Home ಬೆಂಗಳೂರು ನಗರ ಇಬ್ಬರು ಬೆಂಗಳೂರಿನವರಿಂದ ಮಕ್ಕಳ ಕೋವಿಡ್ ಆರೈಕೆಗಾಗಿ 5 ಲಕ್ಷ ರೂ.ಗಳ ಸಲಕರಣೆಗಳ ದಾನ

ಇಬ್ಬರು ಬೆಂಗಳೂರಿನವರಿಂದ ಮಕ್ಕಳ ಕೋವಿಡ್ ಆರೈಕೆಗಾಗಿ 5 ಲಕ್ಷ ರೂ.ಗಳ ಸಲಕರಣೆಗಳ ದಾನ

78
0
2 Bengalureans donate Rs 5 lakh equipment for children’s Covid care

ಬೆಂಗಳೂರು:

ಡಾ.ಬಾಬು ಜಗಜೀವನ್ ರಾಮ್ ಜನರಲ್ ಆಸ್ಪತ್ರೆಯ ಮಕ್ಕಳ ವಿಭಾಗದಲ್ಲಿ ಬಳಸಲು ಇಬ್ಬರು ಬೆಂಗಳೂರಿನವರು, ಶಿಲ್ಪಾ ಸಿಂಗ್ ಮತ್ತು ಪರಿಸಾ ಸಿಂಗ್, 5 ಲಕ್ಷ ಮೌಲ್ಯದ ವೈದ್ಯಕೀಯ ಉಪಕರಣಗಳನ್ನು ನೀಡಿದ್ದಾರೆ. ವಿಶೇಷ ಆಯುಕ್ತ (ಆರೋಗ್ಯ) ಡಿ ರಂದೀಪ್ ಮಂಗಳವಾರ ಉಪಕರಣವನ್ನು ಸ್ವೀಕರಿಸಿದರು.

ವೈದ್ಯಕೀಯ ಉಪಕರಣಗಳ ಹಸ್ತಾಂತರದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ರಂದೀಪ್ ಅವರು, ಕೋವಿಡ್ ಸಮಯದಲ್ಲಿ ಡಾ. ಜಗಜೀವನ್ ರಾಮ್ ಆಸ್ಪತ್ರೆಯಲ್ಲಿ ಪೀವರ್ ಕ್ಲೀನಿಕ್, ಟ್ರಯಾಜ್ ಸೆಂಟರ್ ಅನ್ನು ಪ್ರಾರಂಭಿಸಲಾಗಿತ್ತು. ಇದೀಗ 30 ಹಾಸಿಗೆ ಸಾಮರ್ಥ್ಯದ ಮಕ್ಕಳ ಆರೈಕೆ ಕೇಂದ್ರವನ್ನು ಸ್ಥಾಪಿಸಿಸಲಾಗಿದೆ. ಅದರಲ್ಲಿ 2 ಐಸಿಯು ಹಾಸಿಗೆ, 8 ಹೆಚ್.ಡಿ.ಯು ಹಾಸಿಗೆ, 20 ಆಮ್ಲಜನಕಯುಕ್ತ ಹಾಸಿಗೆಗಳ ವ್ಯವಸ್ಥೆಯಿದ್ದು, ಸೌಮ್ಯ ಮತ್ತು ಮಧ್ಯಮ ಕೋವಿಡ್ ಸೋಂಕು ಲಕ್ಷಣಗಳಿರುವ ಮಕ್ಕಳಿಗೆ ಚಿಕಿತ್ಸೆ ನೀಡಲಾಗುವುದು.

2 Bengalureans donate Rs 5 lakh equipment for children’s Covid care

ಮಕ್ಕಳಿಗೆ ಚಿಕಿತ್ಸೆ ನೀಡುವ ಸಲುವಾಗಿ ಇಂದಿರಾ ಗಾಂಧಿ ಆಸ್ಪತ್ರೆಯ ಮಕ್ಕಳ ತಜ್ಞರಿಂದ ಪಾಲಿಕೆಯ ಮಕ್ಕಳ ವೈದ್ಯರು, ನರ್ಸಿಂಗ್ ಸಿಬ್ಬಂದಿಗೆ ಈಗಾಗಲೇ ತರಬೇತಿ ನೀಡಲಾಗಿದೆ. ಜಗಜೀವಮ ರಾಮ್ ಆಸ್ಪತ್ರೆಯಲ್ಲಿ ಆದ್ಯತೆ ಮೇರೆಗೆ ಮಕ್ಕಳಿಗೆ ಚಿಕಿತ್ಸೆ ನೀಡಲಾಗುವುದು. ಗಂಭೀರ ಪರಿಣಾಮ ಬೀರಿದರೂ ಚಿಕಿತ್ಸೆ ನೀಡುವ ವ್ಯವಸ್ಥೆಯಿದ್ದು, ತುಂಬಾ ಗಂಭೀರವಾದಲ್ಲಿ ಉತ್ತಮ ಚಿಕಿತ್ಸೆ ವ್ಯವಸ್ಥೆಯಿರುವ ಆಸ್ಪತ್ರೆಗೆ ಕಳುಹಿಸಲಾಗುವುದು ಎಂದರು.

