Home ಆರೋಗ್ಯ ರಾಜ್ಯದಲ್ಲಿ ಇಲ್ಲಿಯವರೆಗೆ ಒಟ್ಟು 7 ಮಂದಿಗೆ ಕೊರೋನಾ ರೂಪಾಂತರ ವೈರಾಣು ಸೋಂಕು ದೃಢ; ಡಾ.ಸುಧಾಕರ್

ರಾಜ್ಯದಲ್ಲಿ ಇಲ್ಲಿಯವರೆಗೆ ಒಟ್ಟು 7 ಮಂದಿಗೆ ಕೊರೋನಾ ರೂಪಾಂತರ ವೈರಾಣು ಸೋಂಕು ದೃಢ; ಡಾ.ಸುಧಾಕರ್

59
0
Airport1

ಬೆಂಗಳೂರು:

ಬೆಂಗಳೂರಿನಲ್ಲಿ ಮೂವರು, ಶಿವಮೊಗ್ಗದಲ್ಲಿ ನಾಲ್ವರು ಸೇರಿದಂತೆ ಕರ್ನಾಟಕದಲ್ಲಿ ಇಲ್ಲಿಯವರೆಗೆ ಒಟ್ಟು 7 ಮಂದಿಗೆ ಕೊರೋನಾ ರೂಪಾಂತರ ಸೋಂಕು ದೃಢಪಟ್ಟಿದೆ ಎಂದು ವೈದ್ಯಕೀಯ ಶಿಕ್ಷಣ ಮತ್ತು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಸ್ಪಷ್ಟಪಡಿಸಿದ್ದಾರೆ.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತಾಡಿದ ಸುಧಾಕರ್, ಏಳು ಸೋಂಕಿತರಿಗೆ 39 ಮಂದಿ ಸಂಪರ್ಕ ಸಾಧಿಸಿದ್ದು ಮಾಹಿತಿ ಲಭ್ಯವಾಗಿದ್ದು, ಸಂಪರ್ಕಿತರಲ್ಲಿ ಯಾರಿಗೂ ಸೋಂಕು ದೃಢಪಟ್ಟಿಲ್ಲ. ಸಂಪರ್ಕಿತರನ್ನು ಸಾಂಸ್ಥಿಕವಾಗಿ ಕ್ವಾರೆಂಟೈನ್ ಮಾಡಲಾಗಿದೆ .ರೂಪಾಂತರ ವೈರಾಣು ಕುರಿತು ಕೇಂದ್ರ ಬಿಡುಗಡೆಗೊಳಿಸಿರುವ ಮಾರ್ಗಸೂಚಿಯನ್ನು ಎಲ್ಲರೂ ಕಡ್ಡಾಯವಾಗಿ ಪಾಲಿಸಬೇಕು.

Virus

ರೂಪಾಂತರ ವೈರಾಣು ಹರಡುವುದು ಬಹುಬೇಗವಾಗಿದ್ದು, ಇದನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಇಲಾಖೆ ಕಾರ್ಯಪ್ರವೃತ್ತವಾಗಿದೆ. 1614 ಜನರನ್ನು ಇಲ್ಲಿಯವರೆಗೆ ಪರೀಕ್ಷಿಸಲಾಗಿದ್ದು, ಸೋಂಕಿತರ ಮಾಹಿತಿಯನ್ನು ಕೇಂದ್ರಕ್ಕೆ ಕಳುಹಿಸಿಕೊಡಲಾಗಿದೆ. ರೂಪಾಂತರ ವೈರಾಣು ಇದು ಅಷ್ಟೇ. ಎರಡನೇ ಹಂತವಲ್ಲ. ಪತ್ತೆಯಾಗದ ಸಂಪರ್ಕಿತರನ್ನು ಸೋಂಕಿತರನ್ನು ನಿರಂತರವಾಗಿ ಶೋಧ ಮಾಡಲಾಗುತ್ತಿದೆ. ಕಳೆದ 2 ತಿಂಗಳಿನಿಂದ ರೂಪಾಂತರ ಸೋಂಕು ಕಂಡುಬಂದಿದೆ. ದಿನ ನಿತ್ಯ ಕೇಂದ್ರದ ಮಾರ್ಗಸೂಚಿಯನ್ನು ಪಾಲಿಸಲಾಗುತ್ತಿದೆ. 2 ತಿಂಗಳಲ್ಲಿ ಹೊರಗಿನಿಂದ ಬಂದವರೇ ಸೋಂಕು ಹರಡುವವರಾಗಿದ್ದು, ಇವರ ಮೇಲೆ ತೀವ್ರಾ ನಿಗಾ ಇಡಲಾಗಿದೆ ಎಂದರು. ಹೊಸ ವರ್ಷಾಚರಣೆಯನ್ನು ಸರಳವಾಗಿ ಆಚರಿಸಬೇಕೆಂದು ಸರ್ಕಾರ ತೀರ್ಮಾನಿಸಿ ಆದೇಶ ಹೊರಡಿಸಿದೆ. ಜನರು ಇದಕ್ಕೆ ಬದ್ಧರಾಗಿ ನಡೆದುಕೊಳ್ಳುವ ನಿರೀಕ್ಷೆಯಿದೆ ಎಂದು ಸುಧಾಕರ್ ಹೇಳಿದರು. UNI

LEAVE A REPLY

Please enter your comment!
Please enter your name here