Home Uncategorized ಬೆಳ್ತಂಗಡಿ: ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದ ಗಂಗಾಧರ ಗೌಡ ನಿವಾಸದ ಮೇಲೆ ಐಟಿ ದಾಳಿ

ಬೆಳ್ತಂಗಡಿ: ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದ ಗಂಗಾಧರ ಗೌಡ ನಿವಾಸದ ಮೇಲೆ ಐಟಿ ದಾಳಿ

15
0

ಕಾಂಗ್ರೆಸ್ ಮುಖಂಡ ಗಂಗಾಧರ ಗೌಡ ಅವರ ಎರಡು ವಸತಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿರುವ ಶಿಕ್ಷಣ ಸಂಸ್ಥೆಯ ಮೇಲೆ ಆದಾಯ ತೆರಿಗೆ ಇಲಾಖೆ ಸೋಮವಾರ ದಾಳಿ ನಡೆಸಿದೆ. ಮಂಗಳೂರು: ಕಾಂಗ್ರೆಸ್ ಮುಖಂಡ ಗಂಗಾಧರ ಗೌಡ ಅವರ ಎರಡು ವಸತಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿರುವ ಶಿಕ್ಷಣ ಸಂಸ್ಥೆಯ ಮೇಲೆ ಆದಾಯ ತೆರಿಗೆ ಇಲಾಖೆ ಸೋಮವಾರ ದಾಳಿ ನಡೆಸಿದೆ.

ಈ ಶಿಕ್ಷಣ ಸಂಸ್ಥೆಯು ಗಂಗಾಧರಗೌಡ ಅವರ ಪುತ್ರ ರಂಜನ್ ಗೌಡ ಅವರಿಗೆ ಸೇರಿದ್ದಾಗಿದೆ.

ಗಂಗಾಧರಗೌಡರು 2018 ರಲ್ಲಿ ಬಿಜೆಪಿ ತೊರೆದು ಕಾಂಗ್ರೆಸ್‌ಗೆ ಸೇರಿದ್ದರು. ಕರ್ನಾಟಕ ವಿಧಾನಸಭಾ ಚುನಾವಣೆಗೆ ಟಿಕೆಟ್ ನಿರಾಕರಿಸಿದ ನಂತರ ಅವರು ಇತ್ತೀಚೆಗೆ ಸಕ್ರಿಯ ರಾಜರಾರಣದಿಂದ ಹಿಂದೆ ಸರಿಯುವುದಾಗಿ ಘೋಷಿಸಿದ್ದರು.

Ahead of the Karnataka elections, the I-T department conducts raids at two residential premises of former Congress leader Gangadhar Gowda and an educational institution in Belthangady of Dakshina Kannada pic.twitter.com/osCFDr7Ut8
— ANI (@ANI) April 24, 2023

ಈ ಸಂಬಂಧ ಇನ್ನಷ್ಟೇ ಹೆಚ್ಚಿನ ವಿವರಗಳು ತಿಳಿಯಬೇಕಿದೆ.

ಈಮಧ್ಯೆ, ಆದಾಯ ತೆರಿಗೆ (ಐಟಿ) ಇಲಾಖೆಯು ತಮಿಳುನಾಡಿನ ಅನೇಕ ಸ್ಥಳಗಳಲ್ಲಿ ಶೋಧ ನಡೆಸುತ್ತಿದೆ. ಖಾಸಗಿ ಸಂಸ್ಥೆಗೆ ಸಂಬಂಧಿಸಿದಂತೆ ಐಟಿ ಅಧಿಕಾರಿಗಳು ತಮಿಳುನಾಡಿನ 50 ಕ್ಕೂ ಹೆಚ್ಚು ಸ್ಥಳಗಳಲ್ಲಿ ಶೋಧ ನಡೆಸುತ್ತಿದ್ದಾರೆ ಎಂದು ಅಧಿಕೃತ ಮೂಲಗಳು ಇಂದು ತಿಳಿಸಿವೆ.

ಮೂಲಗಳ ಪ್ರಕಾರ, ಖಾಸಗಿ ಸಂಸ್ಥೆಯು ಡಿಎಂಕೆಯೊಂದಿಗೆ ಬಹಳ ನಿಕಟ ಸಂಪರ್ಕ ಹೊಂದಿದೆ ಎಂದು ಹೇಳಲಾಗಿದೆ.

ಅಣ್ಣಾನಗರದ ಡಿಎಂಕೆ ಶಾಸಕ ಎಂಕೆ ಮೋಹನ್ ಅವರ ಪುತ್ರ, ಸಂಸ್ಥೆಯ ಷೇರುದಾರ ಕಾರ್ತಿಕ್ ಅವರ ಮನೆ ಮೇಲೆ ಆದಾಯ ತೆರಿಗೆ ದಾಳಿ ನಡೆದಿದೆ.

LEAVE A REPLY

Please enter your comment!
Please enter your name here