ಬೆಂಗಳೂರು:
ಅಕ್ಟೊಬರ್ ನಲ್ಲಿ ನಿರಂತರವಾಗಿ ಮಳೆಯಾಗಿದ್ದು, 2-3 ಜಿಲ್ಲೆಗಳನ್ನು ಬಿಟ್ಟರೆ ಶೇ. 30 ರಿಂದ 50 ರಷ್ಟು ಹೆಚ್ಚುವರಿ ಮಳೆಯಾಗಿದೆ. ಇದುವರೆಗೂ 21 ಜನ ಸಾವನ್ನಪ್ಪಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.
ಜೂನ್ ನಿಂದ ಇಲ್ಲಿಯವರೆಗೂ 4, 71,000 ಹೆಕ್ಟೇರ್ ಬೆಲೆ ಹಾನಿಯಾಗಿದೆ. 105 ಕೋಟಿ ರೂ.ಗಳ ಪರಿಹಾರವನ್ನು 1.17 ಲಕ್ಷ ರೈತರಿಗೆ ಬಿಡುಗಡೆ ಮಾಡಲಾಗಿದೆ. ಜಿಲ್ಲಾಧಿಕಾರಿಗಳ ಪಿ.ಡಿ ಖಾತೆಯಲ್ಲಿ 738 ಕೋಟಿ ರೂ.ಗಳು ಲಭ್ಯವಿದೆ ಎಂದು ಅವರು ಅಧಿಕಾರಿಗಳೊಂದಿಗೆ ಸಭೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡುತ್ತ ತಿಳಿಸಿದರು.
Also Read: 21 died in Karnataka due to rains, since Oct 1: CM
ಅಕ್ಟೊಬರ್ 1 ರಿಂದ 12 ರೊಳಗೆ ಮರಣ ಹೊಂದಿದ 21 ಜನರಿಗೆ ಕೂಡಲೇ ಪರಿಹಾರ ನೀಡಲು ಸೂಚನೆ ನೀಡಲಾಗಿದ್ದು, ಹಾಗೂ ಮಳೆಯಿಂದ ಹಾನಿಗೊಳಗಾದವರಿಗೆ 10,000 ರೂ.ಗಳ ಎಕ್ಸ್ ಗ್ರೇಶಿಯಾ ಮೊತ್ತವನ್ನು ನೀಡಲು ಸೂಚಿಸಲಾಗಿದೆ. ಭಾಗಶ: ಹಾನಿಗೊಳಗಾದ 2,500 ಮನೆಗಳಿಗೆ ಹಾಗೂ ಬೆಳೆ ಹಾನಿಗೂ ಕಳೆದ ವರ್ಷದಂತೆ ಎನ್.ಡಿ.ಆರ್.ಎಫ್ ನಿಯಮಾವಳಿಗಳಂತೆ ಪರಿಹಾರ ನೀಡಲು ಸೂಚಿಸಲಾಗಿದೆ ಎಂದರು.
2300 ವಿದ್ಯುತ್ ಕಂಬಗಳು ಬಿದ್ದಿದ್ದು, ರಸ್ತೆ, ಸೇತುವೆ, ಶಾಲಾ ಕಟ್ಟಡಗಳ ಹಾನಿಯನ್ನು ಮೌಲ್ಯಮಾಪನ ಮಾಡಿ ಪರಿಹಾರ ನೀಡಲು ಹಣ ಬಿಡುಗಡೆ ಸೂಚಿಸಲಾಗಿದೆ ಎಂದರು.