Home Uncategorized ಬಾಲಕಿಯರಿಗಾಗಿ 6 'ಆಫ್ಟರ್ ಕೇರ್ ಹೋಮ್'ಗಳ ಸ್ಥಾಪಿಸಲು ಮಕ್ಕಳ ರಕ್ಷಣಾ ನಿರ್ದೇಶನಾಲಯ ಮುಂದು!

ಬಾಲಕಿಯರಿಗಾಗಿ 6 'ಆಫ್ಟರ್ ಕೇರ್ ಹೋಮ್'ಗಳ ಸ್ಥಾಪಿಸಲು ಮಕ್ಕಳ ರಕ್ಷಣಾ ನಿರ್ದೇಶನಾಲಯ ಮುಂದು!

21
0

18-21 ವರ್ಷ ವಯಸ್ಸಿನ ಬಾಲಕಿಯರಿಗಾಗಿ ಆರು ಆಫ್ಟರ್ ಕೇರ್ ಹೋಮ್‌ಗಳ ಸ್ಥಾಪನೆಗೆ ಕರ್ನಾಟಕ ಮಕ್ಕಳ ರಕ್ಷಣಾ ನಿರ್ದೇಶನಾಲಯವು ಚಿಂತನೆ ನಡೆಸಿದೆ. ಬೆಂಗಳೂರು: 18-21 ವರ್ಷ ವಯಸ್ಸಿನ ಬಾಲಕಿಯರಿಗಾಗಿ ಆರು ಆಫ್ಟರ್ ಕೇರ್ ಹೋಮ್‌ಗಳ ಸ್ಥಾಪನೆಗೆ ಕರ್ನಾಟಕ ಮಕ್ಕಳ ರಕ್ಷಣಾ ನಿರ್ದೇಶನಾಲಯವು ಚಿಂತನೆ ನಡೆಸಿದೆ.

ಸರ್ಕಾರಿ ಶಿಶುಪಾಲನಾ ಸಂಸ್ಥೆಗಳಿಂದ ಹೊರಬಂದ ನಂತರ ಮನೆ ಮತ್ತು ಆರ್ಥಿಕ ಸಹಾಯವಿಲ್ಲದೆ ಹೆಣ್ಣು ಮಕ್ಕಳು ಸಂಕಷ್ಟ ಪಡುತ್ತಿದ್ದಾರೆ. ಇಂತಹ ಮಕ್ಕಳಿಗೆ ಆಫ್ಟರ್ ಕೇರ್ ಹೋಮ್ ಗಳ ತೆರೆಯಲು ಮಕ್ಕಳ ರಕ್ಷಣಾ ನಿರ್ದೇಶನಾಲಯ ಮುಂದಾಗಿದೆ.

ಅನಾಥರಾಗಿರುವ, ಪೋಷಕರಿಂದ ಪರಿತ್ಯಕ್ತರಾದ ಅಥವಾ ಒಂಟಿ ಪೋಷಕರನ್ನು ಹೊಂದಿರುವ ಹೆಣ್ಣುಮಕ್ಕಳಿಗೆ ಸರ್ಕಾರಿ ಶಿಶುಪಾಲನಾ ಸಂಸ್ಥೆಗಳಲ್ಲಿ ಆಶ್ರಯ ನೀಡಲಾಗುತ್ತದೆ. ಅವರಿಗೆ 18 ವರ್ಷ ವಯಸ್ಸಿನವರೆಗೆ ಬೆಂಬಲವನ್ನು ನೀಡಲಾಗುತ್ತದೆ. ನಂತರ ಅವರ ಪೋಷಕರಿಗೆ ಬಳಿ ವಾಪಸ್ ಕಳುಹಿಸಲಾಗುತ್ತದೆ.

