Home ಅಪರಾಧ ಬಿಬಿಎಂಪಿ ಎಂಜಿನಿಯರ್ ಮನೆಗಳ ಮೇಲೆ ಎಸಿಬಿ ದಾಳಿ: ನಗದು, ಚಿನ್ನಾಭರಣ ವಶ

ಬಿಬಿಎಂಪಿ ಎಂಜಿನಿಯರ್ ಮನೆಗಳ ಮೇಲೆ ಎಸಿಬಿ ದಾಳಿ: ನಗದು, ಚಿನ್ನಾಭರಣ ವಶ

114
0

ಬೆಂಗಳೂರು:

ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಅಧಿಕಾರಿಗಳು ಶುಕ್ರವಾರ ಬಿಬಿಎಂಪಿ ಎಂಜಿನಿಯರ್ ಆಂಜನಪ್ಪ ಅವರ ಬೆಂಗಳೂರಿನ ಮನೆ ಮತ್ತು ಇತರ ಎರಡು ಕಡೆ ದಾಳಿ ನಡೆಸಿದ ಭಾರೀ ಮೊತ್ತದ ನಗದು, ಚಿನ್ನಾಭರಣ ಮತ್ತು ಆಸ್ತಿ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.

IMG 20210122 WA0007

ಡಿವೈ ಎಸ್ ಪಿ ಪರಮೇಶ್ವರ ನೇತೃತ್ವದಲ್ಲಿ ನಗರದಲ್ಲಿ ನಡೆದ ದಾಳಿಯಲ್ಲಿ 3 ಲಕ್ಷ ರೂ ನಗದು, ಎರಡು ಕಾರುಗಳನ್ನು ವಶಪಡಿಸಿಕೊಳ್ಳಲಾಗಿದೆ. ದಾವಣಗೆರೆಯಲ್ಲಿ ಎಸ್ ಪಿ ಜಯಪ್ರಕಾಶ್ ನೇತೃತ್ವದ ತಂಡ 9.79 ಲಕ್ಷ ರೂ. ನಗದು, ಏಳು ಭೂ ದಾಖಲೆಗಳು, ನಾಲ್ಕು ವಾಹನಗಳು ಮತ್ತು ಮನೆಗಳ ಆಸ್ತಿ ದಾಖಲೆಗಳನ್ನು ವಶಪಡಿಸಿಕೊಂಡಿದೆ.

ಅಂಜನಪ್ಪ ಆದಾಯದ ಮೂಲಕ್ಕಿಂತ ಹೆಚ್ಚಿನ ಸಂಪತ್ತು ಹೊಂದಿದ್ದಾರೆ ಎಂಬ ನಿರ್ದಿಷ್ಟ ಮಾಹಿತಿಯನ್ನಾಧರಿಸಿ ಈ ದಾಳಿ ನಡೆಸಲಾಗಿದೆ. ಈ ಕುರಿತಂತೆ ಪ್ರಕರಣಗಳನ್ನು ದಾಖಲಿಸಲಾಗಿದ್ದು, ತನಿಖೆ ನಡೆಯುತ್ತಿದೆ.

LEAVE A REPLY

Please enter your comment!
Please enter your name here