Home Uncategorized ಸಿಎಂ ಸಿದ್ದರಾಮಯ್ಯನವರ ಮೈಸೂರಿನ ಖಾಸಗಿ ನಿವಾಸ ಮೇಲೆ ಕಲ್ಲೆಸೆತ: ಆರೋಪಿ ಬಂಧನ, ತೀವ್ರ ವಿಚಾರಣೆ

ಸಿಎಂ ಸಿದ್ದರಾಮಯ್ಯನವರ ಮೈಸೂರಿನ ಖಾಸಗಿ ನಿವಾಸ ಮೇಲೆ ಕಲ್ಲೆಸೆತ: ಆರೋಪಿ ಬಂಧನ, ತೀವ್ರ ವಿಚಾರಣೆ

29
0

ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮೈಸೂರಿನ ಟಿಕೆ ಲೇಔಟ್‌ನಲ್ಲಿರುವ ಖಾಸಗಿ ನಿವಾಸದ ಮೇಲೆ ಕಲ್ಲು ಎಸೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಸರಸ್ವತಿಪುರಂ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿ ಸತ್ಯಮೂರ್ತಿ ಎಂಬಾತನಾಗಿದ್ದು, ಈತ ಮುಖ್ಯಮಂತ್ರಿಗಳ ನಿವಾಸದ ಮೇಲೆ ಕಲ್ಲು ಎಸೆದು ಪರಾರಿಯಾಗಿದ್ದನು. ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮೈಸೂರಿನ ಟಿಕೆ ಲೇಔಟ್‌ನಲ್ಲಿರುವ ಖಾಸಗಿ ನಿವಾಸದ ಮೇಲೆ ಕಲ್ಲು ಎಸೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಸರಸ್ವತಿಪುರಂ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿ ಸತ್ಯಮೂರ್ತಿ ಎಂಬಾತನಾಗಿದ್ದು, ಈತ ಮುಖ್ಯಮಂತ್ರಿಗಳ ನಿವಾಸದ ಮೇಲೆ ಕಲ್ಲು ಎಸೆದು ಪರಾರಿಯಾಗಿದ್ದನು.

ನಿನ್ನೆ ಮಂಗಳವಾರ ಬೆಳಗ್ಗೆ 8 ಗಂಟೆಯಲ್ಲಿ ಘಟನೆ ನಡೆದಿದ್ದು, ಕೂಡಲೇ ಪೊಲೀಸರು ಕಲ್ಲೆಸದ ವ್ಯಕ್ತಿಯನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ಮೈಸೂರಿನ ಸತ್ಯಮೂರ್ತಿ ಎಂಬಾತ ಕಲ್ಲು ಎಸೆತ ವ್ಯಕ್ತಿ ಎಂದು ಗುರುತಿಸಲಾಗಿದ್ದು, ಘಟನೆ ಸಂಬಂಧ ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲು ಮಾಡಲಾಗಿದೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಂಧಿತ ಸತ್ಯಮೂರ್ತಿ ಇವಿಎಂ ಯಂತ್ರ ಒಡೆದು ಹಾಕಿದ್ದನಂತೆ. ಅಲ್ಲದೇ, ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂಂದ್ರ ಅವರ ಫೋಟೋಗೆ ರೌಡಿ ರಾಜೇಂದ್ರ ಎಂದು ಪೋಸ್ಟ್ ಮಾಡಿದನಂತೆ. ಈತ ಮಾನಸಿತ ಅಸ್ವಸ್ಥತ ಎಂದು ಈ ಹಿಂದೆ ಹೇಳಲಾಗಿತ್ತು. ಸದ್ಯ ಘಟನೆ ಸಂಬಂಧ ಪೊಲೀಸರು ತೀವ್ರ ವಿಚಾರಣೆ ನಡೆಸಿದ್ದಾರೆ.

ಸದ್ಯ ಪೊಲೀಸರು ಆರೋಪಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಆರೋಗ್ಯ ತಪಾಸಣೆ ಮಾಡಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಈತ ಯಾಕೆ ಕಲ್ಲು ಎಸೆದ, ಇಂತಹ ಕೃತ್ಯಗಳಲ್ಲಿ ಪದೇ ಪದೇ ಭಾಗಿ ಆಗುತ್ತಿರುವುದು ಏಕೆ? ವಿಚಾರಣೆಯಲ್ಲಿ ಈತನ ಹಿನ್ನೆಲೆ ಏನು, ಯಾಕಾಗೀ ಈತ ಈ ಕೃತ್ಯ ಎಸಗಿದ್ದಾನೆ ಎಂಬುವುದು ತಿಳಿದುಬರಬೇಕಿದೆ.

LEAVE A REPLY

Please enter your comment!
Please enter your name here