Home ಆರೋಗ್ಯ ರಾಜ್ಯದ ೨೪ ಜಿಲ್ಲೆಗಳಲ್ಲಿ ಯಾವುದೇ ಕೋವಿಡ್ ಸಾವು ಸಂಭವಿಸಿಲ್ಲ

ರಾಜ್ಯದ ೨೪ ಜಿಲ್ಲೆಗಳಲ್ಲಿ ಯಾವುದೇ ಕೋವಿಡ್ ಸಾವು ಸಂಭವಿಸಿಲ್ಲ

59
0

ಕೋವಿಡ್ ಚೇತರಿಕೆ ದರ ಶೇ ೯೫.೬೩ಕ್ಕೆ ಏರಿಕೆ

ಬೆಂಗಳೂರು:

ರಾಜ್ಯದಲ್ಲಿ ಕಳೆದ ೨೪ ಗಂಟೆಗಳಲ್ಲಿ ೧, ೧೫೭ ಕೋವಿಡ್ ಸೋಂಕು ಪ್ರಕರಣಗಳು ಪತ್ತೆಯಾಗಿದ್ದು, ಸೋಂಕಿನಲ್ಲಿ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿದೆ.

ಒಂದೇ ದಿನ ೨,೧೮೮ ಜನ ಗುಣಮುಖರಾಗಿದ್ದು, ಇದೊಂದು ಆಶಾದಾಯಕ ಬೆಳವಣಿಗೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಹೇಳಿದ್ದಾರೆ.

ರಾಜ್ಯದಲ್ಲಿ ಈವರೆಗೆ ೮,೨೫,೧೪೧ ಮಂದಿ ಗುಣಮುಖರಾಗಿದ್ದು, ಚೇತರಿಕೆ ದರ ಶೇಕಡ ೯೫.೬೩ ರಷ್ಟಿದೆ. ೨೪ ಜಿಲ್ಲೆಗಳಲ್ಲಿ ಯಾವುದೇ ಸಾವು ಸಂಭವಿಸಿಲ್ಲ. ರಾಜ್ಯದಲ್ಲಿ ಮರಣ ಪ್ರಮಾಣ ಶೇಕಡ ೧.೩೩ ರಷ್ಟಿದ ಎಂದು ಅವರು ತಿಳಿಸಿದ್ದಾರೆ.

Screenshot 846

LEAVE A REPLY

Please enter your comment!
Please enter your name here