Bengaluru’s 5 new municipal corporation offices: ಬೆಂಗಳೂರುದಲ್ಲಿ ಹೊಸ 5 ನಗರ ಪಾಲಿಕೆ ಕಚೇರಿಗಳ ಪಟ್ಟಿ ಇಲ್ಲಿದೆ
ಬೆಂಗಳೂರು:
ಪರಪ್ಪನ ಅಗ್ರಹಾರ ಗ್ರಾಮದ ನಿವಾಸಿಯೊಬ್ಬರು ಖರೀದಿಸಿದ್ದ ಫ್ಲ್ಯಾಟ್ ಒಂದಕ್ಕೆ ಖಾತಾ ಸಂಖ್ಯೆ ನೀಡಲು 4,000 ಲಂಚ ಪಡೆದ ಬಿಬಿಎಂಪಿ ಕೂಡ್ಲು ವಾರ್ಡ್ ಕಂದಾಯ ನಿರೀಕ್ಷಕ ಗಿರೀಶ್ ಎಂಬುವರನ್ನು ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಬುಧವಾರ ಬಂಧಿಸಿದೆ.
ಫ್ಲ್ಯಾಟ್ ಖರೀದಿದಾರರು ಖಾತೆ ಸಂಖ್ಯೆ ನೀಡುವಂತೆ ಕೋರಿ ವಾರ್ಡ್ ಸಂಖ್ಯೆ 191ರ ಕಚೇರಿಗೆ ಅರ್ಜಿ ಸಲ್ಲಿಸಿದ್ದರು. ಖಾತೆ ನೀಡಲು 4,000 ಲಂಚ ನೀಡುವಂತೆ ಕಂದಾಯ ನಿರೀಕ್ಷಕ ಬೇಡಿಕೆ ಇಟ್ಟಿದ್ದರು. ಈ ಕುರಿತು ಅರ್ಜಿದಾರರು ಎಸಿಬಿ ಬೆಂಗಳೂರು ನಗರ ಘಟಕಕ್ಕೆ ದೂರು ನೀಡಿದ್ದರು.
ಬುಧವಾರ ಅರ್ಜಿದಾರರಿಂದ ಲಂಚ ಪಡೆಯುತ್ತಿದ್ದಾಗಲೇ ದಾಳಿ ಮಾಡಿದ ಎಸಿಬಿ ಅಧಿಕಾರಿಗಳು ಗಿರೀಶ್ ಅವರನ್ನು ಬಂಧಿಸಿದ್ದಾರೆ ಎಂದು ತನಿಖಾ ಸಂಸ್ಥೆ ತಿಳಿಸಿದೆ.