ಬಿಬಿಎಂಪಿ ವ್ಯಾಪ್ತಿಯಲ್ಲಿ ಕೋವಿಡ್ ಸೊಂಕು ಪ್ರಮಾಣ ಮಕ್ಕಳಲ್ಲಿ ಯಾವುದೇ ಏರಿಕೆಯಿಲ್ಲ. ಬಹುತೇಕ ಮಕ್ಕಳಲ್ಲಿ ಸೌಮ್ಯ ಮತ್ತು ಮಧ್ಯಮ ಲಕ್ಷಣಗಳು ಮಾತ್ರ ಕಂಡುಬರುತ್ತಿದ್ದು, ಮನೆಯಲ್ಲೇ ಗುಣಮುಖರಾಗುತ್ತಿದ್ದಾರೆ. ಆಸ್ಪತ್ರೆಯಲ್ಲಿ ದಾಖಲಾದವರ ಸಂಖ್ಯೆ ತೀರಾ ಕಡಿಮೆಯಿದೆ. ಈ ಸಂಬಂಧ ಈಗಾಗಲೇ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳಿಗೆ ಮಾರ್ಗಸೂಚಿ ಹೊರಡಿಸಲಾಗಿದ್ದು, ಮಕ್ಕಳ ಮೇಲೆ ನಿಗಾವಹಿಸಲು ಸೂಚನೆ ನೀಡಲಾಗಿದೆ.

ಶಿಲ್ಪ ಸಿಂಗ್ ಮತ್ತು ಪಾರಿಸಾ ಸಿಂಗ್ ರವರು ಕೋವಿಡ್ ಚಿಕಿತ್ಸೆಗೆ ಅನುಕೂಲವಾಗುವ ದೃಷ್ಟಿಯಿಂದ ಡಾ. ಬಾಬು ಜಗಜೀವನ್ ರಾಮ್ ಆಸ್ಪತ್ರೆಗೆ 5 ಲಕ್ಷ ರೂ. ಮೌಲ್ಯದ ವೈದ್ಯಕೀಯ ಉಪಕರಣಗಳನ್ನು ನೀಡಿದ್ದು, ಅವರಿಗೆ ಧನ್ಯವಾದಗಳು ಎಂದರು.

ಡಾ. ಜಗಜೀವನ್ ರಾಮ ಸಾರ್ವಜನಿಕ ಆಸ್ಪತ್ರೆಯಲ್ಲಿ ಹೊರರೋಗಿ ಮತ್ತು ಒಳರೋಗಿ ಸೌಲಭ್ಯಳಿದ್ದು, ಜನರಲ್ ಮೆಡಿಸಿನ್, ಜನರಲ್ ಸರ್ಜರಿ, ಇ.ಎನ್.ಟಿ, ನೇತ್ರ ಚಿಕಿತ್ಸೆ, ಮೂಳೆಚಿಕಿತ್ಸೆ, ದಂತ ಆರೈಕೆ, ಮಕ್ಕಳ ಮತ್ತು ಗರ್ಭಕಂಠದ ಕ್ಯಾನ್ಸರ್‌ಗಾಗಿ ಸ್ಕ್ರೀನಿಂಗ್ ಸೌಲಭ್ಯವಿದೆ. ಹಾಗೂ ಎಕ್ಸ್-ರೇ ಘಟಕ ಮತ್ತು ರಕ್ತ ಶೇಖರಣಾ ಘಟಕವನ್ನೊಳಗೊಂಡ ಹೈಟೆಕ್ ಲ್ಯಾಬ್ ಸೌಲಭ್ಯವಿದೆ.

ವೈದ್ಯಕೀಯ ಉಪಕರಣಗಳ ವಿವರ:

  1. ಬೈಪಾಪ್ ಯಂತ್ರ – 03
  2. ವಿಡಿಯೋ ಲಾರಿಂಗೋಸ್ಕೋಪ್(ಗಂಟಲಿನ ಗೂಡಿನಲ್ಲಿರುವ ದನಿಪೆಟ್ಟಿಗೆಯ ಒಳಭಾಗವನ್ನು ಪರೀಕ್ಷಿಸಲು ಉಪಯೋಗಿಸುವ ಕನ್ನಡಿಯನ್ನೊಳಗೊಂಡಿರುವ ಉಪಕರಣ) – 01
  3. ಪಿಪಿಇ ಕಿಟ್‌ಗಳು – 300
  4. ಸ್ಯಾನಿಟೈಸರ್ – 50 ಲೀಟರ್

ಈ ವೇಳೆ ಮುಖ್ಯ ಆರೋಗ್ಯಾಧಿಕಾರಿ (ಕ್ಲಿನಿಕಲ್) ಡಾ. ನಿರ್ಮಲಾ ಬುಗ್ಗಿ ಹಾಗೂ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here