Home ಬೆಂಗಳೂರು ನಗರ ರಾಜ್ಯ ಹೈಕೋರ್ಟ್ ಗೆ 10 ಹೆಚ್ಚುವರಿ ನ್ಯಾಯಮೂರ್ತಿಗಳ ನೇಮಕ

ರಾಜ್ಯ ಹೈಕೋರ್ಟ್ ಗೆ 10 ಹೆಚ್ಚುವರಿ ನ್ಯಾಯಮೂರ್ತಿಗಳ ನೇಮಕ

98
0
10 additional judges sworn in as judges of Karnataka High Court

ಬೆಂಗಳೂರು:

ರಾಜ್ಯ ಹೈಕೋರ್ಟ್ ಗೆ 10 ನೂತನ ಹೆಚ್ಚುವರಿ ನ್ಯಾಯಮೂರ್ತಿಗಳು ಇಂದು ಪ್ರಮಾಣ ವಚನ ಸ್ವೀಕರಿಸಿದರು.

ನ್ಯಾಯಮೂರ್ತಿಗಳಾದ ಶಿವಶಂಕರ್ ಅಮರಣ್ಣವರ್, ಮಕ್ಕಿಮನೆ ಗಣೇಶಯ್ಯ ಉಮಾ, ವೇದವ್ಯಾಸಚಾರ್ ಶ್ರೀಶಾನಂದ, ಹಂಚಟೆ ಸಂಜೀವಕುಮಾರ್, ಪದ್ಮರಾಜ್ ನೇಮಚಂದ್ರ ದೇಸಾಯಿ, ಪಂಜಿಗಡ್ಡೆ ಕೃಷ್ಣ ಭಟ್, ಮರಳೂರು ಇಂದ್ರಕುಮಾರ್ ಅರುಣ್, ಇಂಗಳಗುಪ್ಪೆ ಸೀತಾರಾಮಯ್ಯ ಇಂದಿರೇಶ್, ರವಿ ವೆಂಕಪ್ಪ ಹೊಸಮನಿ ಮತ್ತು ಸವಣೂರು ವಿಶ್ವಜೀತ್ ಶೆಟ್ಟಿ ನೂತನ ನ್ಯಾಯಮೂರ್ತಿಗಳಾಗಿ ರಾಜಭವನದ ಗಾಜಿನ ಮನೆಯಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.

ರಾಜ್ಯಪಾಲ ತಾವರಚಂದ್ ಗೆಹ್ಲೋಟ್ , ನೂತನ ನ್ಯಾಯಮೂರ್ತಿಗಳಿಗೆ ಪ್ರಮಾಣ ವಚನ ಭೋದಿಸಿದರು. ಸಮಾರಂಭದಲ್ಲಿ ಮುಖ್ಯಮಂತ್ರಿ ಬಸವರಾಜ . ಬೊಮ್ಮಾಯಿ ಹಾಗೂ ಹೈಕೋರ್ಟ್ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ಹಾಗೂ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್ ಮೊದಲಾದವರು ಹಾಜರಿದ್ದರು.

Also Read: 10 additional judges sworn in as permanent judges of Karnataka HC

LEAVE A REPLY

Please enter your comment!
Please enter your name here