದು, ದೇಶದ ಮಾನವ ಸಹಿತ ಅಂತರಿಕ್ಷ ಯಾನದ ಸಾಮರ್ಥ್ಯವನ್ನು ಪ್ರದರ್ಶಿಸಲಿದೆ.

2023ರಲ್ಲಿ ಚಂದ್ರನ ದಕ್ಷಿಣ ಧ್ರುವದಲ್ಲಿ ಚಂದ್ರಯಾನ-3ನ್ನು ಯಶಸ್ವಿಯಾಗಿ ಇಳಿಸುವ ಮತ್ತು ದೇಶದ ಮೊದಲ ಸೌರ ಅಭಿಯಾನ ಆದಿತ್ಯ-ಎಲ್‌1ನ ಉಡಾವಣೆಯ ಮೂಲಕ ಭಾರತವು ಹೊಸ ಎತ್ತರಕ್ಕೇರಿದೆ.

2024-25ರಲ್ಲಿ ಗಗನಯಾನ ಅಭಿಯಾನ,2035ರ ವೇಳೆಗೆ ‘ಭಾರತೀಯ ಅಂತರಿಕ್ಷ ನಿಲ್ದಾಣ’ದ ಸ್ಥಾಪನೆ ಮತ್ತು 2040ರ ವೇಳೆಗೆ ಚಂದ್ರನಲ್ಲಿ ಮೊದಲ ಭಾರತೀಯನ ರವಾನೆ ಇವು ಭಾರತದ ಕೆಲವು ಪ್ರಮುಖ ಗುರಿಗಳಾಗಿವೆ.

LEAVE A REPLY

Please enter your comment!
Please enter your name here