Home Uncategorized ಮೈಸೂರು: ಬರಿಗಣ್ಣಿನಲ್ಲಿ ಸೂರ್ಯ ದರ್ಶನ; ಬದರಿ ನಾರಾಯಣ್‌ ಹೊಸ ದಾಖಲೆ

ಮೈಸೂರು: ಬರಿಗಣ್ಣಿನಲ್ಲಿ ಸೂರ್ಯ ದರ್ಶನ; ಬದರಿ ನಾರಾಯಣ್‌ ಹೊಸ ದಾಖಲೆ

18
0

ನಗರದ ಮೈಸೂರಿನ ಕೋಟೆ ಆಂಜನೇಯ ದೇವಸ್ಥಾನದ ಮುಂಭಾಗದಲ್ಲಿ ಬದರಿ ನಾರಾಯಣ್‌ ಅವರು ಮಂಗಳವಾರ ಪ್ರಾಣಾಯಾಮ ಮಾಡುತ್ತಾ ಬರಿಗಣ್ಣಿನಲ್ಲಿ ಸೂರ್ಯನನ್ನು ವೀಕ್ಷಿಸಿದರು. ಮೈಸೂರು: ನಗರದ ಮೈಸೂರಿನ ಕೋಟೆ ಆಂಜನೇಯ ದೇವಸ್ಥಾನದ ಮುಂಭಾಗದಲ್ಲಿ ಬದರಿ ನಾರಾಯಣ್‌ ಅವರು ಮಂಗಳವಾರ ಪ್ರಾಣಾಯಾಮ ಮಾಡುತ್ತಾ ಬರಿಗಣ್ಣಿನಲ್ಲಿ ಸೂರ್ಯನನ್ನು ವೀಕ್ಷಿಸಿದರು.

ಮಂಗಳವಾರ ಪ್ರಾಣಾಯಾಮ ಮಾಡುತ್ತಾ ಉರಿಬಿಸಿಲಿನಲ್ಲೇ ಬರಿಗಣ್ಣಿನಲ್ಲಿ ಸೂರ್ಯನನ್ನು 42 ನಿಮಿಷಗಳ ಕಾಲ ನೋಡಿ ದಾಖಲೆ ಮಾಡಿದರು. ‘ಈ ಪ್ರಕ್ರಿಯೆಗೆ ಸೂರ್ಯ ಕಿರಣ ಕ್ರಿಯೆ ಎಂದು ಹೇಳುತ್ತೇವೆ. ಸೂರ್ಯನನ್ನು ನೇರವಾಗಿ ನೋಡುವುದು ಅಪಾಯಕಾರಿ. ಆದರೆ, ನಿರಂತರ ಪ್ರಾಣಾಯಾಮದ ಜೊತೆಗಿನ ಅಭ್ಯಾಸದ ಮೂಲಕ ನಾನು ಈ ಸಾಧನೆ ಮಾಡಿದ್ದೇನೆ. ಹೀಗಾಗಿ ಇದನ್ನು ಯಾರೂ ಪ್ರಯತ್ನಿಸಬಾರದು’ ಎಂದು ಅವರು ವಿನಂತಿಸಿದರು.

ಯೋಗ ಗುರು ಕೆ.ರಾಘವೇಂದ್ರ ಪೈ ಮಾತನಾಡಿ, ‘ಈ ಯೋಗಕ್ಕೆ ತ್ರಾಟಕ ಕ್ರಿಯೆ ಎನ್ನುತ್ತಾರೆ. ಇದನ್ನು ಹಠ ಯೋಗಿಗಳು ಮಾತ್ರ ಸಾಧಿಸಲು ಸಾಧ್ಯ’ ಎಂದರು. ಬದರಿ ನಾರಾಯಣ್ ಮಲೇಷ್ಯಾ ಮತ್ತು ಒಮಾನ್ ಕಂಪನಿಗಳಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿದ್ದು, 15 ವರ್ಷಗಳ ಹಿಂದೆ ಮೈಸೂರಿಗೆ ಮರಳಿದ್ದರು. ಅವರು ಪ್ಲಾಸ್ಟಿಕ್ ಪಿಇಟಿ ಬಾಟಲಿಗಳ ಜಾಗೃತಿ ಅಭಿಯಾನದಲ್ಲಿ ತೊಡಗಿಸಿಕೊಂಡಿದ್ದಾರೆ ಮತ್ತು ಪಾರ್ಥೇನಿಯಂ ಸಸ್ಯಗಳನ್ನು ನಿರ್ಮೂಲನೆ ಮಾಡುವ ಕೆಲಸ ಮಾಡುತ್ತಿದ್ದಾರೆ.

LEAVE A REPLY

Please enter your comment!
Please enter your name here