Home ಬೆಂಗಳೂರು ನಗರ ರಾಜ್ಯದಲ್ಲಿ ವಿದ್ಯುತ್ ಕೊರತೆ ಇಲ್ಲ:ಸಿಎಂ

ರಾಜ್ಯದಲ್ಲಿ ವಿದ್ಯುತ್ ಕೊರತೆ ಇಲ್ಲ:ಸಿಎಂ

52
0
No power shortage in Karnataka: CM

ಬೆಂಗಳೂರು:

ರಾಜ್ಯದಲ್ಲಿ ವಿದ್ಯುತ್ ಕೊರತೆಯಾಗದಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಅವರು ಇಂದು ವಿದ್ಯುತ್ ಉತ್ಪಾದನೆ, ಬೇಡಿಕೆ ಮತ್ತು ಕಲ್ಲಿದ್ದಲು ಪರಿಸ್ಥಿತಿ ಕುರಿತಂತೆ ಸಭೆ ನಡೆಸಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಕೇಂದ್ರ ಗಣಿ ಮತ್ತು ಕಲ್ಲಿದ್ದಲು ಸಚಿವರನ್ನು ದೆಹಲಿಯಲ್ಲಿ ಭೇಟಿಯಾದ ನಂತರ 2 ರೇಕುಗಳು ಹೆಚ್ಚುವರಿಯಾಗಿ ಬರುತ್ತಿವೆ.10 ರೇಕುಗಳು ಪ್ರತಿನಿತ್ಯ ಪೂರೈಕೆಯಾಗುತ್ತಿದ್ದು, 98863 ಮೆಟ್ರಿಕ್ ಟನ್ ದಾಸ್ತಾನು ಇದೆ ಎಂದರು.

ಸಿಂಗರೇಣಿ ಗಣಿಗಳಿಂದ ನಮಗೆ ಎರಡು ರೇಕುಗಳು ದೊರಕಲಿದ್ದು, ತೆಲಂಗಾಣ ಮುಖ್ಯಮಂತ್ರಿಗಳೊಡನೆ ಹಾಗೂ ಕೇಂದ್ರದ ಕಲ್ಲಿದ್ದಲು ಸಚಿವರೊಂದಿಗೆ ಸಹ ಮಾತನಾಡಿ ಒಟ್ಟು 12 ರೇಕುಗಳ ಪೂರೈಕೆಗೆ ಸಂಬಂಧಿಸಿದಂತೆ ಚರ್ಚಿಸಲಾಗಿದೆ ಎಂದರು.

ಎಸ್ಕಾಂಗಳ ಆರ್ಥಿಕ ಪರಿಸ್ಥಿತಿ ಸುಧಾರಿಸಲು ಹಿಂದೆ ಸರ್ಕಾರ ಕೊಟ್ಟಿರುವ ಸಾಲವನ್ನು ಈಕ್ವಿಟಿಯಾಗಿ ಪರಿವರ್ತಿಸುವ ಪ್ರಸ್ತಾವನೆ ನಮ್ಮ ಮುಂದಿದ್ದು, ಅದರ ಬಗ್ಗೆಯೂ ಕ್ರಮ ಜರುಗಿಸಲಾಗುವುದು. ಎಸ್ಕಾಂ ಆರ್ಥಿಕವಾಗಿ ಸಬಲೀಕರಣಗೊಳ್ಳಲು ಆದಾಯ ಸಂಗ್ರಹಕ್ಕೆ ಆದ್ಯತೆ ನೀಡಿ , ಬಂಡವಾಳ ಹೂಡಿಕೆ ಪ್ರತ್ಯೇಕವಾಗಿ ಮಾಡಬೇಕು. ಹಣ ಪಾವತಿ ಬಾಕಿ ಉಳಿಸಿಕೊಳ್ಳಬಾರದು ಎಂದು ಸೂಚಿಸಿರುವುದಾಗಿ ತಿಳಿಸಿದರು.

ರಾಜ್ಯದಲ್ಲಿ ವಿದ್ಯುತ್ ಕಡಿತವಾಗದಂತೆ ಕ್ರಮ ಕೈಗೊಳ್ಳಲಾಗುವುದು ಎಂದರು.

LEAVE A REPLY

Please enter your comment!
Please enter your name here