Home Uncategorized ದೇಶದಲ್ಲಿ ಒಂದೇ ದಿನ 5 ಕೋವಿಡ್ ಸಾವು, 529 ಹೊಸ ಪ್ರಕರಣ

ದೇಶದಲ್ಲಿ ಒಂದೇ ದಿನ 5 ಕೋವಿಡ್ ಸಾವು, 529 ಹೊಸ ಪ್ರಕರಣ

8
0

ಹೊಸದಿಲ್ಲಿ: ಕೋವಿಡ್‍ನ ಹೊಸ ಉಪ ಪ್ರಬೇಧವಾದ ಜೆಎನ್.1 ಪ್ರಕರಣ ಕೇರಳದಲ್ಲಿ ಈ ತಿಂಗಳ 8ರಂದು ಮೊದಲ ಬಾರಿಗೆ ವರದಿಯಾಗಿದ್ದು, ದೇಶಾದ್ಯಂತ ಬುಧವಾರ 529 ಹೊಸ ಕೋವಿಡ್-19 ಪ್ರಕರಣಗಳು ಬೆಳಕಿಗೆ ಬಂದಿವೆ. ಐದು ಮಂದಿ ಸೋಂಕಿತರು ಮೃತಪಟ್ಟಿದ್ದಾರೆ. ಬುಧವಾರ ದೆಹಲಿಯಲ್ಲಿ ಮೊದಲ ಪ್ರಕರಣ ಬೆಳಕಿಗೆ ಬಂದಿದ್ದು, ಇದುವರೆಗೆ ಒಂಬತ್ತು ರಾಜ್ಯಗಳಿಗೆ ಸೋಂಕು ಹರಡಿದೆ ಎಂದು ಅಧಿಕೃತ ಮೂಲಗಳು ಹೇಳಿವೆ.

ಭಾರತದ ಆರೋಗ್ಯ ಸಚಿವಾಲಯದ ಪ್ರಕಾರ, ಕಳೇದ 24 ಗಂಟೆಗಳಲ್ಲಿ 529 ಹೊಸ ಪ್ರಕರಣಗಳು ವರದಿಯಾಗಿದ್ದು, ಕರ್ನಾಟಕದಲ್ಲಿ ಇಬ್ಬರು ಹಾಗೂ ಗುಜರಾತ್‍ನಲ್ಲಿ ಒಬ್ಬರು ಸೋಂಕಿನಿಂದ ಮೃತಪಟ್ಟಿದ್ದಾರೆ. ಆ ಬಳಿಕ ಮಹಾರಾಷ್ಟ್ರ ಎರಡು ಕೋವಿಡ್-19 ಸಾವುಗಳನ್ನು ದೃಢಪಡಿಸಿದ್ದು, ಕಳೆದ ಮೂರು ತಿಂಗಳಲ್ಲಿ ರಾಜ್ಯದಲ್ಲಿ ಮೊದಲ ಕೋವಿಡ್ ಸಾವು ಸಂಭವಿಸಿದೆ.

ಮಹಾರಾಷ್ಟ್ರದಲ್ಲಿ 87 ಸೋಂಕು ಪ್ರಕರಣಗಳು ಬುಧವಾರ ಪತ್ತೆಯಾಗಿದ್ದು, ಮಂಗಳವಾರ ಬೆಳಕಿಗೆ ಬಂದ 37 ಪ್ರಕರಣಗಳಿಗೆ ಹೋಲಿಸಿದರೆ ಇದು ದುಪ್ಪಟ್ಟಿಗಿಂತಲೂ ಅಧಿಕ.

ಒಟ್ಟಾರೆಯಾಗಿ ದೇಶದಲ್ಲಿ ಇದುವರೆಗೆ 110 ಜೆಎನ್.1 ಪ್ರಕರಣಗಳು ಇದುವರೆಗೆ ದೃಢಪಟ್ಟಿದೆ ಎಂದು ಭಾರತೀಯ ಎಸ್‍ಎಆರ್‍ಎಸ್-ಕೋವ್2 ಜೆನೋಮಿಕ್ಸ್ ಕನ್‍ಸ್ಟೋರಿಯಂ ಸ್ಪಷ್ಟಪಡಿಸಿದೆ.

ಗುಜರಾತ್‍ನಲ್ಲಿ ಅತ್ಯಧಿಕ ಅಂದರೆ 36 ಜೆಎನ್.1 ಪ್ರಕರಣಗಳು ಪತ್ತೆಯಾಗಿದ್ದು, ಕರ್ನಾಟಕ (34), ಗೋವಾ (14), ಮಹಾರಾಷ್ಟ್ರ (9), ಕೇರಳ (6), ರಾಜಸ್ಥಾನ (4), ತಮಿಳುನಾಡು (4), ತೆಲಂಗಾಣ (2) ಮತ್ತು ದೆಹಲಿ (1) ನಂತರದ ಸ್ಥಾನಗಳಲ್ಲಿವೆ. ಪ್ರಕರಣಗಳು ಹೆಚ್ಚುತ್ತಿದ್ದರೂ, ಸೌಮ್ಯ ರೋಗಲಕ್ಷಣಗಳು ಕಂಡುಬರುತ್ತಿರುವ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಕಡಿಮೆ ಎಂದು ಆರೋಗ್ಯ ಸಚಿವಾಲಯದ ಅಧಿಕಾರಿಗಳು ಹೇಳಿದ್ದಾರೆ.

LEAVE A REPLY

Please enter your comment!
Please enter your name here