Home Uncategorized ಗಡಿ ವಿವಾದ: ಮಹಾರಾಷ್ಟ್ರ, ಕರ್ನಾಟಕ ನಾಯಕರು ಸಂಯಮ ಕಾಯ್ದುಕೊಳ್ಳಬೇಕು; ಗೃಹ ಸಚಿವ ಆರಗ ಜ್ಞಾನೇಂದ್ರ

ಗಡಿ ವಿವಾದ: ಮಹಾರಾಷ್ಟ್ರ, ಕರ್ನಾಟಕ ನಾಯಕರು ಸಂಯಮ ಕಾಯ್ದುಕೊಳ್ಳಬೇಕು; ಗೃಹ ಸಚಿವ ಆರಗ ಜ್ಞಾನೇಂದ್ರ

19
0

ಗಡಿ ವಿವಾದ ಸಂಬಂಧ ರಾಜಕೀಯ ನಾಯಕರು ಜನಜೀವನ ಅಸ್ತವ್ಯಸ್ತಗೊಳಿಸುವ ಹೇಳಿಕೆಗಳನ್ನು ನೀಡಬಾರದು. ಎರಡೂ ರಾಜ್ಯಗಳ ನಾಯಕರು ಸಂಯಮ ಕಾಯ್ದುಕೊಳ್ಳಬೇಕೆಂದು ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಬುಧವಾರ ಹೇಳಿದರು. ಬೆಳಗಾವಿ: ಗಡಿ ವಿವಾದ ಸಂಬಂಧ ರಾಜಕೀಯ ನಾಯಕರು ಜನಜೀವನ ಅಸ್ತವ್ಯಸ್ತಗೊಳಿಸುವ ಹೇಳಿಕೆಗಳನ್ನು ನೀಡಬಾರದು. ಎರಡೂ ರಾಜ್ಯಗಳ ನಾಯಕರು ಸಂಯಮ ಕಾಯ್ದುಕೊಳ್ಳಬೇಕೆಂದು ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಬುಧವಾರ ಹೇಳಿದರು.

ಚೀನಾ ಭಾರತದ ಗಡಿ ಹೇಗೆ ಪ್ರವೇಶಿಸಿತ್ತೋ ಹಾಗೆಯೇ ಮಹಾರಾಷ್ಟ್ರ ಕೂಡ ಕರ್ನಾಟಕದ ಗಡಿ ನುಗ್ಗಲಿದೆ ಎಂಬ ಶಿವಸೇನ ನಾಯಕ ಸಂಜಯ್ ರಾವತ್ ಅವರ ಹೇಳಿಕೆಗೆ ಗೃಹ ಸಚಿವರು ನಿನ್ನೆ ಪ್ರತಿಕ್ರಿಯೆ ನೀಡಿದರು.

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಉಭಯ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ನಡೆಸಿದ ಸಭೆಯನ್ನು ಸ್ಮರಿಸಿದ ಸಚಿವರು, ಇಂತಹ ಕ್ಷಣಗಳಲ್ಲಿ ನಾಯಕರು ಸಂಯಮ ತೋರಿಸಬೇಕು ಮತ್ತು ಎರಡೂ ರಾಜ್ಯಗಳ ನಾಯಕರು ಕಾನೂನು ಖಾತ್ರಿಪಡಿಸಲು ಕಠಿಣ ಕ್ರಮಗಳನ್ನು ಪ್ರಾರಂಭಿಸಬೇಕು ಎಂದು ಹೇಳಿದರು.

ಇತ್ತೀಚೆಗೆ ನವದೆಹಲಿಯಲ್ಲಿ ನಡೆದ ಸಭೆಯಲ್ಲಿ, ಗೊಂದಲಕ್ಕೆ ಕಾರಣವಾದ ವಿವಾದಾತ್ಮಕ ಹೇಳಿಕೆಗಳನ್ನು ನೀಡದಂತೆ ಅಮಿತ್ ಶಾ ಅವರು ಎರಡೂ ರಾಜ್ಯಗಳಿಗೆ ಮನವಿ ಮಾಡಿದ್ದರು.

LEAVE A REPLY

Please enter your comment!
Please enter your name here