Home Uncategorized ಮಾರಾಟವಾಗಿದ್ದ ನಿವೇಶನ ಮರು ಹರಾಜು ಹಾಕಿದ 'ಮುಡಾ'ಗೆ ರೂ.11.88 ಲಕ್ಷ ದಂಡ!

ಮಾರಾಟವಾಗಿದ್ದ ನಿವೇಶನ ಮರು ಹರಾಜು ಹಾಕಿದ 'ಮುಡಾ'ಗೆ ರೂ.11.88 ಲಕ್ಷ ದಂಡ!

21
0
Advertisement
bengaluru

ಅದಾಗಲೇ ಮಾರಾಟವಾಗಿದ್ದ ಭೂಮಿಯನ್ನು ವ್ಯಕ್ತಿಯೊಬ್ಬರಿಗೆ ಮರು ಮಾರಾಟ ಮಾಡಿದ್ದ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಬೆಂಗಳೂರು ನಗರ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ರೂ.11.88 ಲಕ್ಷ ದಂಡವನ್ನು ವಿಧಿಸಿದೆ. ಬೆಂಗಳೂರು: ಅದಾಗಲೇ ಮಾರಾಟವಾಗಿದ್ದ ಭೂಮಿಯನ್ನು ವ್ಯಕ್ತಿಯೊಬ್ಬರಿಗೆ ಮರು ಮಾರಾಟ ಮಾಡಿದ್ದ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಬೆಂಗಳೂರು ನಗರ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ರೂ.11.88 ಲಕ್ಷ ದಂಡವನ್ನು ವಿಧಿಸಿದೆ.

2007ರಲ್ಲಿ ಮಾರಾಟವಾಗಿದ್ದ ಭೂಮಿಯನ್ನು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ 2016ರಲ್ಲಿ ಮರು ಹರಾಜು ಹಾಕಿದ್ದು, ಭೂಮಿಯನ್ನು ಬೆಂಗಳೂರಿನ ಸರ್ ಎಂವಿ ಲೇಔಟ್ ನಿವಾಸಿ ಡಿಆರ್ ಮುಕುಂದ ಎಂಬ ವ್ಯಕ್ತಿ ಖರೀದಿ ಮಾಡಿದ್ದಾರೆ.

ಮಾರಾಟದ ಪರಿಗಣನೆಯ ಮೊತ್ತವನ್ನು ದೂರುದಾರ ವ್ಯಕ್ತಿ ಪೂರ್ಣವಾಗಿ ಪಾವತಿ ಮಾಡಿದ್ದಾರೆ. ಪ್ರಾಧಿಕಾರವು 2007ರ ಮೇ ತಿಂಗಳಿನಲ್ಲಿ ಭೂಮಿಯನ್ನು ವ್ಯಕ್ತಿಯ ಹೆಸರಿಗೆ ನೊಂದಾಯಿಸಿ ಅದೇ ವರ್ಷದ ಜೂನ್ ತಿಂಗಳಿನಲ್ಲಿ ಖಾತಾವನ್ನು ಮಾಡಿದೆ. ಅಂದಿನಿಂದ ದೂರದಾರ ವ್ಯಕ್ತಿ 2007-08 ರಿಂದ 2019-20ರವರೆಗೂ ವಾರ್ಷಿಕ ತೆರಿಗೆಯನ್ನೂ ಪಾವತಿಸಿದ್ದಾರೆ.

ಒಂದೊಮ್ಮೆ ಸ್ಥಳಕ್ಕೆ ದೂರದಾರ ವ್ಯಕ್ತಿ ಭೇಟಿ ನೀಡಿದ್ದು, ಈ ವೇಳೆ ಬಿ.ಪಿ.ಚಿಟ್ಟಿಯಪ್ಪ ಎಂಬುವರು ತಮ್ಮ ನಿವೇಶನದಲ್ಲಿ ಮನೆ ಕಟ್ಟಿಸಿರುವುದನ್ನು ಕಂಡು ಬೆಚ್ಚಿಬಿದ್ದಿದ್ದಾರೆ. ಚಿಟ್ಟಿಯಪ್ಪ ಅವರು ನವೆಂಬರ್ 2016 ರಲ್ಲಿ ಮುಡಾ ಮರು ಹರಾಜಿನಲ್ಲಿ ನಿವೇಶನವನ್ನು ಸ್ವಾಧೀನಪಡಿಸಿಕೊಂಡಿರುವುದು ತಿಳಿದುಬಂದಿದೆ.

bengaluru bengaluru

ಈ ಹಿನ್ನೆಲೆಯಲ್ಲಿ ವ್ಯಕ್ತಿ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಮೊರೆ ಹೋಗಿದ್ದು, ಪ್ರಾಧಿಕಾರದ ವಿರುದ್ಧ ದೂರು ದಾಖಲಿಸಿದ್ದಾರೆ.

ದೂರು ಸಂಬಂಧ ವಿಚಾರಣೆ ನಡೆಸಿದ ಆಯೋಗವು ಇದೀಗ, ಪ್ರಾಧಿಕಾರಕ್ಕೆ ಶೇ.10 ಬಡ್ಡಿಯೊಂದಿಗೆ ರೂ.11.88 ಲಕ್ಷ ಪಾವತಿ ಮಾಡುವಂತೆ ಸೂಚನೆ ನೀಡಿದೆ.

ಮುಡಾ ಸೇವೆಯಲ್ಲಿ ಕೊರತೆಗಳು ಬಂದುದ್ದು, ಎರಡನೇ ಹರಾಜು ನಡೆಸುವ ಮೂಲಕ ವಂಚನೆ ಮಾಡಿದೆ. ವ್ಯಕ್ತಿ ಇದೀಗ ಭೂಮಿಯನ್ನು ಕಳೆದುಕೊಂಡಿದ್ದು, ಮಾನಸಿಕ ಹಿಂಸೆ ಹಾಗೂ ಆರ್ಥಿಕ ನಷ್ಟವನ್ನು ಅನುಭವಿಸಿದ್ದಾರೆಂದು ಆಯೋಗದ ಅಧ್ಯಕ್ಷೆ ಎಂ.ಶೋಭಾ ಮತ್ತು ಇತರ ಸದಸ್ಯರನ್ನೊಳಗೊಂಡ ಆಯೋಗವು ಹೇಳಿದೆ.

ಬೋಗಾದಿಯಲ್ಲಿರುವ ಸೈಟ್ ನಂ.45 ಭೂಮಿ ಖರೀದಿ ರದ್ದು, ಸೈಟ್ ನಂ.65 ಹೊಸ ಖರೀದಿ ಅದರ ಖಾತಾ ಶುಲ್ಕ, ವಾರ್ಷಿಕ ಆಸ್ತಿ ತೆರಿಗೆ, ಪ್ರಯಾಣ ಮತ್ತು ಇತರೆ ವೆಚ್ಚಗಳು ರೂ.9.72 ಲಕ್ಷ, ದೂರುದಾರರು ಅನುಭವಿಸಿದ ಸಮಸ್ಯೆಗಳಿಗೆ 2 ಲಕ್ಷ ರೂಪಾಯಿ ಪರಿಹಾರಕ್ಕೆ ದೂರುದಾರರು ಅರ್ಹರಾಗಿದ್ದಾರೆಂದು ಆಯೋಗ ಹೇಳಿದೆ.


bengaluru

LEAVE A REPLY

Please enter your comment!
Please enter your name here