Home ಕರ್ನಾಟಕ ದೀಪಾವಳಿ: ಹಸಿರು ಪಟಾಕಿ ಬಳಕೆಗೆ ಸರ್ಕಾರದ ಅನುಮತಿ

ದೀಪಾವಳಿ: ಹಸಿರು ಪಟಾಕಿ ಬಳಕೆಗೆ ಸರ್ಕಾರದ ಅನುಮತಿ

110
0
Advertisement
bengaluru

ಬೆಂಗಳೂರು:

ದೀಪಾವಳಿ ಹೊಸ್ತಿಲಿನಲ್ಲೇ ರಾಜ್ಯದಲ್ಲಿ ಎಲ್ಲ ಮಾದರಿ ಪಟಾಕಿಗಳ ಮಾರಾಟ ಮತ್ತು ಬಳಕೆಯನ್ನು ನಿಷೇಧಿಸಿದ್ದ ಸರ್ಕಾರ ನಂತರ ಹಿಂದೂಗಳ ಭಾವನೆಗಳಿಗೆ ಮಾನ್ಯತೆ ನೀಡಿ ಪಟಾಕಿ ಸಂಪೂರ್ಣ ನಿಷೇಧ ವಾಪಸ್ ಪಡೆದು ಹಸಿರು ಪಟಾಕಿ ಬಳಕೆಗೆ ಅನುಮತಿ ನೀಡಿದೆ.

ದೀಪಾವಳಿ ಹಬ್ಬದ ದಿನ ಪಟಾಕಿ ಮಾರುವುದು ಮತ್ತು ಸಿಡಿಸುವುದನ್ನು ನಿಷೇಧಿಸುವ ಬಗ್ಗೆ ಸಾರ್ವಜನಿಕರಿಂದ ಹಲವಾರು ಸಲಹೆಗಳು ಬಂದಿರುತ್ತವೆ.ಕೊವಿಡ್-19 ಸೋಂಕು ನಿಯಂತ್ರಿಸಲು ರಾಜ್ಯ ಸರ್ಕಾರವು ಈಗಾಗಲೇ ಎಲ್ಲ ರೀತಿಯ ಅಗತ್ಯ ಕ್ರಮ ತೆಗೆದುಕೊಂಡಿದೆ. ರಾಜ್ಯದಲ್ಲಿನ ಸಾರ್ವಜನಿಕರು ಮತ್ತು ಮಕ್ಕಳ ಆರೋಗ್ಯ ಹಾಗೂ ಹಿತದೃಷ್ಟಿಯಿಂದ ದೀಪಾವಳಿ ಹಬ್ಬವನ್ನು ಸರಳ ಮತ್ತು ಅರ್ಥಗರ್ಭಿತವಾಗಿ ಆಚರಿಸುವುದು ಸೂಕ್ತವಾಗಿದೆ.

WhatsApp Image 2020 11 06 at 21.44.35

ದೀಪಾವಳಿ ಹಬ್ಬದ ದಿನ ಹಸಿರು ಪಟಾಕಿಗಳನ್ನು ಮಾತ್ರ ಬಳಸಿ ಸರಳ ಮತ್ತು ಸುಂದರವಾಗಿ ಹಬ್ಬವನ್ನು ಆಚರಿಸಲು ಮನವಿ ಮಾಡಿಕೊಳ್ಳಲಾಗಿದೆ. ರಾಜ್ಯದ ಎಲ್ಲ ಪ್ರಜೆಗಳಿಗೂ ಮುಂಚಿತವಾಗಿ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯ ಎಂದು ಮುಖ್ಯಮಂತ್ರಿ ಹೇಳಿದ್ದಾರೆ. ಆದರೆ ಪಟಾಕಿ ಸಂಪೂರ್ಣ ನಿಷೇಧಕ್ಕೆ ವಿರೋಧ ವ್ಯಕ್ತವಾದ ಹಿನ್ನೆಲೆ ಹಸಿರು ಪಟಾಕಿಗಳ ಬಳಕೆಗೆ ಇದೀಗ ಅನುಮತಿ ನೀಡಲಾಗಿದೆ.

bengaluru bengaluru

bengaluru

LEAVE A REPLY

Please enter your comment!
Please enter your name here