ಅಂತಹ ಮಕ್ಕಳನ್ನು ಬೆಂಬಲಿಸಲು, ವಿಶೇಷವಾಗಿ ಹೆಣ್ಣು ಮಕ್ಕಳಿಗಾಗಿ ಆಫ್ಟರ್ ಕೇರ್ ಹೋಮ್‌ಗಳನ್ನು ಸ್ಥಾಪಿಸಲು ಆರು ಎನ್‌ಜಿಒಗಳನ್ನು ಬೆಂಬಲಿಸುವ ಉಪಕ್ರಮವನ್ನು ಸರ್ಕಾರ ಯೋಜಿಸುತ್ತಿದೆ.

ಮಕ್ಕಳ ರಕ್ಷಣಾ ಯೋಜನೆಯ ಯೋಜನಾ ನಿರ್ದೇಶಕಿ ಹಲೀಮಾ ಕೆ ಅವರು ಮಾತನಾಡಿ, ಯೋಜನೆಗೆ ಅನುದಾನವನ್ನು 2022 ರ ಬಜೆಟ್‌ನಲ್ಲಿ ಅನುಮೋದಿಸಲಾಗಿದೆ ಎಂದು ಹೇಳಿದ್ದಾರೆ.

ಬೆಂಗಳೂರಿನಲ್ಲಿ ಎರಡು ಮತ್ತು ಕಲಬುರಗಿ, ಬೆಳಗಾವಿ, ಮೈಸೂರು ಮತ್ತು ತುಮಕೂರಿನಲ್ಲಿ ತಲಾ ಒಂದರಂತೆ ಆರು ಆರೈಕೆ ಕೇಂದ್ರಗಳ ತೆರೆಯಲು ಇಲಾಖೆ ಚಿಂತನೆ ನಡೆಸಿದೆ ಎಂದು ತಿಳಿಸಿದ್ದಾರೆ.

ಪ್ರತೀ ಕೇಂದ್ರಕ್ಕೆ 50 ಲಕ್ಷ ರೂಪಾಯಿ ಅನುದಾನಕ್ಕೆ ಸರ್ಕಾರ ಅನುಮೋದನೆ ನೀಡಿದೆ. ನಿಯೋಜಿತ ಎನ್‌ಜಿಒಗೆ ವಾರ್ಷಿಕ ಆಧಾರದ ಮೇಲೆ ಹಣವನ್ನು ನೀಡಲಾಗುತ್ತದೆ. ನೌಕರರ ವೇತನ ಮತ್ತು ಮಕ್ಕಳಿಗೆ ನೀಡುವ ಶಿಕ್ಷಣ ಮತ್ತು ತರಬೇತಿಯ ವೆಚ್ಚ ಸೇರಿದಂತೆ ಸಂಪೂರ್ಣ ಯೋಜನೆಯು ಸರ್ಕಾರದ ಅನುದಾನದಲ್ಲಿರಲಿದೆ ಎಂದು ಮಾಹಿತಿ ನೀಡಿದ್ದಾರೆ.

ಪ್ರತಿ ಕೇಂದ್ರದಲ್ಲಿ 25 ಬಾಲಕಿಯರಿಗೆ ಅವಕಾಶ ಕಲ್ಪಿಸಲಾಗುವುದು ಎಂದು ಮಕ್ಕಳ ರಕ್ಷಣಾ ನಿರ್ದೇಶನಾಲಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಡಿಸೆಂಬರ್ 22, 2022 ರಂತೆ, ರಾಜ್ಯದಲ್ಲಿ ಗಂಡು ಮತ್ತು ಹೆಣ್ಣು ಮಕ್ಕಳಿಗಾಗಿ ಸುಮಾರು 80 ಸರ್ಕಾರಿ ಶಿಶುಪಾಲನಾ ಸಂಸ್ಥೆಗಳಿವೆ. ಒಟ್ಟಾರೆಯಾಗಿ, ಈ ಸಂಸ್ಥೆಗಳಲ್ಲಿ 1,040 ಹುಡುಗರು ಮತ್ತು 1,196 ಹುಡುಗಿಯರಿಗೆ ವಸತಿ ಒದಗಿಸಲಾಗಿದೆ.

LEAVE A REPLY

Please enter your comment!
Please enter your name here