Home Uncategorized 16,000 ಸಿಬ್ಬಂದಿಗಳ ಉದ್ಯೋಗ ಖಾಯಂಗೊಳಿಸುವಂತೆ ಆಗ್ರಹ: ಪ್ರತಿಭಟನೆಗಿಳಿದ ಪೌರಕಾರ್ಮಿಕರು

16,000 ಸಿಬ್ಬಂದಿಗಳ ಉದ್ಯೋಗ ಖಾಯಂಗೊಳಿಸುವಂತೆ ಆಗ್ರಹ: ಪ್ರತಿಭಟನೆಗಿಳಿದ ಪೌರಕಾರ್ಮಿಕರು

9
0
bengaluru

16,000 ಸಿಬ್ಬಂದಿಗಳ ನೌಕರಿ ಖಾಯಂಗೊಳಿಸುವಂತೆ ಆಗ್ರಹಿಸಿ ನೂರಾರು ಪೌರಕಾರ್ಮಿಕರು ಸೋಮವಾರ ಬಿಬಿಎಂಪಿ ಕೇಂದ್ರ ಕಚೇರಿ ಎದುರು ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ. ಬೆಂಗಳೂರು: 16,000 ಸಿಬ್ಬಂದಿಗಳ ನೌಕರಿ ಖಾಯಂಗೊಳಿಸುವಂತೆ ಆಗ್ರಹಿಸಿ ನೂರಾರು ಪೌರಕಾರ್ಮಿಕರು ಸೋಮವಾರ ಬಿಬಿಎಂಪಿ ಕೇಂದ್ರ ಕಚೇರಿ ಎದುರು ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ.

ಬಿಬಿಎಂಪಿ ಪೌರಕಾರ್ಮಿಕರ ಸಂಘದ ಅಧ್ಯಕ್ಷೆ ನಿರ್ಮಲಾ ಮಾತನಾಡಿ, 16 ಸಾವಿರಕ್ಕೂ ಹೆಚ್ಚು ಪೌರಕಾರ್ಮಿಕರ ಪೈಕಿ ಕೇವಲ 3,673 ಕಾರ್ಮಿಕರನ್ನು ಕಾಯಂಗೊಳಿಸಲಾಗಿದೆ. ಕಳೆದ ಜುಲೈನಲ್ಲಿ ನಾಲ್ಕು ದಿನಗಳ ಕಾಲ ಪೌರಕಾರ್ಮಿಕರು ನಡೆಸಿದ ಮುಷ್ಕರದ ಬಳಿಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬೇಡಿಕೆ ಈಡೇರಿಸುವುದಾಗಿ ಭರವಸೆ ನೀಡಿದ್ದರು.

ಆದರೆ, ಕೇವಲ 3,673 ಕಾರ್ಮಿಕರನ್ನು ಖಾಯಂಗೊಳಿಸಲಾಗಿದೆ, ಫೆ.21 ರಂದು ಬಿಡುಗಡೆಯಾದ ನೌಕರರ ಖಾಯಂಗೊಳಿಸಿದ ಪಟ್ಟಿಯಲ್ಲಿ ಹಲವು ವರ್ಷಗಳಿಂದ ಕೆಲಸ ಮಾಡುತ್ತಿರುವವರ ಹೆಸರುಗಳಿವೆ, ಅದರಲ್ಲಿ ಇತ್ತೀಚೆಗೆ ನೌಕರಿಗೆ ಸೇರಿದವರ ಹೆಸರುಗಳೂ ಇರುವುದು ಕಂಡು ಬಂದಿದೆ. ಇದು ಅಸಮಾಧಾನಕ್ಕೆ ಕಾರಣವಾಗಿದೆ ಎಂದು ಹೇಳಿದ್ದಾರೆ.

ಮುಖ್ಯಮಂತ್ರಿ ನೀಡಿದ ಭರವಸೆಯಿಂದ ಹಿಂದೆ ಸರಿದಿರುವುದನ್ನು ವಿರೋಧಿಸಿ ಕಾರ್ಮಿಕರು ಪ್ರತಿಭಟನೆಗೆ ಸಜ್ಜಾಗಿದ್ದಾರೆ. ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಪ್ರತಿಭಟನೆ ನಡೆಸಲಿದ್ದಾರೆಂದು ತಿಳಿಸಿದ್ದಾರೆ.

bengaluru
bengaluru

LEAVE A REPLY

Please enter your comment!
Please enter your name here